ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ತಾಯಿ ನಿಧನ

prithvi amber
  • ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟನ ತಾಯಿ
  • ಶುಗರ್‌ಲೆಸ್‌ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿದ್ದ ಪೃಥ್ವಿ ಅಂಬರ್‌

ಸ್ಯಾಂಡಲ್‌ವುಡ್‌ನ ಯುವ ನಟ, 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಅವರ ತಾಯಿ ಸುಜಾತ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶನಿವಾರ ಮಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾಸರಗೋಡಿನ ಉಪ್ಪಳ ಸಮೀಪದ ಐಲ ಎಂಬಲ್ಲಿ ಇಂದು ಸಂಜೆ ಸುಜಾತ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಪೃಥ್ವಿ ಅವರ ಕುಟುಂಬದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ.

ಈ ಸುದ್ದಿ ಓದಿದ್ದೀರಾ? ಜುಲೈ 16- 17ರಂದು ಮೈಸೂರಿನಲ್ಲಿ ‘ಡೆಸ್ಡೆಮೋನಾ ರೂಪಕಮ್‌’ ನಾಟಕ ಪ್ರದರ್ಶನ

ಇತ್ತೀಚೆಗೆ ಶಿವರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ತೆರೆಕಂಡ ‘ಬೈರಾಗಿ' ಚಿತ್ರದಲ್ಲಿ ಪೃಥ್ವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜುಲೈ 1ರಂದು ಪೃಥ್ವಿ ಮುಖ್ಯಭೂಮಿಕೆಯ ‘ಶುಗರ್ ಲೆಸ್’ ಸಿನಿಮಾ ಕೂಡ ತೆರೆಕಂಡಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ಪೃಥ್ವಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್