ಹಾಸ್ಯನಟ ರಾಜು ಶ್ರೀವಾಸ್ತವ ಆರೋಗ್ಯ ಗಂಭೀರ

Raju Srivastav
  • ವ್ಯಾಯಾಮದ ವೇಳೆ ಕಾಣಿಸಿಕೊಂಡ ಎದೆನೋವು
  • ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಿರುವ ವೈದ್ಯರು

ಬಾಲಿವುಡ್‌ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಅವರಿಗೆ ಬುಧವಾರ (ಆಗಸ್ಟ್‌ 9) ಹೃದಯಾಘಾತವಾಗಿದ್ದು, ದೆಹಲಿಯ ʼಏಮ್ಸ್ʼ ಆಸ್ಪತ್ರೆಯ ‌ತೀವ್ರ ನಿಗಾ ಘಟಕದಲ್ಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ರಾಜು ಅವರಿಗೆ ಸದ್ಯ ʼಆಂಜಿಯೋಪ್ಲಾಸ್ಟಿʼ ಚಿಕಿತ್ಸೆ ನೀಡಲಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ. ಸದ್ಯ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ ಎಂದು ವರದಿಯಾಗಿದೆ.

58 ವರ್ಷದ ರಾಜು ಶ್ರೀವಾಸ್ತವ ಬುಧವಾರ ದಕ್ಷಿಣ ದೆಹಲಿಯಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದೆ. ಸ್ಥಳದಲ್ಲಿಯೇ ಕುಸಿದು ಬಿದ್ದ ಅವರನ್ನು ಕೂಡಲೇ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯದ ಅಮೃತ ಮಹೋತ್ಸವ | ದೇಶಪ್ರೇಮ ಸಾರುವ ಕನ್ನಡದ ಪ್ರಮುಖ ಚಿತ್ರಗಳಿವು

1980ರಲ್ಲಿ ಪ್ರಾರಂಭವಾಗಿದ್ದ ಹಿಂದಿಯ ʼದಿ ಗ್ರೇಟ್ ಲಾಫ್ಟರ್ ಚಾಲೇಂಜ್ʼ ಕಾಮಿಡಿ ಶೋನ ಮೊದಲ ಆವೃತ್ತಿಯಲ್ಲಿ ಸ್ಪರ್ಧಿಸುವ ಮೂಲಕ ರಾಜು ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡರು. ನಂತರದ ದಿನಗಳಲ್ಲಿ ʼಮೈನೆ ಪ್ಯಾರ್ ಕಿಯಾʼ, ʼಬಾಜಿಗರ್ʼ, ʼಬಾಂಬೆ ಟು ಗೋವಾʼ ಸೇರಿದಂತೆ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಸ್ಟ್ಯಾಂಡ್ಅಪ್ ಕಾಮಿಡಿಯಲ್ಲೂ ಹೆಸರು ಮಾಡಿದ್ದ ರಾಜು ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್