ಕೊನೆಗೂ ಸೆಟ್ಟೇರಿತು ಪುಷ್ಪ-2 ; ಸಿನಿಮಾ ಮುಹೂರ್ತಕ್ಕೆ ಗೈರಾದ ಅಲ್ಲು ಅರ್ಜುನ್‌

pushpa2
  • ಇಂದಿನಿಂದ ಪುಷ್ಪ-2 ಚಿತ್ರೀಕರಣ ಆರಂಭ
  • ಚಿತ್ರದ ಮುಹೂರ್ತಕ್ಕೆ ಗೈರಾದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ

ಕಳೆದ ವರ್ಷ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ 'ಪುಷ್ಪ' ಸಿನಿಮಾ ದೊಡ್ಡ ಮಟ್ಟಿನ ಯಶಸ್ಸು ಗಳಿಸಿತ್ತು. ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ದೇಶಕ ಸುಕುಮಾರ್ 'ಪುಷ್ಪ-2' ಮಾಡುವುದಾಗಿ ಘೋಷಿಸಿದ್ದರು. 'ಪುಷ್ಪ -2'ಗಾಗಿ ಕಲಾವಿದರ ಹುಡುಕಾಟದಲ್ಲಿದ್ದ ಚಿತ್ರತಂಡ ಕಳೆದ ತಿಂಗಳು ತಿರುಪತಿಯಲ್ಲಿ ʼಆಡಿಷನ್ʼ ಕೂಡ ನಡೆಸಿತ್ತು. ಸದ್ಯ 'ಆಡಿಷನ್‌' ಮತ್ತು 'ಪ್ರೀ ಪ್ರೊಡಕ್ಷನ್‌' ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇಂದು ಸಿನಿಮಾ ಮುಹೂರ್ತ ಕಾರ್ಯವನ್ನು ನೆರವೇರಿಸಿದೆ.

'ಪುಷ್ಪ-2' ಸಿನಿಮಾದ ಮುಹೂರ್ತ ಕಾರ್ಯ ಇಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ನಿರ್ದೇಶಕ ಸುಕುಮಾರ್‌ ಮತ್ತು ಕುಟುಂಬಸ್ಥರು ಹಾಗೂ ಚಿತ್ರದ ನಿರ್ಮಾಪಕರುಗಳು ಮುಹೂರ್ತ ಕಾರ್ಯದಲ್ಲಿ ಭಾಗವಹಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ವೈಯಕ್ತಿಕ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿರುವ ನಟ ಅಲ್ಲು ಅರ್ಜುನ್‌ ಮುಹೂರ್ತಕ್ಕೆ ಗೈರಾಗಿದ್ದು, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ.

ಬಹು ನಿರೀಕ್ಷಿತ 'ಪುಷ್ಪ-2' ಸಿನಿಮಾ ಅಂದಾಜು 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಮಲಯಾಳಂನ ಸ್ಟಾರ್ ನಟ ಫಹದ್ ಫಾಸಿಲ್ ಕೂಡ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ. 'ಪುಷ್ಪ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‌ ಅವರೇ 'ಪುಷ್ಪ-2'ಗೂ ಸಂಗೀತ ಸಂಯೋಜಿಸಲಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್