ಬಿಗ್‌ಬಾಸ್‌ ಒಟಿಟಿ ಆವೃತ್ತಿಗೆ ಅದ್ಧೂರಿ ಚಾಲನೆ ; ಬಿಗ್‌ಹೌಸ್‌ ಪ್ರವೇಶಿಸಿದ ಸೋನು ಶ್ರೀನಿವಾಸ ಗೌಡ

bigboss
  • ಬಿಗ್‌ ಬಾಸ್‌ ಮನೆ ಪ್ರವೇಶಿಸಿದ ಆರ್ಯವರ್ಧನ್ ಗುರೂಜಿ
  • 40 ದಿನ ನಡೆಯಲಿದೆ ʼಬಿಗ್‌ಬಾಸ್‌ ಒಟಿಟಿ ಶೋʼ

ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಶನಿವಾರ ಅದ್ಧೂರಿ ಚಾಲನೆ ದೊರೆತಿದೆ. ಈ ಬಾರಿಯ ಬಿಗ್‌ಬಾಸ್‌ ಕಾರ್ಯಕ್ರಮ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ. ʼಬಿಗ್‌ಬಾಸ್‌ ಒಟಿಟಿʼಯ ಮೊದಲನೇ ಸೀಸನ್ ಇಂದಿನಿಂದ ಕಲರ್ಸ್ ಕನ್ನಡದ ಭಾಗವಾಗಿರುವ ವೂಟ್ ಸೆಲೆಕ್ಟ್ ಒಟಿಟಿ ವೇದಿಕೆಯಲ್ಲಿ ನೇರ ಪ್ರಸಾರವಾಗಲಿದೆ.

ಎಂದಿನಂತೆ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ‌ ಈ ಒಟ್ಟು 13 ಸ್ಪರ್ಧಿಗಳು ಭಾಗಿಯಾಗಿದ್ದಾರೆ. ಸಂಖ್ಯಾಶಾಸ್ತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಆರ್ಯವರ್ಧನ್ ಗುರೂಜಿ ಮೊದಲನೇ ಸ್ಪರ್ಧಿಯಾಗಿ ಈಗಾಗಲೇ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದು, ಟಿಕ್‌ಟಾಕ್‌ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಎರಡನೇ ಸ್ಪರ್ಧಿಯಾಗಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Voot Select (@vootselect)

ಉಳಿದಂತೆ ಸುದ್ದಿ ನಿರೂಪಕ ಸೋಮಣ್ಣ ಮಾಚಿಮಾಡ, ಎಂ ಟಿವಿಯಲ್ಲಿ ಮೂಡಿ ಬರುವ ರೋಡಿಸ್‌ ರಿಯಾಲಿಟಿ ಶೋ ವಿಜೇತೆ ನಂದಿನಿ, ಕಿರುತೆರೆ ನಟ ಉದಯ್‌ ಸೂರ್ಯ, ಡ್ಯಾನ್ಸರ್‌ ಜಸ್ವಂತ್‌ ಭೋಪಣ್ಣ, ನಟ ಮತ್ತು ರ್ಯಾಪರ್‌ ರಾಕೇಶ್‌ ಅಡಿಗ, ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯಾ ಐಯ್ಯರ್‌, ಹಾಸ್ಯ ನಟ ಲೋಕೇಶ್‌, ನಟಿ ಜಯಶ್ರೀ ಆರಾಧ್ಯ, ಕಿರುತೆರೆ ನಟ ಅರ್ಜುನ್‌ ಮತ್ತು ತುಳು ಕಿರುತೆರೆಯ ನಟ ರೂಪೇಶ್‌ ಶೆಟ್ಟಿ ಬಿಗ್‌ಬಾಸ್‌ ಒಟಿಟಿ ಆವೃತ್ತಿಯ ಸ್ಪರ್ಧಿಗಳು. 

ಈಗಾಗಲೇ ವೂಟ್‌ ಸೆಲೆಕ್ಟ್‌ ಒಟಿಟಿಯಲ್ಲಿ ಬಿಗ್‌ಬಾಸ್‌ ನೇರ ಪ್ರಸಾರ ಆರಂಭವಾಗಿದ್ದು, ಬಿಗ್‌ಬಾಸ್‌ ಒಟಿಟಿ ಆವೃತ್ತಿ 40 ದಿನಗಳ ಕಾಲ ನಡೆಯಲಿದೆ. ಅದಾದ ಬಳಿಕ ಬಿಗ್‌ಬಾಸ್‌ 9ನೇ ಸೀಸನ್‌ ಟಿವಿಯಲ್ಲಿ ಪ್ರಸಾರವಾಗಲಿದ್ದು 9ನೇ ಸೀಸನ್‌ 100 ದಿನಗಳ ಕಾಲ ನಡೆಯಲಿದೆ ಎಂದು ಕಾರ್ಯಕ್ರಮದ ನಿರೂಪಕ ಸುದೀಪ್‌ ಮಾಹಿತಿ ನೀಡಿದ್ದಾರೆ. ಅಂದರೆ ಈ ಬಾರಿಯ ಬಿಗ್‌ಬಾಸ್‌ ಒಟ್ಟು 140 ದಿನಗಳ ಕಾಲ ನಡೆಯಲಿದೆ.  

ನಿಮಗೆ ಏನು ಅನ್ನಿಸ್ತು?
3 ವೋಟ್