ಬಾಲಿವುಡ್ | ಸಣ್ಣ ಬಜೆಟ್‌ನ ಯಶಸ್ವಿ ಚಿತ್ರಗಳು 

  • ಹಿಂದಿ ಸಿನಿರಂಗದಲ್ಲಿ ಸಣ್ಣ ಬಜೆಟ್‌ನ ಸಿನಿಮಾಗಳು ಅಧಿಕ ಲಾಭ ಪಡೆದ ಉದಾಹರಣೆಗಳಿವೆ.
  • ಸಣ್ಣ ಬಜೆಟ್‌ನ ಸಿನಿಮಾಗಳು ಗಳಿಕೆಯಲ್ಲಿ ಮಾತ್ರವಲ್ಲದೇ, ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ

ಸದ್ಯ ಸುದ್ದಿಯಲ್ಲಿರುವ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಹಲವು ವಿಚಾರಗಳಿಂದ ಚರ್ಚೆಯಲ್ಲಿದೆ. ಅದಲ್ಲದೇ ಗಳಿಕೆಯಲ್ಲೂ ದಾಪುಗಾಲಿಟ್ಟಿದೆ. ಕೇವಲ 25 ಕೋಟಿ ರೂ. ಬಜೆಟ್‌ನ ನಿರ್ಮಾಣಗೊಂಡ ಸಿನಿಮಾ, ತೆರೆ ಕಂಡ ಎರಡೇ ವಾರದಲ್ಲಿ 200 ಕೋಟಿ ರೂ. ಗಳಿಸಿದೆ. ಅದರ ಗಲ್ಲಾ ಪೆಟ್ಟಿಗೆ ಇನ್ನೂ ತುಂಬುತ್ತಲೇ ಇದೆ.

ಈ ರೀತಿಯಲ್ಲಿ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡ ಚಿತ್ರಗಳು, ಬಿಡುಗಡೆಯ ನಂತರ ದೊಡ್ಡ ಮಟ್ಟದಲ್ಲಿ ಲಾಭ ಪಡೆದಿರುವ ನಿದರ್ಶನಗಳು ಬಹಳಷ್ಟಿವೆ.

Image

ವಿಕ್ಕಿ ಡೋನರ್: ಸಿನಿಮಾ 2012ರಲ್ಲಿ ತೆರೆ ಕಂಡಿತು. ಸಿನಿಮಾವನ್ನು ಶೋಜಿತ್ ಸಿರ್ಕಾರ್ ನಿರ್ದೇಶಿಸಿದ್ದು, ನಟ ಜಾನ್ ಅಬ್ರಹಾಂ ನಿರ್ಮಿಸಿದ್ದಾರೆ. ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ನಟಿ ಯಾಮಿ ಗೌತಮ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದು ರೋಮ್ಯಾಂಟಿಕ್ ಮತ್ತು ಹಾಸ್ಯ ಕಥಾಹಂದರವುಳ್ಳ ಚಿತ್ರವಾಗಿದ್ದು, ವೀರ್ಯದಾನದ ಬಗ್ಗೆಗಿನ ಸೂಕ್ಷ್ಮ ವಿಚಾರಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಐದು ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ, 65 ಕೋಟಿ ರೂ. ಗಳಿಸಿದೆ.

Image

ದಿ ಲಂಚ್ ಬಾಕ್ಸ್ : 2013ರಲ್ಲಿ ಬಿಡುಗಡೆಯಾಗಿದೆ. ರಿತೇಶ್ ಬಾಟ್ರಾ ಅವರು ಸಿನಿಮಾಗೆ ಕತೆ ಬರೆದು, ನಿರ್ದೇಶಿಸಿದ್ದಾರೆ. ಅನುರಾಗ್ ಕಶ್ಯಪ್ ಮತ್ತು ಗುನೇತ್ ಮೊಂಗಾ ಸಿನಿಮಾಗೆ ಹಣ ಹಾಕಿದ್ದಾರೆ. ಬೆಳಗಿನ ಉಪಹಾರ ಡಬ್ಬಿ ಅದಲು–ಬದಲಾಗುವ ಸಂದರ್ಭದಲ್ಲಿ ಮೂಡುವ ಸ್ನೇಹದ ಕತೆಯನ್ನು ಸಿನಿಮಾ ಒಳಗೊಂಡಿದೆ. ಚಿತ್ರದಲ್ಲಿ ನಟ ಇರ್ಫಾನ್ ಪಠಾಣ್ ಮತ್ತು ನಟಿ ನಿಮ್ರತ್ ಕೌರ್ ಅಭಿನಯಿಸಿದ್ದಾರೆ. ಚಿತ್ರವೂ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆ ಮತ್ತು ಮೆಚ್ಚಗೆಯನ್ನು ಪಡೆದಿದೆ.9 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ, 100 ಕೋಟಿ ಗಳಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ.  

