ಬಿಗ್‌ ಬಾಸ್‌ ಹೆಸರಲ್ಲಿ ಮೋಸ ಹೋಗಬೇಡಿ | ಆಕಾಂಕ್ಷಿಗಳಿಗೆ ಕಲರ್ಸ್‌ ಕನ್ನಡ ವಾಹಿನಿ ಎಚ್ಚರಿಕೆ

bigboss
  • ಬಿಗ್‌ ಬಾಸ್‌ ಹೆಸರಲ್ಲಿ ನಡೆಯುತ್ತಿದೆಯೇ ವಂಚನೆ?
  • ಕಲರ್ಸ್‌ ಕನ್ನಡ ವಾಹಿನಿಯ ಸಂದೇಶದಲ್ಲಿ ಏನಿದೆ?

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್‌ ಮತ್ತೆ ಬರ್ತಿದೆ. ಬಿಗ್‌ ಬಾಸ್‌ ಸೀಸನ್ 9ಕ್ಕೆ ಭರದ ಸಿದ್ಧತೆ ನಡೆದಿದೆ. ಅಲ್ಲದೆ ಇತ್ತೀಚೆಗೆ ಕಾರ್ಯಕ್ರಮದ ನಿರೂಪಕರಾದ ನಟ ಕಿಚ್ಚ ಸುದೀಪ್‌ ಅವರ ಪ್ರೋಮೊ ಶೂಟ್‌ ಕೂಡ ಮಾಡಲಾಗಿದೆ.

ಬಿಗ್‌ಬಾಸ್ ಸೀಸನ್‌ 9 ಹೇಗಿರಲಿದೆ? ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ ಪ್ರವೇಶ ಪಡೆಯಲಿದ್ದಾರೆ? ಜನ ಸಾಮನ್ಯರಿಗೂ ಅವಕಾಶ ನೀಡಲಾಗಿದೆಯೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಗರಿಗೆದರಿವೆ. ಈ ಚರ್ಚೆಗಳ ಬೆನ್ನಲ್ಲೇ ಕಲರ್ಸ್‌ ಕನ್ನಡ ವಾಹಿನಿ ಬಿಗ್‌ಬಾಸ್‌ ಆಕಾಂಕ್ಷಿಗಳಿಗೆ ಎಚ್ಚರಿಕೆಯ ಸಂದೇಶವನ್ನು ಹೊರಡಿಸಿದೆ.

ಬಿಗ್‌ಬಾಸ್‌ ಹೆಸರಲ್ಲಿ ವಂಚನೆ ಹೋಗಬೇಡಿ ಎಂದು ಆಕಾಂಕ್ಷಿಗಳಿಗೆ  ಕಲರ್ಸ್‌ ಕನ್ನಡ ವಾಹಿನಿಯು ಎಚ್ಚರಿಕೆ ನೀಡಿದೆ.   

"ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್ ಕನ್ನಡವು ಯಾವುದೇ ಸಂಸ್ಥೆ - ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಷನ್ ನಡೆಸಲಾಗುತ್ತಿಲ್ಲ. ಬಿಗ್ ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ನೀಡಿ. ಪ್ರವೇಶ ಶುಲ್ಕ, ಠೇವಣಿ, ತರಬೇತಿ -ಇಂಥ ಯಾವುದೇ ಹೆಸರಿನಲ್ಲೂ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ ಎಂಬುದು ನೆನಪಿರಲಿ. ಬಿಗ್ ಬಾಸ್ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ವೂಟ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಮಾತ್ರ ಪರಿಗಣಿಸಿ" ಎಂದು ಎಚ್ಚರಿಸಿದೆ.

 

ಬಿಗ್‌ ಬಾಸ್‌ ಹೆಸರಲ್ಲೂ ವಂಚನೆ ನಡೆಯುತ್ತಿರುವ ಬಗ್ಗೆ ಕಲರ್ಸ್‌ ಕನ್ನಡ ವಾಹಿನಿಯ ಆಡಳಿತ ಮಂಡಳಿ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲೇ ವಾಹಿನಿ ಬಿಗ್‌ ಬಾಸ್‌ ಆಕಾಂಕ್ಷಿಗಳಿಗೆ ಮುನ್ನೆಚ್ಚರಿಕೆ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್