ಅಮಿತ್‌ ಶಾ ಹಿಂದಿ ಹೇರಿಕೆಗೆ ಎ ಆರ್‌ ರೆಹಮಾನ್‌ ತಿರುಗೇಟು

  • ಗೃಹ ಸಚಿವ ಅಮಿತ್‌ ಶಾ ಹಿಂದಿ ಹೇರಿಕೆಗೆ ಹೆಚ್ಚಿದ ಆಕ್ರೋಶ
  • ತಮಿಳು ಎಲ್ಲಾ ಭಾಷೆಗಳ ತಾಯಿ ಎಂದ ಎ ಆರ್‌ ರೆಹಮಾನ್‌

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹಿಂದಿ ಹೇರಿಕೆ ಯತ್ನಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್‌ ರೆಹಮಾನ್‌ ತಮ್ಮ ಮಾತೃ ಭಾಷೆ ತಮಿಳಿನಲ್ಲೇ ತಿರುಗೇಟು ನೀಡಿದ್ದಾರೆ.

ಹಿಂದೆ ಹೇರಿಕೆ ಕುರಿತು ಟ್ವಿಟ್ಟರ್‌ ಮೂಲಕ ಅಸಮಾಧಾನ ಹೊರ ಹಾಕಿರುವ ರೆಹಮಾನ್‌, ತಮಿಳರ ಉಡುಗೆ ತೊಟ್ಟು ತಮಿಳು ಪದವನ್ನೇ ಆಯುಧ ಮಾಡಿಕೊಂಡಿರುವ ದೇವತಾರೂಪಿ ಮಹಿಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ರೆಹಮಾನ್ ಹಂಚಿಕೊಂಡಿರುವ ಈ ಚಿತ್ರದ ಅಡಿಯಲ್ಲಿ ತಮಿಳಿನ ಕ್ರಾಂತಿಕಾರಿ ಕವಿ ಭಾರತಿದಾಸನ್‌ ಅವರ ಕವಿತೆಯ ಸಾಲುಗಳನ್ನು ಬರೆಯಲಾಗಿದೆ.

ಭಾರತಿದಾಸನ್‌ ಅವರ ತಮಿಳು ಕವಿತೆಯ ಕನ್ನಡದ ಅರ್ಥ ಹೀಗಿದೆ

"ತಮಿಳು ಎಲ್ಲಾ ಭಾಷೆಗಳ ತಾಯಿ. ನಮ್ಮ ಪ್ರೀತಿಯ ತಮಿಳು ಭಾಷೆ ಜೀವ ಉಳಿಸುವ ಪೈರಿನ ಬೇರು" ಎಂದು ಭಾರತಿದಾಸನ್‌ ಅವರ ಕವಿತೆಯ ಅರ್ಥಗರ್ಭಿತ ಸಾಲುಗಳನ್ನು ಬಳಸಿಕೊಂಡು ಎ ಆರ್‌ ರೆಹಮಾನ್‌, ಅಮಿತ್‌ ಶಾ ಅವರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಸದ್ಯ ರೆಹಮಾನ್‌ ಅವರ ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಕಳೆದ 20 ಗಂಟೆಗಳ ಅವಧಿಯಲ್ಲಿ ರೆಹಮಾನ್‌ ಅವರ ತಮಿಳು ಟ್ವೀಟ್‌ ಅನ್ನು 65 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದು, 16 ಸಾವಿರ ಜನ  ರೀಟ್ವೀಟ್‌ ಮಾಡಿದ್ದಾರೆ. 1,800ಕ್ಕೂ ಹೆಚ್ಚು ಜನ ಕಾಮೆಂಟ್‌ ಮಾಡಿದ್ದಾರೆ. 

ದೇಶದೆಲ್ಲೆಡೆ ಇಂಗ್ಲಿಷ್‌ಗೆ ಬದಲಾಗಿ ಹಿಂದಿಯನ್ನು ವ್ಯವಹಾರಿಕ ಭಾಷೆಯಾಗಿ ಬಳಸಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು. ಗೃಹ ಸಚಿವರ ಹಿಂದಿ ಹೇರಿಕೆ ಯತ್ನಕ್ಕೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ. ಜೊತೆಗೆ ಹಿಂದಿ ಹೇರಿಕೆ ವಿರುದ್ಧ #stopHindiImposition ಎಂಬ ಅಭಿಯಾನ ಕೂಡ ತೀವ್ರವಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್