ದಕ್ಷಿಣ ಕನ್ನಡ | ಶಾಸಕ ಯು ಟಿ ಖಾದರ್‌ಗೆ ರಾಜ್ಯ ಮುಸ್ಲಿಂ ಲೇಖಕರ ಸಂಘದಿಂದ ಸನ್ಮಾನ

Dakshina kannada
  • ಯು ಟಿ ಖಾದರ್ ಕಾರ್ಯವೈಖರಿಗೆ ಮೆಚ್ಚುಗೆ
  • ‘ಅತ್ಯಂತ ಪ್ರಾಮಾಣಿಕ, ಸಿದ್ಧಾಂತ ಬದ್ಧ ವ್ಯಕ್ತಿ ಖಾದರ್'

ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕರಾಗಿ ರಾಜ್ಯದಲ್ಲಾಗುತ್ತಿರುವ ಘಟನೆಗಳಿಗೆ ನಿಷ್ಪಕ್ಷಪಾತವಾಗಿ ನ್ಯಾಯಕೊಡಿಸಲು ಮುಂದಾಗುವ ಶಾಸಕ ಯು ಟಿ ಖಾದರ್ ಕಾರ್ಯವೈಖರಿಯನ್ನು ಶ್ಲಾಘನೀಯ ಎಂದು ರಾಜ್ಯ ಮುಸ್ಲಿಂ ಲೇಖಕರ ಸಂಘವು ಸನ್ಮಾನ ಮಾಡಿ ಅಭಿನಂದಿಸಿದೆ.

"ಕೋಮು ರಾಜಕೀಯ ಸುಳಿಯಲ್ಲಿ ಹುದುಗಿ ಹೋಗಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅಂತಹ ಎಲ್ಲ ಕಂದಕಗಳಿಂದ ಅಂತರ ಕಾಯ್ದುಕೊಂಡು ಹಿಂದೂ-ಮುಸ್ಲಿಂ ಸಹಿತ ರಾಜ್ಯದ ಎಲ್ಲ ಜನತೆಯ ಜನಪ್ರತಿನಿಧಿಯಾಗಿ ಗುರುತಿಸಿಕೊಂಡು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ" ಎಂದು ಲೇಖಕರ ಸಂಘ ಶಾಸಕರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ

‘ಹಣಕ್ಕೆ ಹೆಣ ಬಾಯಿಬಿಡುವುದು’ ಎಂಬ ಗಾದೆಯಂತೆ ಸೂಟ್‌ಕೇಸು ನೋಡಿದರೆ ತಮ್ಮ ಪಕ್ಷವನ್ನೇ ಮರೆವ ಈ ಕಾಲದ ಶಾಸಕರ ಮುಂದೆ ಅತ್ಯಂತ ಪ್ರಾಮಾಣಿಕ, ಸಿದ್ಧಾಂತ ಬದ್ಧ ಮತ್ತು ಭ್ರಷ್ಟಾಚಾರರಹಿತ ವ್ಯಕ್ತಿಯಾಗಿ ಯು ಟಿ ಖಾದರ್ ನಿಂತಿದ್ದಾರೆ. ಜನಸಾಮಾನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುವ ಅವರು ಜನಸಾಮಾನ್ಯರ ಶಾಸಕರಾಗಿದ್ದಾರೆ ಎಂದು ಸಂಘವು ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಸುದ್ದಿ ಓದಿದ್ದೀರಾ?: ಹರ್ ಘರ್ ತಿರಂಗಾ | ಮಾತಿನಲ್ಲಿ ಸ್ವದೇಶಿ, ಅನುಷ್ಠಾನದಲ್ಲಿ ವಿದೇಶಿ ತಂತ್ರ: ಯು ಟಿ ಖಾದರ್ 

ತಮ್ಮ ಕೆಲಸಗಳ ಮೂಲಕ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಅವರ ಪ್ರಮಾಣಿಕತೆ , ಬದ್ದತೆ ಮತ್ತು ಜನತೆಗೆ ಕೊಡುವ ಸ್ಪಂದನೆಯೇ ಇಂದು ಅವರು ವಿಪಕ್ಷ ಉಪನಾಯಕನಾಗಲು ಕಾರಣ. ಅವರ ಕಾರ್ಯತತ್ಪರತೆಗೆ ಸಂದ ಗೌರವ ಎಂದು ಸ್ಮರಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಲೇಖಕರ ಸಂಘದ ಉಪಾಧ್ಯಕ್ಷ ಆಲಿ ಕುಂಞಿ, ಕೋಶಾಧಿಕಾರಿ ಮುಹಮ್ಮದ್ ಮುಹ್ಸಿನ್, ಕಾರ್ಯದರ್ಶಿ ಏ ಕೆ ಕುಕ್ಕಿಲ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಕಮ್ಮರಡಿ, ಸಂಘದ ಸದಸ್ಯರಾದ ಶೌಕತ್ ಅಲಿ, ಹುಸೈನ್ ಕಾಟಿಪಳ್ಳ, ಸಲೀಮ್ ಬೋಳಂಗಡಿ ಮತ್ತು ಸಂಘದ ಹಿತೈಷಿ ಮುನ್ನ ಕಮ್ಮರಡಿ ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್