ತೆರೆಕಂಡ ಒಂದೇ ತಿಂಗಳಿಗೆ ಒಟಿಟಿಯತ್ತ ಮುಖ ಮಾಡಿದ ʻನಾನೆ ವರುವೆನ್ʼ

dhanush
  • ಚಿತ್ರಮಂದಿರಗಳಲ್ಲಿ ಹೀನಾಯ ಸೋಲು ಕಂಡಿದ್ದ ʼನಾನೆ ವರುವೆನ್‌ʼ
  • ₹100 ಕೋಟಿ ಬಂಡವಾಳದ ಚಿತ್ರ ಗಳಿಸಿದ್ದು ಕೇವಲ ₹43 ಕೋಟಿ

ತಮಿಳಿನ ಸ್ಟಾರ್ ನಟ ಧನುಷ್ ಮುಖ್ಯಭೂಮಿಕೆಯ 'ನಾನೆ ವರುವೆನ್' ಚಿತ್ರ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಸೆಪ್ಟೆಂಬರ್ 29ರಂದು ಜಗತ್ತಿನಾದ್ಯಂತ ತೆರೆಕಂಡಿದ್ದ ಈ ಚಿತ್ರ, ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಚಿತ್ರಮಂದಿರಗಳಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. 

ಅಂದಾಜು ನೂರು ಕೋಟಿ ಮೊತ್ತದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಕೇವಲ ₹43 ಕೋಟಿ ಕಲೆ ಹಾಕಲು ಸಾಧ್ಯವಾಗಿತ್ತು. ʼನಾನೆ ವರುವೆನ್ʼ ಗಳಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಂತೆ ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Eedina App

ಜನಪ್ರಿಯ ಒಟಿಟಿ ಸಂಸ್ಥೆ ʼಅಮೆಜಾನ್ ಪ್ರೈಂʼ ಈ ಚಿತ್ರದ ಡಿಜಿಟಲ್ ಹಕ್ಕನ್ನು ಖರೀದಿ ಮಾಡಿದ್ದು, ಅಕ್ಟೋಬರ್ 29ರಂದು ʼನಾನೆ ವರುವೆನ್ʼ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದೆ. 

ಸೆಲ್ವರಾಘವನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ʼಹಾರರ್‌ ಥ್ರಿಲ್ಲರ್‌ʼ ಕಥಾಹಂದರದ ʼನಾನೆ ವರುವೆನ್‌ʼ ಚಿತ್ರದಲ್ಲಿ ಧನುಷ್‌ಗೆ ಇಂದುಜಾ ರವಿಚಂದ್ರನ್‌ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಖ್ಯಾತ ಹಾಸ್ಯನಟ ಯೋಗಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯುವನ್‌ ಶಂಕರ್‌ ರಾಜ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app