ಕಾಶಿಯಲ್ಲಿ ಕನ್ನಡ ಹಬ್ಬ | ನಟಿ ಪ್ರೇಮಾಗೆ 'ಗಂಧದಗುಡಿ ಪ್ರಶಸ್ತಿ' ; ಶಿಲ್ಪಾ ಶೆಟ್ಟಿ, ತಾರಾ ಭಾಗಿ

  • ಕಾಶಿಯಲ್ಲಿ ಕನ್ನಡ ಡಿಂಡಿಂಮೋತ್ಸವದಲ್ಲಿ 5000 ಕನ್ನಡಿಗರು ಭಾಗಿ
  • ಮೊದಲ ಬಾರಿಗೆ ಉತ್ತರ ಪ್ರದೇಶದ ಕಾಶಿಯಲ್ಲಿ ನಡೆದ ಕನ್ನಡ ಹಬ್ಬ

ಉತ್ತರ ಪ್ರದೇಶದ ಕಾಶಿಯಲ್ಲಿ ನಡೆದ ಕನ್ನಡ ಡಿಂಡಿಂಮೋತ್ಸವದಲ್ಲಿ ಕನ್ನಡದ ಹೆಸರಾಂತ ನಟಿ ಪ್ರೇಮಾ ಅವರಿಗೆ 'ಶ್ರೀ ಗಂಧದಗುಡಿ' ಪ್ರಶಸ್ತಿ ಪ್ರದಾನಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾಶಿ ಗಂಗಾನದಿ ತೀರದಲ್ಲಿರುವ ಚೌಕಿ ಘಾಟ್‌ನಲ್ಲಿ ಇಂದು ‘ಕನ್ನಡ ಡಿಂಡಿಮೋತ್ಸವ’ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ 'ಶ್ರೀ ಗಂಧದಗುಡಿ' ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿತ್ತು.

Eedina App

ಚಲನಚಿತ್ರ ನಟಿ ಪ್ರೇಮಾ ಮತ್ತು ಪತ್ರಕರ್ತ ಆನಂದ್ ಬುರುಲಿರವರಿಗೆ 'ಶ್ರೀ ಗಂಧದಗುಡಿ ಪ್ರಶಸ್ತಿ' ಪ್ರದಾನ ಮಾಡಲಾಗಿದೆ.

ಚಲನಚಿತ್ರ ನಟಿ ಶಿಲ್ಪಾ ಶೆಟ್ಟಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ, ಖ್ಯಾತ ಹಿನ್ನೆಲೆ ಗಾಯಕಿ ರಮ್ಯಾ ವಶಿಷ್ಠ, ಚಲನಚಿತ್ರ ನಟ ಧನ್ವೀರ್ ಗೌಡ ಸೇರಿದಂತೆ 5,000 ಕನ್ನಡಿಗರು ಕನ್ನಡ ಡಿಂಡಿಂಮೋತ್ಸವದಲ್ಲಿ ಭಾಗಿಯಾಗಿದ್ದರು.

AV Eye Hospital ad

ನಟಿ ಪ್ರೇಮಾ ಮಾತನಾಡಿ “ಇದೇ ಮೊದಲ ಬಾರಿಗೆ ಕಾಶಿ ನಗರಕ್ಕೆ ಬಂದಿದ್ದೇನೆ. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು. ರಾಜ್ಯೋತ್ಸವ ಕಾರ್ಯಕ್ರಮವನ್ನು ರಾಷ್ಟ್ರ, ಅಂತಾರಾಷ್ಟ್ರೀಯಮಟ್ಟದಲ್ಲಿ ನಡೆಸಬೇಕು” ಎಂದು ಹೇಳಿದ್ದಾರೆ.

“ಕರ್ನಾಟಕ ನನ್ನ ಮಾತೃ ಭೂಮಿ. ಕನ್ನಡ ನೆಲ ನನ್ನ ಅಚ್ಚುಮೆಚ್ಚಿನ ನಾಡು. ಕನ್ನಡಿಗರು ಆಯೋಜಿಸುವ ಪ್ರತಿ ಕಾರ್ಯಕ್ರಮಕ್ಕೆ ನಾನು ಬರುತ್ತೇನೆ” ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಡಿ. 30ಕ್ಕೆ ಕನ್ನಡ- ತೆಲುಗಿನಲ್ಲಿ ಡಾಲಿ ಧನಂಜಯ್ ನಟನೆಯ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'

ಹಿರಿಯ ನಟಿ ತಾರಾ ಮಾತನಾಡಿ, “ಹೊರ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಿರುವುದು ಕನ್ನಡಗರಿಗೆ ಹೆಮ್ಮೆಯ ವಿಷಯ. ಕನ್ನಡ ಭಾಷೆಗೆ 2,500 ವರ್ಷ ಇತಿಹಾಸವಿದೆ. ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬರು ಕನ್ನಡ ಭಾಷೆ ಬಳಸಬೇಕು. ಕನ್ನಡ ಭಾಷೆ ಉಳಿಸಿ, ಬೆಳೆಸಲು ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಪ್ರತಿಯೊಬ್ಬ ಕನ್ನಡಿಗ ಹೋರಾಡಬೇಕು” ಎಂದು ಹೇಳಿದ್ದಾರೆ.

ಇತಿಹಾಸದಲ್ಲಿ ಮೊದಲನೆಯ ಬಾರಿಗೆ ಗಂಗಾ ತೀರದಲ್ಲಿ ಕನ್ನಡ ರಾಜ್ಯೋತ್ಸವ ನಡೆಯುತ್ತಿದ್ದು, ಹೊರನಾಡ ಕನ್ನಡಿಗರ ಜೊತೆಯಲ್ಲಿ ಕನ್ನಡ ಡಿಂಡಿಮೋತ್ಸವ ಅಚರಿಸಬೇಕು ಎಂದು ಕಾಶಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕನ್ನಡ ಭಾಷೆ ಉಳಿಸಿ, ಬೆಳಸಲು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ರಂಗ ಕಲಾವಿದರು, ಚಲನಚಿತ್ರ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವುದು ಸಂಘದ ಉದ್ದೇಶವಾಗಿದೆ. ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app