ದಕ್ಷಿಣ ಕನ್ನಡ | ರಸ್ತೆ ಗುಂಡಿಗೆ ಸ್ನೇಹಿತ ಬಲಿ; ಆಕ್ರೋಶಗೊಂಡ ಯುವಕನ ಏಕಾಂಗಿ ಪ್ರತಿಭಟನೆ

mangalore
  • ‘ರೋಡ್‌ ಸುರಕ್ಷಾ ಬಂಧನ್’ ಫಲಕ ಹಿಡಿದು ಪ್ರತಿಭಟನೆ
  • ಆಗಸ್ಟ್‌ 5ರಂದು ಯುವಕನ ಸ್ನೇಹಿತ ಅತೀಶ್‌ನ ಸಾವು

ರಸ್ತೆ ಗುಂಡಿಯಿಂದ ಸ್ನೇಹಿತ ಪ್ರಾಣ ಕಳೆದುಕೊಂಡ ಹಿನ್ನಲೆಯಲ್ಲಿ ಯುವಕನೋರ್ವ ‘ರೋಡ್‌ ಸುರಕ್ಷಾ ಬಂಧನ್’ ಎಂಬ ಫಲಕ ಹಿಡಿದು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.  

ಆಗಸ್ಟ್‌ 5ರಂದು ಅತೀಶ್‌ ಎಂಬ ಯುವಕ ಬಿಕರ್ನಕಟ್ಟೆ-ಕಂಡೆಟ್ಟು ಕ್ರಾಸ್‌ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಾವನ್ನಪ್ಪಿದ್ದರು. ಆತನ ಸಾವಿನಿಂದಾಗಿ ಲಿಖಿತ್‌ ರೈ ಎಂಬ ಯುವಕ ಆಕ್ರೋಶಗೊಂಡಿದ್ದು, ತನ್ನ ಸ್ನೇಹಿತನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣವೆಂದು ಪಾಲಿಕೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. 

"ನಗರದಲ್ಲಿ ರಸ್ತೆ ಗುಂಡಿಗೆ ಬಲಿಯಾದವರಲ್ಲಿ ತನ್ನ ಸ್ನೇಹಿತನೇ ಮೊದಲಿಗನಲ್ಲ, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ" ಎಂದು ಲಿಖಿತ್ ರೈ ಆರೋಪಿಸಿದ್ದಾರೆ.  

ಈ ಸುದ್ದಿ ಓದಿದ್ದೀರಾ?: ರಾಯಚೂರು | ರಾಷ್ಟ್ರಧ್ವಜಕ್ಕೆ ಅಪಮಾನ: ಕ್ಷಮೆ ಯಾಚಿಸಿದ ಬಿಜೆಪಿ ಶಾಸಕ

“ರಸ್ತೆ ಗುಂಡಿಯಿಂದ ನಾನು ನನ್ನ ಸ್ನೇಹಿತನನ್ನು ಕಳೆದುಕೊಂಡೆ. ಅವನನ್ನು ಪುನಃ ಬದುಕಿಸಲು ನನ್ನಿಂದ ಸಾಧ್ಯವಿಲ್ಲ. ಆದರೆ, ರಸ್ತೆಗುಂಡಿಗಳಿಂದ ಇತರರು ಪ್ರಾಣ ಕಳೆದುಕೊಳ್ಳಬಾರದು. ಇಂತಹ ಬಲಿಗಳು ಇಲ್ಲಿಗೆ ನಿಲ್ಲಬೇಕು“ ಎಂದು ಲಿಖಿತ್ ರೈ ಹೇಳಿದ್ದಾರೆ.

"ನನ್ನ ಸ್ನೇಹಿತನ ಸಾವಿಗೆ ಪರೋಕ್ಷವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕಾರಣವಾಗಿದೆ. ಅದಕ್ಕಾಗಿ ಎನ್‌ಎಚ್‌ಎಐ ವಿರುದ್ದ ದೂರು ದಾಖಲಿಸುತ್ತೇನೆ" ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್