ನಟ ಸೂರ್ಯ ಮತ್ತು ನಟಿ ಕಾಜೋಲ್‌ಗೆ ಭಾರತೀಯ ಆಸ್ಕರ್ ಆಯ್ಕೆ ಸಮಿತಿಯಿಂದ ಆಹ್ವಾನ

  • ಭಾರತದ ಆರು ಮಂದಿಗೆ 397 ಸದಸ್ಯರ ಆಸ್ಕರ್‍‌ ಆಯ್ಕೆ ಸಮಿತಿ ಆಹ್ವಾನ
  • ಸಮಿತಿಯಲ್ಲಿ ಶೇ.44 ರಷ್ಟು ಮಹಿಳೆಯರಿಗೆ ಅವಕಾಶ

ತಮಿಳು ನಟ, ನಿರ್ಮಾಪಕ ಸೂರ್ಯ ಮತ್ತು ಬಾಲಿವುಡ್ ಖ್ಯಾತ ನಟಿ ಕಾಜೋಲ್ ಅಗರ್‍‌ವಾಲ್‌ ಅವರು ಸೇರಿದಂತೆ ಭಾರತದ ಒಟ್ಟು ಆರು ಮಂದಿಯನ್ನು ಭಾರತೀಯ ಆಸ್ಕರ್ ಆಯ್ಕೆ ಸಮಿತಿಯು ಆಹ್ವಾನ ನೀಡಿದೆ. 

ಜೂನ್ 22ರಂದು ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್’ ಆಸ್ಕರ್ ಸಮಿತಿಗೆ 397 ಕಲಾವಿದರು ಮತ್ತು ಕಾರ್ಯನಿರ್ವಾಹಕರನ್ನು ಆಹ್ವಾನಿಸಲಾಗಿದೆ.  ಸೂರ್ಯ, ಕಾಜೋಲ್ ಅಲ್ಲದೆ, ಚಿತ್ರಕತೆ ಬರಹಾರ್ತಿ ರೀಮಾ ಕಾಗ್ತಿ, ಸಿನಿಮಾ ಕರ್ಮಿಗಳಾದ ಸುಶ್ಮಿತಾ ಘೋಷ್, ರಿಂತು ಥಾಮಸ್, ಪಾನ್ ನಳಿನ್ ಅವರೂ ಸಹ ಆಸ್ಕರ್ ಆಯ್ಕೆ ಸಮಿತಿ ಸದಸ್ಯರಾಗಲಿದ್ದಾರೆ.

397 ಸದಸ್ಯರಲ್ಲಿ 53 ಮಂದಿ ಕಲಾವಿದರು ಅಮೆರಿಕದ ಹೊರಗಿನವರಾಗಿದ್ದಾರೆ. ಅವರಲ್ಲಿ ಆರು ಮಂದಿ ಭಾರತೀಯರು ಎಂಬುದು ವಿಶೇಷವಾಗಿದೆ. ಜೊತೆಗೆ ಶೇ.44ರಷ್ಟು ಮಹಿಳೆಯರಿಗೆ ಆಹ್ವಾನ ಮಾಡಲಾಗಿದೆ. ಜೊತೆಗೆ ಆಹ್ವಾನಿತರಲ್ಲಿ ಶೇ.37 ರಷ್ಟು ನಿರ್ಲಕ್ಷಿತ ಸಮುದಾಯದವರು.  ಆಸ್ಕರ್ ಚಿತ್ರ ಪ್ರದರ್ಶನಕ್ಕೆ ವಿವಿಧ ಭಾಷೆಯ, ಸಂಸ್ಕೃತಿಯ ಸಿನಿಮಾಗಳು ಬರುತ್ತವೆ. ಅಲ್ಲಿ ಆ ಚಿತ್ರಗಳನ್ನು ಸರಿಯಾಗಿ ಆಯ್ಕೆ ಮಾಡಲು ವಿವಿಧ ಭಾಷೆ ಮತ್ತು ಹಿನ್ನೆಲೆಯವರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿದರೆ, ಅರ್ಹರಿಗೆ ಆಸ್ಕರ್ ಪ್ರಶಸ್ತಿ ನೀಡಬಹುದು ಎಂದು ಆಸ್ಕರ್ ಸಂಸ್ಥೆ ಅನಿಸಿಕೆ.   

ಇದನ್ನು ಓದಿದ್ದೀರಾ? ಹಾಸನದಿಂದ ಬಾಲಿವುಡ್‌ಗೆ ಯುಟರ್ನ್ ತೆಗೆದುಕೊಂಡ ಕನ್ನಡ ಕಲಾವಿದ ಕೃಷ್ಣ ಹೆಬ್ಬಾಲೆ ಸಿನಿ ಪಯಣ

ಈ ಮೂಲಕ ಆಸ್ಕರ್ ಆಯೋಜಕರ ಸದಸ್ಯತ್ವ ಸಮಿತಿಗೆ ಆಹ್ವಾನಿಸಲ್ಪಟ್ಟ ಮೊದಲ ತಮಿಳು ನಟ ಎಂಬ ಹೆಗ್ಗಳಿಕೆಗೆ ಸೂರ್ಯ ಅವರು ಪಾತ್ರರಾಗಿದ್ದಾರೆ. ಸೂರ್ಯ ಅವರು ಅಭಿನಯಿಸಿದ 'ಜೈ ಭೀಮ್' ಸಿನಿಮಾ ಆಸ್ಕರ್‍‌ನ ಮೊದಲ ಹಂತದಲ್ಲಿ ಆಯ್ಕೆಯಾಗಿತ್ತು. ಆದರೆ, ಅಂತಿಮವಾಗಿ ಆ ಚಿತ್ರ ಆಯ್ಕೆಯಾಗಲಿಲ್ಲ. 'ಜೈ ಭೀಮ್' ಸಿನಿಮಾವು ಸರಿಯಾದ ವೇದಿಕೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ ಎಂಬುದು ಇದಕ್ಕೆ ಕಾರಣವಾಗಿತ್ತು. ಸದ್ಯ ಸೂರ್ಯ ಅವರು ಆಸ್ಕರ್ ಸಮಿತಿಗೆ ಸದಸ್ಯರಾಗಿ ಆಯ್ಕೆ ಆಗಿದ್ದು, ಆಸ್ಕರ್ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಅವಕಾಶ ಸಿಗಲಿದೆ.

ಜೊತೆಗೆ ಇನ್ನು ನಟಿ ಕಾಜೊಲ್ ಅವರು ಆಯ್ಕೆ ಸಮಿತಿಯ ಸದಸ್ಯೆಯಾಗಲಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಅನುಭವವಿದೆ. ನಟಿ ಕಾಜೋಲ್‌ಗೆ ಆಸ್ಕರ್‍‌ನಿಂದ ಆಹ್ವಾನ ಬಂದಿರುವುದರ ಬಗ್ಗೆ ಅಜಯ್ ದೇವಗನ್ ಟ್ವೀಟ್ ಮಾಡಿ, “ನಿನ್ನ ಬಗ್ಗೆ ಹೆಮ್ಮೆಯಿದೆ” ಎಂದಿದ್ದಾರೆ. ಜೊತೆಗೆ ಆಹ್ವಾನ ಸ್ವೀಕರಿಸಿದ ಇತರರಿಗೂ ಅಭಿನಂದನೆ ಸಲ್ಲಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್