Image

ತಾರೆ ಜಮೀನ್ ಪರ್: ಬಾಲಿವುಡ್ ದಿಗ್ಗಜ ನಟ ಅಮೀರ್ ಖಾನ್ ಮತ್ತು ನಟಿ ದರ್ಶೀಲ್ ಸಫಾರಿ ನಟನೆಯ ಸಿನಿಮಾ ‘ತಾರೆ ಜಮೀನ್ ಪರ್’. 12 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಸಿನಿಮಾ ಗಳಿಸಿದ್ದು 89 ಕೋಟಿ ರೂ. ಮಾತ್ರವಲ್ಲದೇ, ಈ ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಸಿನಿಮಾದಲ್ಲಿ ಇಶನ್ ಎಂಬ ವಿದ್ಯಾರ್ಥಿ ಶೈಕ್ಷಣಿಕವಾಗಿ ಬಹಳ ಹಿಂದಿರುವ ಕಾರಣ ಆತನನ್ನು ಬೊರ್ಡಿಂಗ್ ಶಾಲೆಗೆ ಸೇರಿಸಲಾಗುತ್ತದೆ. ಅಲ್ಲಿನ ರಾಮ್ ಹೆಸರಿನ ಶಿಕ್ಷಕ, ಇಶಾನ್‌ಗೆ ಇರುವ ಕಾಯಿಲೆ ಬಗ್ಗೆ ಅರಿತು, ಇಶಾನ್‌ನ ಸಾಧಿನೆಗೆ ಸಹಕರಿಸುವ ಕತೆಯನ್ನು ಸಿನಿಮಾ ಹೊಂದಿದೆ.  

Image

ನೊ ಒನ್ ಕಿಲ್ಡ್ ಜೆಸ್ಸಿಕಾ: ರೆಸ್ಟೋರೆಂಟ್‌ನಲ್ಲಿ ಹತ್ಯೆಗೊಳ್ಳಗಾದ ಮಾಡೆಲ್ ಜಸ್ಸಿಕಾ ಲಾಲ್ ಜೀವನ ಕಥೆ ಆಧಾರಿತ ಕ್ರೈಮ್–ಥ್ರಿಲ್ಲರ್ ಚಿತ್ರ ‘ನೊ ಒನ್ ಕಿಲ್ಡ್ ಜೆಸ್ಸಿಕಾ’. ಸಿನಿಮಾದಲ್ಲಿ ನಟಿಯರಾದ ರಾಣಿ ಮುಖರ್ಜಿ ಮತ್ತು ವಿದ್ಯಾ ಬಾಲನ್ ಅಭಿನಯಿಸಿದ್ದಾರೆ. ಈ ಸಿನಿಮಾ ವಿಮರ್ಶಕರಿಂದ ಮೆಚ್ಚಗೆಯನ್ನು ಪಡೆದಿದೆ. ಬಾಕ್ಸ್ ಆಫೀಸ್‌ನಲ್ಲೂ ದೊಡ್ಡ ಯಶಸ್ಸು ಕಂಡಿದೆ. ಸಿನಿಮಾದ ನಿರ್ಮಾಣ ಬಜೆಟ್ 9 ಕೋಟಿಯಾಗಿದ್ದು, ಸಿನಿಮಾ ಗಳಿಸಿದ್ದು ಬರೋಬ್ಬರಿ 104 ಕೋಟಿ ರೂ.ಗಳು.

