ಹಾಸ್ಯನಟ ರಾಜು ಶ್ರೀವಾಸ್ತವ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Raju Srivastava
  • ರಾಜು ಶ್ರೀವಾಸ್ತವ ಮಿದುಳು ನಿಷ್ಕ್ರಿಯ 
  • ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದ ಖ್ಯಾತ ಹಾಸ್ಯನಟ 

ಹೃದಯಾಘಾತದಿಂದಾಗಿ ದೆಹಲಿಯ ʼಏಮ್ಸ್‌ʼ ಆಸ್ಪತ್ರೆ ಸೇರಿದ್ದ ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸಹನಟನ ಆರೋಗ್ಯದ ಬಗ್ಗೆ ಹಾಸ್ಯ ಕಲಾವಿದ ಸುನಿಲ್‌ ಪಾಲ್‌ ಸೆಲ್ಫೀ ವಿಡಿಯೋ ಮೂಲಕ ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜು ಶ್ರೀವಾತ್ಸವ ಅವರು ಆಸ್ಪತ್ರೆಗೆ ಸೇರಿದ ಬಳಿಕ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸಹನಟ ಸುನಿಲ್‌ ಪಾಲ್‌ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡುತ್ತಿದ್ದರು. ಆಗಸ್ಟ್‌  12ರಂದು ರಾಜು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮಾಹಿತಿ ನೀಡಿದ್ದ ಸುನಿಲ್‌ ಇಂದು ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದು, "ರಾಜು ಅವರ ಮಿದುಳು ನಿಷ್ಕ್ರಿಯಗೊಂಡಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವೈದ್ಯರು ಕೂಡ ಏನೂ ತಿಳಿಯದ ಸ್ಥಿತಿಯಲ್ಲಿದ್ದಾರೆ. ರಾಜು ಭಾಯ್‌ ಶೀಘ್ರ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥಿಸಿ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.  

58 ವರ್ಷದ ರಾಜು ಅವರು ಆಗಸ್ಟ್‌ 9ರಂದು ದಕ್ಷಿಣ ದೆಹಲಿಯಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಸ್ಥಳದಲ್ಲಿಯೇ ಕುಸಿದು ಬಿದ್ದ ಅವರನ್ನು ಕೂಡಲೇ ʼಏಮ್ಸ್ʼ ಆಸ್ಪತ್ರೆಗೆ ದಾಖಲಿಸಿ ʼಆಂಜಿಯೋಪ್ಲಾಸ್ಟಿʼ ಚಿಕಿತ್ಸೆ ನೀಡಿ, ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. 

1980ರಲ್ಲಿ ಪ್ರಾರಂಭವಾಗಿದ್ದ ಹಿಂದಿಯ ʼದಿ ಗ್ರೇಟ್ ಲಾಫ್ಟರ್ ಚಾಲೇಂಜ್ʼ ಕಾಮಿಡಿ ಶೋನ ಮೊದಲ ಆವೃತ್ತಿಯಲ್ಲಿ ಸ್ಪರ್ಧಿಸುವ ಮೂಲಕ ರಾಜು ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡರು. ನಂತರದ ದಿನಗಳಲ್ಲಿ ʼಮೈನೆ ಪ್ಯಾರ್ ಕಿಯಾʼ, ʼಬಾಜಿಗರ್ʼ, ʼಬಾಂಬೆ ಟು ಗೋವಾʼ ಸೇರಿದಂತೆ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ʼಸ್ಟ್ಯಾಂಡ್ಅ ಪ್ ಕಾಮಿಡಿʼಯಲ್ಲೂ ಹೆಸರು ಮಾಡಿದ್ದ ರಾಜು, ಹಿಂದಿ ಕಿರುತೆರೆಯ ಜನಪ್ರಿಯ ʼರಿಯಾಲಿಟಿ ಶೋʼ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಸಿ, ಗಮನ ಸೆಳೆದಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180