ನಟ ಅಕ್ಷಯ್ ಕುಮಾರ್ ವಿರುದ್ದ ಮೊಕದ್ದಮೆ ಹೂಡಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

  • ಅಕ್ಷಯ್ ಕುಮಾರ್ ಬಂಧಿಸಿ ಗಡೀಪಾರಿಗೆ ಮೊಕದ್ದಮೆ ಹೂಡಿದ ಸ್ವಾಮಿ
  • ದೀಪಾವಳಿ ಹಬ್ಬದಂದು ಬಿಡುಗಡೆಗೆ ಸಿದ್ಧವಾಗಿರುವ 'ರಾಮ್‌ ಸೇತು' ಚಿತ್ರ

ನಟ ಅಕ್ಷಯ್ ಕುಮಾರ್ ಅಭಿನಯದ 'ರಾಮ್‌ ಸೇತು' ಚಿತ್ರದಲ್ಲಿ 'ರಾಮನ ಸೇತುವೆ' ಎಂದು ಪ್ರಸಿದ್ಧಿ ಪಡೆದಿರುವ ವಿಷಯವನ್ನು ತಿರುಚಿ ತೋರಿಸಲಾಗಿದೆ ಎಂದು ಆರೋಪಿಸಿ ಅಕ್ಷಯ್ ಕುಮಾರ್ ಅವರ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮೊಕದ್ದಮೆ ಹೂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. 

ಈ ಸಿನಿಮಾದಲ್ಲಿ ರಾಮನ ಸೇತುವೆ ವಿವಾದವನ್ನು ತಪ್ಪಾಗಿ ತೋರಿಸಿರುವುದಕ್ಕೆ ಪರಿಹಾರ ನೀಡಬೇಕು ಎಂದು ಸುಬ್ರಹ್ಮಣಿಯನ್ ಆಗ್ರಹಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಕರ್ಮ ಮೀಡಿಯಾ ಈ ಚಿತ್ರದಲ್ಲಿ, ಸುಪ್ರೀಂ ಕೋರ್ಟ್ ಆದೇಶವನ್ನು ಪೋಸ್ಟರ್ ಆಗಿ ಬಳಸಿದ್ದಾರೆ. ಕಾನೂನಿನ ಉಲ್ಲಂಘನೆ ಆಗಿದೆ. ಹಾಗಾಗಿ ದೂರು ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 

Image

ತಮಿಳುನಾಡಿನ ರಾಮೇಶ್ವರಂನಿಂದ ಶ್ರೀಲಂಕಾದ ಮನ್ನಾರ್‌ಗೆ ಸಂಪರ್ಕ ಕಲ್ಪಿಸುವ ರಾಮ ಸೇತುವೆಗೆ ರಾಷ್ಟ್ರೀಯ ಪಾರಂಪರಿಕ ಸ್ಥಾನಮಾನ ನೀಡಬೇಕು ಎಂದು ಸುಬ್ರಹ್ಮಣಿಯನ್ ಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು. ಮುಂದಿನ ವಾರ ಈ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಲಿದೆ.

ಈ ಸುದ್ದಿ ಓದಿದ್ದೀರಾ? ವೀಕೆಂಡ್ ಟೆಂಟ್ | ಈ ವಾರ ನೋಡಲೇಬೇಕಾದ ಸಿನಿಮಾಗಳು ಮತ್ತು ವೆಬ್ ಸರಣಿಗಳು

'ರಾಮ್ ಸೇತು' ಚಿತ್ರವನ್ನು ಅಭಿಷೇಕ್ ಶರ್ಮಾ ನಿರ್ದೇಶಿಸಿದ್ದಾರೆ ಮತ್ತು 'ಅಮೆಜಾನ್ ಪ್ರೈಮ್ ವಿಡಿಯೋ', ಅಬುಂಡಾಂಟಿಯಾ ಎಂಟರ್‌ಟೈನ್ಮೆಂಟ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಜೊತೆಗೆ ಅವರ ಕಂಪನಿ ಕೇಪ್ ಆಫ್ ಗುಡ್ ಫಿಲ್ಮ್ಸ್ ಸಹ ನಿರ್ಮಾಣ ಮಾಡಿದೆ. ಕರ್ಮ ಮೀಡಿಯಾದ ಮತ್ತೊಂದು ಸಿನಿಮಾ ಸೇತು ಚಿತ್ರವನ್ನು ವಿಶಾಲ್ ಚತುರ್ವೇದಿ ನಿರ್ದೇಶಿಸಿದ್ದು, ಶೈಲೇಶ್ ಆರ್ ಸಿಂಗ್ ನಿರ್ಮಿಸಿದ್ದಾರೆ. 

"ಬಿಜೆಪಿ ಸಂಸದ ಅಕ್ಷಯ್ ಕುಮಾರ್ ಅವರು ವಿದೇಶಿ ಪ್ರಜೆಯಾಗಿದ್ದರೆ, ಅವರನ್ನು ಬಂಧಿಸಿ, ನೆಲೆಸಿದ ದೇಶದಿಂದ ಹೊರಹಾಕುವಂತೆ ನಾವು ಕೇಳಬಹುದು" ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಅವರ 'ರಾಮ್ ಸೇತು' ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ನುಶ್ರತ್ ಭರೂಚಾ ಹಾಗೂ ಸತ್ಯ ದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಅಕ್ಟೋಬರ್ 24ರಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್