Image

ಕಹಾನಿ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ ‘ಕಹಾನಿ’ ಸಿನಿಮಾ, ಬಾಲಿವುಡ್ ಇತಿಹಾಸದಲ್ಲೇ ಅತೀ ಹೆಚ್ಚು ಲಾಭ ಗಳಿಸಿದ ಮಹಿಳಾ ಪ್ರಧಾನ ಚಿತ್ರವಾಗಿದೆ. ಸಿನಿಮಾವನ್ನು ಸುಜಾಯ್ ಗೋಶ್ ನಿರ್ದೇಶಿಸಿದ್ದಾರೆ. 8 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ 78 ಕೋಟಿ ರೂ. ಗಳಿಸಿದೆ.

Image

ತನು ವೆಡ್ಸ್ ಮನು: ಸಿನಿಮಾ 2011ರಲ್ಲಿ ತೆರೆ ಕಂಡಿತು. ಸಿನಿಮಾದಲ್ಲಿ ನಟಿ ಕಂಗನಾ ರಣಾವತ್ ಮತ್ತು ನಟ ಮಾಧವನ್ ನಟಸಿದ್ದಾರೆ. ಆನಂದ್ ಎಲ್.ರೈ ಅವರು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶೈಲೇಶ್ ಆರ್. ಸಿಂಗ್ ಅವರು ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಚಿತ್ರ ರೋಮ್ಯಾಂಟಿಕ್-ಹಾಸ್ಯ ಕತೆಯನ್ನು ಹೊಂದಿದೆ. 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ 90 ಕೋಟಿ ರೂ. ಗಳಿಸಿದೆ.

Image

ಆಶಿಖಿ-2: 12 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಸಿನಿಮಾ, 109 ಕೋಟಿ ರೂ. ಗಳಿಸಿದೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತು ನಟ ಆದಿತ್ಯ ಕಪೂರ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ದೊಡ್ಡ ಹಾಡುಗಾರ್ತಿಯಾಗಬೇಕು ಎಂಬ ಕನಸ್ಸನ್ನು ಹೊಂದಿದ್ದ ನಾಯಕಿ ಆರೋಹಿಯ ಕನಸನ್ನು ಈಡೇರಿಸಲು ನಾಯಕ-ಹಾಡುಗಾರ ರಾಹುಲ್ ಶ್ರಮಿಸುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಯುವ ಜನರನ್ನು ಸೆಳೆದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿದೆ.

Image

ಸ್ತ್ರೀ : 2018ರಲ್ಲಿ ಬಿಡುಗಡೆಯಾದ ಹಾಸ್ಯ–ಹಾರರ್ ಕಥಾಹಂದರವುಳ್ಳ ಸಿನಿಮಾ ಸ್ತ್ರೀ. ನಟ ರಾಜ್‌ಕುಮಾರ್ ರಾವ್ ಮತ್ತು ನಟಿ ಶ್ರದ್ಧಾ ಕಪೂರ್ ಸಿನಿಮಾದಲ್ಲಿ ನಟಸಿದ್ದಾರೆ. ಚಿತ್ರಕ್ಕೆ ಅಮರ್‌ ಕೌಶಿಕ್ ನಿರ್ದೇಶನವಿದ್ದು , ದಿನೇಶ್ ವಿಜಯನ್ ನಿರ್ಮಾಣ ಮಾಡಿದ್ದಾರೆ. 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ, ಬರೋಬ್ಬರಿ 180.76 ಕೋಟಿ ರೂ. ಗಳಿಸಿದೆ.

Image

ಬಧಾಯಿ ಹೊ: ಕಾಮಿಡಿ ಸಿನಿಮಾವಾಗಿದೆ. ನಟ ನಿನಾ ಗುಪ್ತಾ, ಆಯುಷ್ಮಾನ್ ಖುರಾನಾ, ಗಜರಾಜ್ ರಾವ್ ಅವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಶೇಷ ಕಥಾಹಂದರವನ್ನು ಹೊಂದುವ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ ಹೆಗ್ಗಳಿಗೆ ಸಿನಿಮಾಗಿದೆ. 29 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ, 219.5 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180