ಅಮಿತಾಭ್ ಬಚ್ಚನ್‌ಗೆ ಎರಡನೇ ಬಾರಿ ಕೋವಿಡ್ ದೃಢ

Amitabh Bhacchan
  • ಸಂಪರ್ಕದಲ್ಲಿವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಬಿಗ್‌ಬಿ ಮನವಿ
  • 2020ರ ಜುಲೈನಲ್ಲಿ ಮೊದಲ ಬಾರಿಗೆ ಅಮಿತಾಭ್‌ ಅವರಿಗೆ ಕೋವಿಡ್‌ ಕಾಣಿಸಿಕೊಂಡಿತ್ತು

ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಎರಡನೇ ಬಾರಿ ಕೋವಿಡ್  ದೃಢಪಟ್ಟಿದೆ ಎಂದು ಬುಧವಾರ (ಆಗಸ್ಟ್‌ 24) ತಿಳಿದು ಬಂದಿದೆ.  

ಈ ಕುರಿತು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ತಮ್ಮ ಸಂಪರ್ಕದಲ್ಲಿದ್ದವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಡೊಳ್ಳು ಸಿನಿಮಾ ವೀಕ್ಷಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಆಹ್ವಾನ

“ನನಗೆ ಕೋವಿಡ್ ದೃಢಪಟ್ಟಿದೆ. ನನ್ನ ಜತೆಗೆ ಇದ್ದವರು ಹಾಗೂ ಸಂಪರ್ಕಕ್ಕೆ ಬಂದಿದ್ದವರು ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.   

ನಟ ಅಮಿತಾಭ್ ಬಚ್ಚನ್ ಅವರಿಗೆ ಕೋವಿಡ್ ತಗುಲಿರುವುದು ಇದು ಎರಡನೇ ಬಾರಿ. 2020ರ ಜುಲೈನಲ್ಲಿ ಅವರಿಗೆ ಮೊದಲ ಬಾರಿಗೆ ಸೋಂಕು ತಗುಲಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್