ಘೋಷಣೆಯಾಯ್ತು ಡಾಲಿ ಧನಂಜಯ್‌ 26ನೇ ಸಿನಿಮಾ

dolly dhananjaya

ಕನ್ನಡದ ಖ್ಯಾತ ನಟ ಡಾಲಿ ಧನಂಜಯ ಅವರ 26ನೇ ಚಿತ್ರ ಘೋಷಣೆಯಾಗಿದೆ. ಈ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲು ಸಿದ್ಧವಾಗುತ್ತಿರುವುದು ವಿಶೇಷ.

ಧನಂಜಯ ಮುಖ್ಯಭೂಮಿಕೆ ನಿಭಾಯಿಸಿರುವ ʼಮಾನ್ಸೂನ್‌ ರಾಗʼ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅವರು ನಟನಾಗಿ ಮತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʼತೋತಾಪುರಿʼ, ʼಹೆಡ್ ಬುಷ್ʼ, ʼಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡʼ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇದರ ಜೊತೆಗೆ ಹೊಯ್ಸಳ, ತೆಲುಗಿನ ಪುಷ್ಪ 2 ಚಿತ್ರಗಳಲ್ಲಿಯೂ ಧನಂಜಯ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಹೊಸ ಸಿನಿಮಾವೊಂದು ಘೋಷಣೆಯಾಗಿದೆ.

ಪುಷ್ಪ ಸಿನಿಮಾ ಮೂಲಕ ಟಾಲಿವುಡ್‌ ಪ್ರವೇಶಿಸಿದ್ದ ಧನಂಜಯ ಈಗ ಬಹುಭಾಷಾ ನಟ. ಹೀಗಾಗಿ ದಕ್ಷಿಣ ಸಿನಿರಂಗದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅವರು ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತಮ್ಮ 26ನೇ ಚಿತ್ರಕ್ಕೆ ಕೈ ಹಾಕಿದ್ದಾರೆ.

ಈ ಹಿಂದೆ ತೆಲುಗಿನಲ್ಲಿ ʼಪೆಂಗ್ವಿನ್ʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಈಶ್ವರ್ ಕಾರ್ತಿಕ್, ಧನಂಜಯ ಅವರ 26ನೇ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಕ್ರೈಂ ಕಥಾಹಂದರವುಳ್ಳ ಈ ಚಿತ್ರದಲ್ಲಿ ತೆಲುಗಿನ ಜನಪ್ರಿಯ ನಟ ಸತ್ಯದೇವ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಸತ್ಯದೇವ್‌ ಅವರಿಗೂ ಇದು 26ನೇ ಚಿತ್ರ.

ಈ ಸುದ್ದಿ ಓದಿದ್ದೀರಾ? ಗೆಲುವಿನ ಬೆನ್ನಲ್ಲೇ ʻಬ್ರಹ್ಮಾಸ್ತ್ರ ಭಾಗ 2ʼಗೆ ಸಜ್ಜಾದ ಅಯಾನ್ ಮುಖರ್ಜಿ

ಈ ಚಿತ್ರವನ್ನು ʼಓಲ್ಡ್‌ ಟೌನ್ ಪಿಕ್ಚರ್ಸ್ʼ ಬ್ಯಾನರ್‌ ಅಡಿಯಲ್ಲಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. 'ಟಗರು' ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಲಿದ್ದು, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣದಲ್ಲಿ ಚಿತ್ರ ಮೂಡಿಬರಲಿದೆ. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180