
- ಈ ವರ್ಷ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಡಾಲಿ ಧನಂಜಯ್
- ಕುಶಾಲ್ ಗೌಡ ನಿರ್ದೇಶನದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಡಾಲಿ ಧನಂಜಯ್ ಅಭಿನಯದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರ ಡಿಸೆಂಬರ್ 30ರಂದು ತೆರೆಗೆ ಬರಲಿದೆ.
ಈ ಕುರಿತಾಗಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಇನ್ನು ಈ ಚಿತ್ರ ತೆಲುಗಿನಲ್ಲೂ ಸಹ ಬಿಡುಗಡೆಯಾಗಲಿದ್ದು ತೆಲುಗಿನಲ್ಲಿ 'ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ' ಎಂಬ ಶೀರ್ಷಿಕೆ ಇಡಲಾಗಿದೆ.
ಜಮಾಲಿಗುಡ್ಡದಲ್ಲಿ ಧನಂಜತ್ ಹಿರೋಶಿಮಾ ಪಾತ್ರದಲ್ಲಿ ಕಾಣಿಸಿಕೊಂಡರೆ, ಯಶ್ ಶೆಟ್ಟಿ ಅವರು ನಾಗಾಸಾಕಿ, ಅಧಿತಿ ಪ್ರಭುದೇವ ಅವರು ರುಕ್ಮಿಣಿ, ಪ್ರಾಣ್ಯ ಪಿ ರಾವ್ ಚುಕ್ಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ಭಾವನಾ ಹಾಗೂ ಪ್ರಕಾಶ್ ಬೆಳವಾಡಿ ಕೂಡ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಧನಂಜಯ್ ಲುಕ್ ತುಂಬಾ ವಿಭಿನ್ನವಾಗಿದ್ದು ಗುಂಗುರು ಕೂದಲಿನಲ್ಲಿ ವಿಭಿನ್ನವಾಗಿ ಪೋಸ್ಟರ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? 'ಆರ್ಆರ್ಆರ್ 2' ಬರಲಿದೆ ಎಂದ ರಾಜಮೌಳಿ; ಚಿತ್ರಕತೆ ಬರೆಯುತ್ತಿರುವ ವಿಜಯೇಂದ್ರ ಪ್ರಸಾದ್
ಈ ವರ್ಷ ಐದು ಚಿತ್ರಗಳನ್ನು ನೀಡಿರುವ ನಟ ರಾಕ್ಷಸ ಎಂದೇ ಕರೆಯಿಸಿಕೊಂಡಿರುವ ಧನಂಜಯ್, ತಮ್ಮ ನಟನಾ ವ್ಯಾಪ್ತಿ ವಿಸ್ತರಿಸಿಕೊಂಡಿದ್ದಾರೆ. ಹಾಗಾಗಿ ಟಾಲಿವುಡ್ನಿಂದಲೂ ಅವರಿಗೆ ಸಾಕಷ್ಟು ಬೇಡಿಕೆಗಳು ಬರಲಾಂಭಿಸಿವೆ. ಧನಂಜಯ್ ಅವರು ತಮಿಳಿನ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದು, ಕನ್ನಡದಲ್ಲಿ 'ಹೊಯ್ಸಳ' ಮತ್ತು 'ಉತ್ತರಕಾಂಡ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇವುಗಳ ಜೊತೆಗೆ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ಪಾರ್ಟ್ 2' ಚಿತ್ರದಲ್ಲಿಯೂ ಸಹ ಧನಂಜಯ್ ಜಾಲಿ ರೆಡ್ಡಿ ಪಾತ್ರ ಮುಂದುವರಿಯಲಿದೆ.
ಕುಶಾಲ್ ಗೌಡ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಮೆಚ್ಚುಗೆ ಪಡೆದುಕೊಂಡಿವೆ. ಶ್ರೀಹರಿ ನಿರ್ಮಾಣ ಮಾಡಿರುವ ಈ ಸಿನಿಮಾ ಡಾಲಿ ಧನಂಜಯ್ ನಟನೆಯ 26ನೇ ಚಿತ್ರವಾಗಿದೆ.