ಮೊದಲ ದಿನ ₹11 ಕೋಟಿ ಗಳಿಸಿದ ಲಾಲ್ ಸಿಂಗ್ ಚಡ್ಡಾ

aamir khan
  • ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದ ಚಡ್ಡಾ
  • ʼರಕ್ಷಾ ಬಂಧನʼದ್ದೂ ಒಂದಂಕಿಯ ಗಳಿಕೆ

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಾದ ಲಾಲ್ ಸಿಂಗ್ ಚಡ್ಡಾ ಮತ್ತು ರಕ್ಷಾಬಂಧನ್ ಆಗಸ್ಟ್ 11ರಂದು ತೆರೆಗೆ ಬಂದಿವೆ. ಎರಡೂ ಸ್ಟಾರ್‌ ಚಿತ್ರಗಳಿಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಳಿಕೆ ವಿಚಾರದಲ್ಲೂ ಹಿನ್ನಡೆ ಅನುಭವಿಸಿವೆ.

ಆಮಿರ್ ಖಾನ್ ನಟನೆಯಲ್ಲಿ ಮೂಡಿ ಬಂದಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ದೇಶಾದ್ಯಂತ ಮೊದಲ ದಿನ 11 ಕೋಟಿ 63 ಲಕ್ಷ ರೂಪಾಯಿಗಳನ್ನು ಕಲೆ ಹಾಕಿದೆ. ಆಮಿರ್ ಖಾನ್ ಅವರ ಈ ಹಿಂದಿನ ಸಿನಿಮಾಗಳ ಗಳಿಕೆಗೆ ಹೋಲಿಸಿಕೊಂಡರೆ ಲಾಲ್‌ ಸಿಂಗ್‌ ಚಡ್ಡಾ ಕಲೆ ಹಾಕಿರುವುದು ಕಡಿಮೆ ಮೊತ್ತ ಎನ್ನಲಾಗಿದೆ. 2018ರಲ್ಲಿ ಆಮಿರ್‌ ಖಾನ್‌ ಮುಖ್ಯಭೂಮಿಕೆಯಲ್ಲಿ ತೆರೆಗೆ ಬಂದಿದ್ದ 'ಥಗ್ಸ್‌ ಆಫ್‌ ಹಿಂದೂಸ್ತಾನ್‌' ಸಿನಿಮಾ ಮೊದಲ ದಿನ ₹52 ಕೋಟಿ, ದಂಗಲ್‌ ₹29 ಕೋಟಿ ಮತ್ತು ಪಿಕೆ ₹26 ಕೋಟಿಗಳನ್ನು ಕಲೆ ಹಾಕಿದ್ದವು. ಈ ಸಿನಿಮಾಗಳಿಗೆ ಹೋಲಿಸಿಕೊಂಡರೆ ಲಾಲ್ ಸಿಂಗ್ ಚಡ್ಡಾ ಗಳಿಕೆ ತೀರ ಕಡಿಮೆ.

ಈ ಸುದ್ದಿ ಓದಿದ್ದೀರಾ? ಈ ಸಿನಿಮಾ | ಸಂಪ್ರದಾಯಗಳೇ ಕೊರಳಿಗೆ ಉರುಳಾದಾಗ ʻರಕ್ಷಾ ಬಂಧನʼವೂ ನೆಪ

ಅಕ್ಷಯ್ ಕುಮಾರ್ ನಟನೆಯಫ್ಯಾಮಿಲಿ ಎಂಟರ್‌ಟೈನರ್‌ ʼರಕ್ಷಾ ಬಂದನ್ʼ ಚಿತ್ರ ಮೊದಲ ದಿನ ₹8 ಕೋಟಿ 20 ಲಕ್ಷ ಗಳಿಸಿದೆ. ಅಕ್ಷಯ್ ಕುಮಾರ್ ಅವರ 'ಬಚ್ಚನ್ ಪಾಂಡೆ', 'ಸಾಮ್ರಾಟ್ ಪೃಥ್ವಿರಾಜ್' ಚಿತ್ರಗಳ ಮೊದಲ ದಿನದ ಗಳಿಕೆಗೆ ಹೋಲಿಸಿಕೊಂಡರೆ 'ರಕ್ಷಾ ಬಂಧನ್' ಕಲೆ ಹಾಕಿರುವುದು ಕೂಡ ಅತಿ ಕಡಿಮೆ ಮೊತ್ತ ಎನ್ನಲಾಗುತ್ತಿದೆ. 'ಬಚ್ಚನ್‌ ಪಾಂಡೆ' ಮೊದಲ ದಿನ ₹13.25 ಕೋಟಿ ಮತ್ತು 'ಸಾಮ್ರಾಟ್ ಪೃಥ್ವಿರಾಜ್' ₹10.7 ಕೋಟಿ ಗಳಿಸಿದ್ದವು. 

ನಿಮಗೆ ಏನು ಅನ್ನಿಸ್ತು?
0 ವೋಟ್