ನಟ ಅರ್ಜುನ್‌ ಸರ್ಜಾ ತಾಯಿ ಲಕ್ಷ್ಮೀದೇವಿ ನಿಧನ

Arjun-Sarja
  • ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮೀದೇವಿ
  • ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ

ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ ಶನಿವಾರ (ಜುಲೈ 23) ನಿಧನರಾಗಿದ್ದಾರೆ. 83 ವರ್ಷದ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ.

ವಯೋಸಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು ಕಳೆದ 22 ದಿನಗಳಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಚೆನ್ನೈನಲ್ಲಿ ವಾಸವಿರುವ ಅರ್ಜುನ್‌ ಸರ್ಜಾ ತಾಯಿಯ ಅನಾರೋಗ್ಯದ ಹಿನ್ನೆಲೆ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಹೈದರಾಬಾದ್‌ನಲ್ಲಿ ಮಾರ್ಟಿನ್‌ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ನಟ ಧ್ರುವ ಸರ್ಜಾ ಅಜ್ಜಿಯ ಸಾವಿನ ಸುದ್ದಿ ಕೇಳಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರು ಮತ್ತು ಆಪ್ತರು ಅಂತಿಮ ದರ್ಶನ ಪಡೆದ ಬಳಿಕ ಭಾನುವಾರ ಅಂತ್ಯ ಸಂಸ್ಕಾರ ನೆರವೇರಲಿದೆ.

ಈ ಸುದ್ದಿ ಓದಿದ್ದೀರಾ? 68ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಘೋಷಣೆ | ತಮಿಳು ನಟ ಸೂರ್ಯಗೆ ಒಲಿದ ರಾಷ್ಟ್ರಪ್ರಶಸ್ತಿ

ಲಕ್ಷ್ಮೀ ದೇವಿ ಕನ್ನಡದ ಹಿರಿಯ ನಟ ಶಕ್ತಿ ಪ್ರಸಾದ್‌ ಅವರ ಪತ್ನಿ. ನಟ ಅರ್ಜುನ್‌ ಸರ್ಜಾ, ಕಿಶೋರ್‌ ಸರ್ಜಾ ಮತ್ತು ಅಮ್ಮಾಜಿ, ಶಕ್ತಿ ಪ್ರಸಾದ್‌-ಲಕ್ಷ್ಮೀ ದೇವಿ ದಂಪತಿಯ ಮೂವರು ಮಕ್ಕಳು. ದಿವಂಗತ ನಟ ಚಿರಂಜೀವಿ ಸರ್ಜಾ, ನಟ ಧ್ರುವ ಸರ್ಜಾ ಮತ್ತು ನಟಿ ಐಶ್ವರ್ಯಾ ಅರ್ಜುನ್‌ ಇವರ ಮೊಮ್ಮಕ್ಕಳು.

ನಿಮಗೆ ಏನು ಅನ್ನಿಸ್ತು?
0 ವೋಟ್