
- 2016ರಲ್ಲಿ ಕರಣ್ ಸಿಂಗ್ ಗ್ರೋವರ್ ಜೊತೆ ಮದುವೆಯಾಗಿದ್ದ ನಟಿ
- ಕಳೆದ ವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಟಿ ಆಲಿಯಾ ಭಟ್
ಬಾಲಿವುಡ್ ನಟಿ ಬಿಪಾಶಾ ಬಸು ಅವರು ಇಂದು (ನ. 12) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಿಪಾಶಾ- ಕರಣ್ ಸಿಂಗ್ ದಂಪತಿ ಮನೆಗೆ ಮಗಳನ್ನು ಸ್ವಾಗತಿಸಿದ್ದಾರೆ.
ದಂಪತಿಗೆ ಸಿನಿಮಾ ಕಲಾವಿದರು ಮತ್ತು ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. 2016ರಲ್ಲಿ ಕರಣ್ ಸಿಂಗ್ ಗ್ರೋವರ್ ಜೊತೆ ಬಿಪಾಶಾ ಬಸು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಆರು ವರ್ಷಗಳ ಬಳಿಕ ದಂಪತಿಗೆ ಮಗುವಾಗಿದೆ.
ಕಳೆದ ವಾರ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಈಗ ಬಿಪಾಶಾ ಬಾಸು ಅವರು ಸಹ ಹೆಣ್ಣು ಮಗುವಿನ ತಾಯಿ ಆಗಿದ್ದಾರೆ.
Blessed 🙏🔱🧿 https://t.co/PHMO4I9t8j
— Bipasha Basu (@bipsluvurself) November 12, 2022
ಇತ್ತೀಚೆಗೆ ಗರ್ಭ ಧರಿಸಿರುವ ಬಗ್ಗೆ ಫೋಟೋಶೂಟ್ ಮಾಡಿಸಿ, ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಿಪಾಶಾ ಬಸು ತಾವು ಗರ್ಭಿಣಿ ಎಂಬ ಸುದ್ದಿ ತಿಳಿಸಿದ್ದರು. ಈಗ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. ಮಗುವಿನ ಫೋಟೋ ಹಂಚಿಕೊಳ್ಳುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಟಿಯ ಉಡುಗೆ ಬಗ್ಗೆ ವೇದಿಕೆ ಮೇಲೆ ವ್ಯಂಗ್ಯ ಮಾಡಿದ ಹಾಸ್ಯನಟ; ಗಾಯಕಿ ಚಿನ್ಮಯಿ ಆಕ್ರೋಶ
2001ರಲ್ಲಿ ಬಿಪಾಶಾ ಬಾಲಿವುಡ್ಗೆ ಕಾಲಿಟ್ಟರು. ಬಿಪಾಶಾ ಬಸು ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ, ಸೂಪರ್ ಸ್ಟಾರ್ಗಳ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಬಿಪಾಶಾ ಬಸು ಅವರು ಸಿನಿಮಾಗಳನ್ನು ಒಪ್ಪಿಕೊಳ್ಳದೆ, ಕುಟುಂಬದ ಕಡೆ ಹೆಚ್ಚು ಗಮನ ಹರಿಸಿದ್ದರು. 2015ರಲ್ಲಿ ಬಿಡುಗಡೆಯಾದ ‘ಅಲೋನ್’ ಅವರ ಕೊನೆಯ ಸಿನಿಮಾ.