ಅಂಬರೀಶ್‌ 4ನೇ ವರ್ಷದ ಪುಣ್ಯಸ್ಮರಣೆ | ಪತಿ ನೆನೆದು ಭಾವುಕರಾದ ಸುಮಲತಾ

sumalatha
  • ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ಕುಟುಂಬಸ್ಥರು
  • ವಿಶೇಷ ಫೋಟೋ ಹಂಚಿಕೊಂಡು ರೆಬೆಲ್‌ ಸ್ಟಾರ್‌ ನೆನೆದ ದರ್ಶನ್‌ 

ರೆಬೆಲ್‌ ಸ್ಟಾರ್‌ ಅಂಬರೀಶ್‌ ನಮ್ಮನ್ನಗಲಿ ಇಂದಿಗೆ (ನವೆಂಬರ್‌ 24) ನಾಲ್ಕು ವರ್ಷಗಳು ಕಳೆದಿವೆ. ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಅವರ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಮತ್ತು ರಾಕ್‌ಲೈನ್‌ ವೆಂಕಟೇಶ್‌ ಮುಂತಾದವರು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್‌ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪತಿಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸುಮಲತಾ, "ನಟನಾಗಿ, ಜೊತೆಯಾಗಿ ಬಾಳ ಸಂಗಾತಿಯಾಗಿ ಹೆಜ್ಜೆ ಹಾಕಿದ ದಿನಗಳು ಯಾವತ್ತಿಗೂ ಜೀವಂತ. ನಿಮ್ಮ ಸಿಡುಕು, ಸಂಭ್ರಮ ಹಿತ. ದೈಹಿಕವಾಗಿ ನೀವು ನಮ್ಮೊಂದಿಗೆ ಇಲ್ಲ ಅನ್ನುವುದನ್ನು ಬಿಟ್ಟರೆ, ಕ್ಷಣ ಕ್ಷಣವೂ ನೆನಪಾಗಿ ನನ್ನೊಂದಿಗೆ ಇದ್ದೀರಿ. ನಿಮ್ಮ ಕನಸು, ಕನವರಿಕೆ, ಸಮಾಜಮುಖಿ ಕೆಲಸ, ನಾಡಿನ ಮೇಲಿದ್ದ ಒಲವು ನಿಮ್ಮದೇ ಹೆಸರಿನಲ್ಲಿ ಮುಂದುವರೆಯುತ್ತಿವೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯ ಸ್ಮರಣೆಗೆ ನನ್ನ ಹೃದಯಾಂತರಾಳದ ನಮನ. ಅಂಬಿ ಅಮರ" ಎಂದು ಭಾವನಾತ್ಮಕವಾಗಿ ಪತಿಯ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಅಂಬರೀಶ್‌ ಜೊತೆಗಿನ ಫೋಟೋ ಹಂಚಿಕೊಂಡು ಟ್ವೀಟ್‌ ಮಾಡಿರುವ ಕನ್ನಡದ ಸ್ಟಾರ್‌ ನಟ ದರ್ಶನ್‌, "ಪ್ರೀತಿಯ ರೆಬಲ್ ಸ್ಟಾರ್ ಅಂಬರೀಷ್ ಅಪ್ಪಾಜಿ ಅವರು ನಮ್ಮನ್ನು ದೈಹಿಕವಾಗಿ ಅಗಲಿ 4 ವರ್ಷಗಳು ಕಳೆದರೂ ಅವರ ಪ್ರೀತಿ ಮಾರ್ಗದರ್ಶನ ಸದಾ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿರುತ್ತದೆ" ಎಂದು ಅಂಬರೀಶ್‌ ಜೊತೆಗಿದ್ದ ಒಡನಾಟವನ್ನು ನೆನೆದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180