ಸದ್ಯದಲ್ಲೇ ಸೆಟ್ಟೇರಲಿದೆ 'ಏಕ್ ಲವ್ ಯಾ' ಖ್ಯಾತಿಯ ರಾಣಾ ಹೊಸ ಸಿನಿಮಾ

raana
  • ರಾಣಾ ಎರಡನೇ ಚಿತ್ರಕ್ಕೆ ವಿಜಯ್‌ ಈಶ್ವರ್‌ ನಿರ್ದೇಶನ
  • ಜೋಗಿ ಪ್ರೇಮ್‌ ಗರಡಿಯಲ್ಲಿ ಪಳಗಿರುವ ವಿಜಯ್‌ ಈಶ್ವರ್‌ 

ಜೋಗಿ ಪ್ರೇಮ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಏಕ್ ಲವ್ ಯಾʼ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸುವ ಮೂಲಕ ಸ್ಯಾಂಡಲ್‌ವುಡ್‌ ಮಂದಿಯ ಗಮನ ಸೆಳೆದಿದ್ದ ನಟಿ ರಕ್ಷಿತಾ ಅವರ ಸಹೋದರ, ಯುವನಟ ರಾಣಾ ತಮ್ಮ ಎರಡನೇ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಅವರು, ಈಗ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ? ನಿರ್ದೇಶಕರು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ರಾಣಾ ಅವರ ಎರಡನೇ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಯುವ ನಿರ್ದೇಶಕ ವಿಜಯ್‌ ಈಶ್ವರ್. ವಿಜಯ್ ಜೋಗಿ ಪ್ರೇಮ್ ಅವರ ನೆಚ್ಚಿನ ಶಿಷ್ಯ. ಪ್ರೇಮ್ ಜೊತೆಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಇಷ್ಟು ದಿನಗಳ ಕಾಲ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ವಿಜಯ್‌, ಇದೀಗ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯಲು ಸಜ್ಜಾಗಿದ್ದು ರಾಣಾ ಅವರ ಎರಡನೇ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ.

ರಾಣಾ ಮತ್ತು ವಿಜಯ್‌ ಈಶ್ವರ್‌ ಏಕ್‌ ಲವ್‌ ಯಾ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಏಕ್‌ ಲವ್‌ ಯಾ ಚಿತ್ರಕಥೆ ರಚನೆಯಲ್ಲಿ ಪ್ರೇಮ್‌ಗೆ ಜೊತೆಯಾಗಿದ್ದ ವಿಜಯ್‌, ಮತ್ತೆ ನೋಡಬೇಡ ಎಂಬ ರೊಮ್ಯಾಂಟಿಕ್‌ ಹಾಡನ್ನು ಕೂಡ ಬರೆದಿದ್ದರು.  

Image
rana

ವಿಜಯ್ ಈಶ್ವರ್ ತಾವು ಸಿದ್ಧಪಡಿಸಿರುವ ಕಥೆಯನ್ನು ಈಗಾಗಲೇ ರಾಣಾ ಅವರಿಗೆ ಹೇಳಿದ್ದು, ಕಥೆ ಕೇಳಿರುವ ರಾಣಾ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ರಕ್ಷಿತಾ ಮತ್ತು ಪ್ರೇಮ್‌ ಕೂಡ ಚಿತ್ರದ ಕಥೆ ಕೇಳಿ ಥ್ರಿಲ್‌ ಆಗಿದ್ದಾರೆ. ಚಿತ್ರಕ್ಕೆ ಈಗಾಗಲೇ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ರಾಣಾ-ವಿಜಯ್‌ ಕಾಂಬಿನೇಶನ್‌ ಸಿನಿಮಾ ಯಾವ ರೀತಿಯ ಕಥಾಹಂದರವನ್ನು ಹೊಂದಿರಲಿದೆ. ಸಿನಿಮಾದ ತಯಾರಿ ಯಾವ ಹಂತದಲ್ಲಿದೆ ಎಂಬುದನ್ನು ಸದ್ಯದಲ್ಲೇ ತಿಳಿಸುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್