ದಯವಿಟ್ಟು ನನ್ನ ಸಿನಿಮಾ ನೋಡಿ; ಅಭಿಮಾನಿಗಳಿಗೆ ಆಮೀರ್ ಖಾನ್ ಮನವಿ

aamir khan
  • ಆಗಸ್ಟ್‌ 11ಕ್ಕೆ ತೆರೆಗೆ ಬರಲಿರುವ ಲಾಲ್‌ ಸಿಂಗ್‌ ಚಡ್ಡಾ
  • ಆಮೀರ್‌ ಖಾನ್‌ ಸಿನಿಮಾಗೆ ಎದುರಾಯ್ತು ಸಂಕಷ್ಟ

ಬಾಲಿವುಡ್‌ನ ಸ್ಟಾರ್ ನಟ ಆಮೀರ್‌ ಖಾನ್ ತಮ್ಮ ಸಿನಿಮಾವನ್ನು ಬಹಿಷ್ಕರಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಆಮೀರ್‌ ಖಾನ್ ನಟನೆಯ ಬಹುನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ. ಆದರೆ, ಬಿಡುಗಡೆಗೆ ದಿನಗಣನೆ ಶುರುವಾದ ಬೆನ್ನಲ್ಲೇ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕರಿಸುವಂತೆ ಟ್ವಿಟರ್ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ.

"ಆಮೀರ್‌ ಖಾನ್ ತಮ್ಮ ಚಿತ್ರಗಳ ಮೂಲಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲು ಯತ್ನಿಸಿದ್ದಾರೆ. ಹೀಗಾಗಿ ಅವರ ಮುಂದಿನ ಚಿತ್ರ ಲಾಲ್ ಸಿಂಗ್ ಚಡ್ಡಾ ನೋಡಬೇಡಿ. ಕೇವಲ ಲಾಲ್‌ ಸಿಂಗ್‌ ಚಡ್ಡಾ ಮಾತ್ರವಲ್ಲ, ಆಮೀರ್‌ ಖಾನ್‌ ನಟಿಸಿದ ಯಾವ ಸಿನಿಮಾಗಳಿಗೂ ಬೆಂಬಲ ಕೊಡಬೇಡಿ" ಎಂದು ನಟನ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಕ್ರೀಡೆ, ಕ್ರೀಡಾಳುಗಳ ಬದುಕು ಆಧರಿತ ಪ್ರಮುಖ ಭಾರತೀಯ ಚಿತ್ರಗಳು

ಈ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಮೀರ್‌ ಖಾನ್‌, "ನನ್ನ ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ನಡೆಸುತ್ತಿರುವುದು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ನನ್ನ ಬಗ್ಗೆ ಕೆಲವರು ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ. ನಾನು ಭಾರತವನ್ನು ಇಷ್ಟಪಡುವುದಿಲ್ಲ ಎಂದುಕೊಂಡಿದ್ದಾರೆ. ಅದನ್ನೇ ಮನಸ್ಸಿನಲ್ಲಿಟ್ಟು ನಾನು ನಟಿಸುವ ಸಿನಿಮಾಗಳಿಗೆ ಬಹಿಷ್ಕಾರ ಹಾಕುತ್ತಿದ್ದಾರೆ. ಆದರೆ, ಅವರು ಅಂದುಕೊಂಡಿರುವುದು ಸತ್ಯವಲ್ಲ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಕೆಲವರಲ್ಲಿ ನನ್ನ ಬಗ್ಗೆ ಈ ರೀತಿಯ ಅಭಿಪ್ರಾಯಗಳು ಮೂಡಿರುವುದು ನಿಜಕ್ಕೂ ದುರದೃಷ್ಟಕರ. ನನ್ನ ಸಿನಿಮಾಗೆ ಬಹಿಷ್ಕಾರ ಹಾಕಬೇಡಿ. ದಯವಿಟ್ಟು ನನ್ನ ಸಿನಿಮಾ ನೋಡಿ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್