ಸದ್ದಿಲ್ಲದೆ ಸಾಗುತ್ತಿದೆ ʻಕ್ರಾಂತಿʼ; ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾದ ದರ್ಶನ್‌

Dboss
  • ದರ್ಶನ್‌ಗಾಗಿ ಹೊಸ ʻಕ್ರಾಂತಿʼಗೆ ಸಜ್ಜಾದ ಅಭಿಮಾನಿಗಳು
  • ಟ್ವೀಟ್‌ ಮೂಲಕ ಸೆಲೆಬ್ರೆಟಿಗಳಿಗೆ ಚಿರಋಣಿ ಎಂದ ದಾಸ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಕ್ರಾಂತಿ' ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಸಾಗುತ್ತಿದ್ದು, ಚಿತ್ರದ ಬಗ್ಗೆ ನಟ ದರ್ಶನ್ ಮಾಹಿತಿ ಹಂಚಿಕೊಂಡಿದ್ದಾರೆ.

ಫಸ್ಟ್‌ಲುಕ್‌ ಟೀಸರ್‌ ಮೂಲಕ ಸಿನಿ ರಸಿಕರಲ್ಲಿ ಕುತೂಹಲ ಮೂಡಿಸಿದ್ದ 'ಕ್ರಾಂತಿ' ಸಿನಿಮಾದ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದರ್ಶನ್‌, "ಕ್ರಾಂತಿ ಚಿತ್ರದ ಶೂಟಿಂಗ್ ಪೋಲೆಂಡ್‌ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾನು ಸದಾ ಚಿರಋಣಿ” ಎಂದಿದ್ದಾರೆ.

 

ಮಾಧ್ಯಮಗಳ ಬಗ್ಗೆ  ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ದರ್ಶನ್ ಮೇಲಿದೆ. ಇದೇ ಕಾರಣಕ್ಕೆ ಅವರನ್ನು ಕನ್ನಡದ ಮಾಧ್ಯಮಗಳು ಬಹಿಷ್ಕರಿಸಿವೆ. ಹೀಗಾಗಿ ದರ್ಶನ್‌ ಅಭಿನಯದ 'ಕ್ರಾಂತಿ' ಸಿನಿಮಾಗೆ ಮಾಧ್ಯಮಗಳ ಪ್ರಚಾರ ಸಿಗುತ್ತಿಲ್ಲ. 

ಮಾಧ್ಯಮಗಳು ದರ್ಶನ್‌ ಅವರನ್ನು ಬಹಿಷ್ಕರಿಸಿ ಅವರ ಚಿತ್ರದ ಪ್ರಚಾರವನ್ನು ಸ್ಥಗಿತಗೊಳಿಸಿದ್ದನ್ನು ಸವಾಲಾಗಿ ಸ್ವೀಕರಿಸಿರುವ ನಟನ ಅಭಿಮಾನಿಗಳು ಮಾಧ್ಯಮಗಳ ಸಹಾಯವಿಲ್ಲದೆ 'ಕ್ರಾಂತಿ' ಸಿನಿಮಾ ಯಶಸ್ವಿಗೊಳಿಸಲು ಪಣ ತೊಟ್ಟಿದ್ದು, ಸ್ವಯಂ ಪ್ರೇರಿತರಾಗಿ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದಾರೆ. 'ಕ್ರಾಂತಿ' ಶೂಟಿಂಗ್‌ ಹಂತದಲ್ಲಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪೋಸ್ಟರ್‌ ಮತ್ತು ಮೀಮ್ಸ್‌ಗಳು ಹರಿದಾಡುತ್ತಿವೆ. ದರ್ಶನ್‌ ಅವರ ಫಸ್ಟ್‌ಲುಕ್‌ ಪೋಸ್ಟರ್‌ಗಳನ್ನು ಹಿಡಿದು ಅಭಿಮಾನಿಗಳು ಗುಂಪು ಗುಂಪಾಗಿ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ದರ್ಶನ್ ಟ್ವೀಟ್‌ ಮಾಡಿ ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾನು ಸದಾ ಚಿರಋಣಿ ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ ಪವಿತ್ರಾ ಲೋಕೇಶ್‌ ಪ್ರಕರಣ | ಮಾಧ್ಯಮಗಳು ಸಮಾಜಕ್ಕೆ ಪೂರಕವಾಗದೆ ಮಾರಕವಾಗಿವೆ

ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ 'ಕ್ರಾಂತಿ' ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರದಲ್ಲಿ ದರ್ಶನ್‌ಗೆ ಜೊತೆಯಾಗಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕಾಣಿಸಿಕೊಂಡಿದ್ದಾರೆ. ಬಿ ಸುರೇಶ್‌ ಮತ್ತು ಶೈಲಜಾ ನಾಗ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್