ಅಭಿಮಾನಿಯ 15 ವರ್ಷದ ಬಯಕೆ ಈಡೇರಿಸಿದ ಶಿವಣ್ಣ

shivanna
  • ಶಿವಣ್ಣನಿಗೆ ಚಹಾ ಕುಡಿಸುವ ಬಯಕೆ ಹೊಂದಿದ್ದ ಮಂಜು
  • ಅಭಿಮಾನಿ ಹೋಟೆಲ್‌ಗೆ ತೆರಳಿ ಸಾಮಾನ್ಯರಂತೆ ಚಹಾ ಸವಿದ ಶಿವಣ್ಣ

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ 'ಬೈರಾಗಿ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಿಸುವ ಮೂಲಕ ಶಿವಣ್ಣ 'ಬೈರಾಗಿ' ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಹೀಗೆ ಚಾಮರಾಜನಗರದ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿದ್ದ ಅವರು ತಮ್ಮ ಅಪ್ಪಟ ಅಭಿಮಾನಿಯ ಬಹುದಿನಗಳ ಬಯಕೆಯನ್ನು ಈಡೇರಿಸಿದ್ದಾರೆ.

ಚಾಮರಾಜನಗರದಲ್ಲಿ ಚಹಾ ಅಂಗಡಿ ನಡೆಸುತ್ತಿರುವ ಮಂಜು ಎನ್ನುವವರು ಶಿವಣ್ಣನ ಅಪ್ಪಟ ಅಭಿಮಾನಿ. ಕಳೆದ 15 ವರ್ಷಗಳಿಂದ ಚಹಾ ಅಂಗಡಿ ನಡೆಸುತ್ತಿದ್ದಾರೆ. ಒಮ್ಮೆಯಾದರೂ ತಮ್ಮ ಕೈಯಾರ ಮಾಡಿದ ಚಹಾವನ್ನು ಶಿವಣ್ಣನಿಗೆ ಕುಡಿಸಬೇಕು ಎಂಬ ಬಯಕೆ ಹೊಂದಿದ್ದರು. ಚಹಾ ಕುಡಿಯಲು ತಮ್ಮ ಹೋಟೆಲ್‌ಗೆ ಬರುವಂತೆ ಹಲವು ಬಾರಿ ಶಿವಣ್ಣನನ್ನು ಆಹ್ವಾನಿಸಿದ್ದರು. ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಶಿವಣ್ಣನಿಗೂ ಅಭಿಮಾನಿಯ ಹೋಟೆಲ್‌ಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ.

ಈ ಸುದ್ದಿ ಓದಿದ್ದೀರಾ? ವೆಬ್‌ ಸರಣಿ ರೂಪ ಪಡೆದ ಕುಖ್ಯಾತ ತಮಿಳ್‌ ರಾಕರ್ಸ್‌ ಕತೆ

ಇತ್ತೀಚೆಗೆ ಬೈರಾಗಿ ಚಿತ್ರದ ಪ್ರದರ್ಶನದಲ್ಲಿ ಭಾಗಿಯಾಗಲು ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಶಿವಣ್ಣ ಅಭಿಮಾನಿಗಳ ಜೊತೆಗೆ ಕೂತು ಸಿನಿಮಾ ವೀಕ್ಷಣೆ ಮಾಡಿದ್ದಲ್ಲದೆ, ಮಂಜು ಅವರ ಹೋಟೆಲ್‌ಗೂ ಭೇಟಿ ನೀಡಿ ಸಾಮಾನ್ಯರಂತೆ ಅಭಿಮಾನಿ ಮಾಡಿಕೊಟ್ಟ ಚಹಾವನ್ನು ಸವಿದಿದ್ದಾರೆ. ಈ ಮೂಲಕ ಮಂಜು ಅವರ 15 ವರ್ಷಗಳ ಬಯಕೆಯನ್ನು ಈಡೇರಿಸಿದ್ದಾರೆ.

ಶಿವಣ್ಣ ಮೂಖ್ಯಭೂಮಿಕೆಯಲ್ಲಿ ನಟಿಸಿರುವ, ವಿಜಯ್‌ ಮಿಲ್ಟನ್‌ ನಿರ್ದೇಶನದ ಬೈರಾಗಿ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ನಟ ಡಾಲಿ ಧನಂಜಯ ಮತ್ತು ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್