ಕುತೂಹಲ ಮೂಡಿಸಿದ ಡಾರ್ಲಿಂಗ್ಸ್‌ ಟೀಸರ್‌; ಬಿಡುಗಡೆಗೆ ಸಜ್ಜಾದ ಆಲಿಯಾ ನಿರ್ಮಾಣದ ಚೊಚ್ಚಲ ಚಿತ್ರ

darlings

ಬಾಲಿವುಡ್‌ ನಟಿ ಆಲಿಯಾ ಭಟ್‌ ಅಭಿನಯದ ಬಹುನಿರೀಕ್ಷಿತ ಡಾರ್ಲಿಂಗ್ಸ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. 

ಒಂದೂವರೆ ನಿಮಿಷಗಳ ಟೀಸರ್‌ನಲ್ಲಿ ಕಪ್ಪೆ ಮತ್ತು ಚೇಳಿನ ಕತೆಯನ್ನು ಉದಾಹರಣೆಯಾಗಿಟ್ಟು ಪಾತ್ರಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕಿ ಜಸ್ಮೀತ್‌ ಕೆ ರೀನ್‌.

Eedina App

ಆಕಸ್ಮಿಕವಾಗಿ ಪರಿಚಯವಾಗುವ ಗೌರವ್‌ನೊಂದಿಗೆ ಪ್ರೀತಿಯಲ್ಲಿ ಬೀಳುವ ಕಥಾನಾಯಕಿ ಬದ್ರು ಖುರೇಷಿ, ತಾಯಿಯ ಒಪ್ಪಿಗೆಯೊಂದಿಗೆ ಆತನನ್ನು ಮದುವೆಯಾಗುತ್ತಾಳೆ. ಪ್ರೀತಿಯ ಆರಂಭದ ದಿನಗಳಿಂದಲೂ ಬದ್ರು ನಡತೆಯ ಬಗ್ಗೆ ಅನುಮಾನ ಪಡುವ ಗೌರವ್‌, ಮದುವೆಯ ನಂತರದ ದಿನಗಳಲ್ಲೂ ಅದೇ ವರಸೆಯನ್ನು ಮುಂದುವರೆಸುತ್ತಾನೆ. ತನ್ನ ಹೆಂಡತಿ ಆಕೆಯ ಆಪ್ತ ಸ್ನೇಹಿತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸುತ್ತಾನೆ. ಅನುಮಾನದಲ್ಲೇ ನಡೆಯುವ ಇವರಿಬ್ಬರ ಸಂಸಾರದ ಕತೆ ಮುಂದೆ ಏನಾಯ್ತು ಎಂಬ ಪ್ರಶ್ನೆಯಂತೂ ನೋಡುಗರನ್ನು ಕಾಡುತ್ತದೆ.

AV Eye Hospital ad

ಡಾರ್ಲಿಂಗ್ಸ್‌ ಚಿತ್ರ ಮಹಿಳಾ ಪ್ರಧಾನವಾದ ಕಥಾಹಂದರವನ್ನು ಹೊಂದಿದ್ದು ಜಸ್ಮೀತ್‌ ಕೆ ರೀನ್‌ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಈ ಚಿತ್ರದ ಮೂಲಕ ನಟಿ ಆಲಿಯಾ ಭಟ್‌ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ. 

ಚಿತ್ರದಲ್ಲಿ ಆಲಿಯಾ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಶೆಫಾಲಿ ಶಾ ಕಾಣಿಸಿಕೊಂಡಿದ್ದಾರೆ. ವಿಜಯ್‌ ವರ್ಮಾ ಪತಿಯ ಪಾತ್ರ ನಿಭಾಯಿಸಿದ್ದರೆ, ರೋಹಿತ್‌ ಮ್ಯಾಥ್ಯೂ ಆಲಿಯಾ ಆಪ್ತ ಸ್ನೇಹಿತನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 'ಜೇಮ್ಸ್‌' ಚಿತ್ರದ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಸ್ಥಿತಿ ಗಂಭೀರ

ಟೀಸರ್‌ ಜೊತೆಗೆ 'ಡಾರ್ಲಿಂಗ್ಸ್‌' ಸಿನಿಮಾದ ಬಿಡುಗಡೆ ದಿನಾಂಕವನ್ನು ಕೂಡ ಚಿತ್ರತಂಡ ಘೋಷಿಸಿದ್ದು, ಆಗಸ್ಟ್‌ 5ರಂದು ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣಲಿದೆ. ಸಿನಿಮಾವನ್ನು ಅಂದಾಜು ₹75 ಕೋಟಿ ಮೊತ್ತಕ್ಕೆ ನೆಟ್‌ಫ್ಲಿಕ್ಸ್‌ ಸಂಸ್ಥೆ ಖರೀದಿಸಿರುವುದಾಗಿ ಚಿತ್ರತಂಡ ತಿಳಿಸಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್
eedina app