ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ

Raju Srivastava
  • ಹೃದಯಾಘಾತದಿಂದ ದೆಹಲಿಯ ʼಏಮ್ಸ್‌ʼ ಆಸ್ಪತ್ರೆ ಸೇರಿದ್ದ ಹಾಸ್ಯನಟ
  • 41 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜು ಶ್ರೀವಾಸ್ತವ

ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಇಂದು ದೆಹಲಿಯ ʼಏಮ್ಸ್‌ʼ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಆಗಸ್ಟ್‌ ತಿಂಗಳಿನಲ್ಲಿ ʼಏಮ್ಸ್‌ʼ ಆಸ್ಪತ್ರೆಗೆ ದಾಖಲಾಗಿದ್ದ ಅವರು ಸುದೀರ್ಘ ಚಿಕಿತ್ಸೆಯ ಬಳಿಕ ಇಂದು ಕೊನೆಯುಸಿರೆಳೆದಿದ್ದಾರೆ.

58 ವರ್ಷದ ರಾಜು ಅವರು ಆಗಸ್ಟ್ 9ರಂದು ದಕ್ಷಿಣ ದೆಹಲಿಯಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಸ್ಥಳದಲ್ಲಿಯೇ ಕುಸಿದು ಬಿದ್ದ ಅವರನ್ನು ಕೂಡಲೇ ʼಏಮ್ಸ್ʼ ಆಸ್ಪತ್ರೆಗೆ ದಾಖಲಿಸಿ ʼಆಂಜಿಯೋಪ್ಲಾಸ್ಟಿʼ ಚಿಕಿತ್ಸೆ ನೀಡಿ, ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.

ಆಸ್ಪತ್ರೆ ಸೇರಿದ 15 ದಿನಕ್ಕೆ ರಾಜು ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಅವರ ಮಿದುಳು ನಿಷ್ಕ್ರಯಗೊಂಡ ಹಿನ್ನೆಲೆ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ "ರಾಜು ಭಾಯ್‌ ಬದುಕುಳಿಯುವುದು ಅನುಮಾನ. ವೈದ್ಯರು ಕೂಡ ಏನೂ ತೋಚದ ಸ್ಥಿತಿಯಲ್ಲಿದ್ದಾರೆ" ಎಂದು ಅವರ ಆಪ್ತ, ಹಾಸ್ಯ ಕಲಾವಿದ ಸುನಿಲ್‌ ಪಾಲ್‌ ಹೇಳಿಕೊಂಡಿದ್ದರು. 

1980ರಲ್ಲಿ ಪ್ರಾರಂಭವಾಗಿದ್ದ ಹಿಂದಿಯ ʼದಿ ಗ್ರೇಟ್ ಲಾಫ್ಟರ್ ಚಾಲೇಂಜ್ʼ ಕಾಮಿಡಿ ಶೋನ ಮೊದಲ ಆವೃತ್ತಿಯಲ್ಲಿ ಸ್ಪರ್ಧಿಸುವ ಮೂಲಕ ರಾಜು ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡರು. ನಂತರದ ದಿನಗಳಲ್ಲಿ ʼಮೈನೆ ಪ್ಯಾರ್ ಕಿಯಾʼ, ʼಬಾಜಿಗರ್ʼ, ʼಬಾಂಬೆ ಟು ಗೋವಾʼ ಸೇರಿದಂತೆ ಬಾಲಿವುಡ್ನ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ʼಸ್ಟ್ಯಾಂಡ್ಅ ಪ್ ಕಾಮಿಡಿʼಯಲ್ಲೂ ಹೆಸರು ಮಾಡಿದ್ದ ರಾಜು, ಹಿಂದಿ ಕಿರುತೆರೆಯ ಜನಪ್ರಿಯ ʼರಿಯಾಲಿಟಿ ಶೋʼ ಬಿಗ್ಬಾಸ್ನಲ್ಲೂ ಸ್ಪರ್ಧಿಸಿ, ಗಮನ ಸೆಳೆದಿದ್ದರು.

ನಿಮಗೆ ಏನು ಅನ್ನಿಸ್ತು?
3 ವೋಟ್
Image
av 930X180