ಗೆಲುವಿನ ಬೆನ್ನಲ್ಲೇ ʻಬ್ರಹ್ಮಾಸ್ತ್ರ ಭಾಗ 2ʼಗೆ ಸಜ್ಜಾದ ಅಯಾನ್ ಮುಖರ್ಜಿ

ayan mukherjee
  • 10 ದಿನಕ್ಕೆ 360 ಕೋಟಿ ರೂಪಾಯಿ ಗಳಿಸಿದ ʼಬ್ರಹ್ಮಾಸ್ತ್ರʼ
  • ಪಾರ್ಟ್‌-2 ಕೆಲಸ ಆರಂಭಿಸಿದ ಅಯಾನ್‌ ಮುಖರ್ಜಿ

ವಿವಾದದ ಸುಳಿಗೆ ಸಿಲುಕಿದ್ದ 'ಬ್ರಹ್ಮಾಸ್ತ್ರ' ಸಿನಿಮಾ ಎಲ್ಲರ ನಿರೀಕ್ಷೆ ಮೀರಿ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಅಯಾನ್‌ ಮುಖರ್ಜಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‌ ಮುಖ್ಯಭೂಮಿಕೆ ನಿಭಾಯಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ಮಿಶ್ರ ಪ್ರತಿಕ್ರಿಯೆ ಹೊರತಾಗಿಯೂ ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತೆರೆಕಂಡ 10 ದಿನಕ್ಕೆ ₹360 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ.

'ಬ್ರಹ್ಮಾಸ್ತ್ರ'ದ ಭರ್ಜರಿ ಗೆಲುವಿನ ಬೆನ್ನಲ್ಲೇ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ನಿರ್ದೇಶಕ ಅಯಾನ್ ಮುಖರ್ಜಿ, “ಬ್ರಹ್ಮಾಸ್ತ್ರ ಬಿಡುಗಡೆಯಾಗಿ 11 ದಿನಗಳು ಕಳೆದಿವೆ. ಇನ್ನೊಂದಿಷ್ಟು ವಾರ ನಮ್ಮ ಪಾಲಿಗೆ ಈ ಹಬ್ಬದ ವಾತಾವರಣ ಹೀಗೆ ಇರಲಿದೆ. ಚಿತ್ರದ ಕುರಿತು ಪ್ರೇಕ್ಷಕರಿಗಿರುವ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಭಿಮಾನಿಗಳ ಈ ಅನಿಸಿಕೆಗಳು ಮುಂದಿನ ದಿನಗಳಲ್ಲಿ ಸಿನಿಮಾ ತಯಾರಿಗೆ ಸಹಕಾರಿಯಾಗಲಿವೆ. 'ಬ್ರಹ್ಮಾಸ್ತ್ರ' ಬಿಡುಗಡೆಯಾದ ಕೆಲವೇ ದಿನಕ್ಕೆ ನಾನು ʼಪಾರ್ಟ್ 2ʼ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆ ʼಬ್ರಹ್ಮಾಸ್ತ್ರ ಪಾರ್ಟ್ 2ʼ ನಿರ್ದೇಶಿಸುವ ನನ್ನ ಹಂಬಲಕ್ಕೆ ಸ್ಫೂರ್ತಿ ತುಂಬಿದೆ. ನಾನು ಈಗಾಗಲೇ ʼಬ್ರಹ್ಮಾಸ್ತ್ರ ಪಾರ್ಟ್ 2ʼ ಚಿತ್ರದ ಕೆಲಸಗಳನ್ನು ಆರಂಭಿಸಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Ayan Mukerji (@ayan_mukerji)

ಅಯಾನ್ ನಿರ್ದೇಶನದಲ್ಲಿ ಮೂಡಿಬಂದ 'ಬ್ರಹ್ಮಾಸ್ತ್ರ' ಫ್ಯಾಂಟಸಿ ಚಿತ್ರವಾಗಿದ್ದು, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ನಾಗಾರ್ಜುನ ಸೇರಿದಂತೆ ಬಹುತಾರಾಗಣ ಹೊಂದಿದೆ. ಜಗತ್ತಿನಾದ್ಯಂತ ₹360 ಕೋಟಿ ಗಳಿಸಿರುವ ಈ ಚಿತ್ರ ಭಾರತದಲ್ಲೇ ₹212 ಕೋಟಿ ಕಲೆ ಹಾಕಿದೆ. ಚಿತ್ರಕಥೆಯ ಕಾರಣಕ್ಕೆ ಟೀಕೆಗೆ ಗುರಿಯಾದರೂ ವಿಎಫ್‌ಎಕ್ಸ್‌ ಅದ್ದೂರಿ ಮೇಕಿಂಗ್‌ ಕಾರಣಕ್ಕೆ 'ಬ್ರಹ್ಮಾಸ್ತ್ರ' ಎಲ್ಲರ ಗಮನ ಸೆಳೆದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180