ಸುದೀಪ್ ಅವಹೇಳನ; ಅಹೋರಾತ್ರ, ಚರಣ್‌ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

sudeep
  • ಪೊಲೀಸ್‌ ಠಾಣೆ ಮೆಟ್ಟಿಲೇರಿದ ರಮ್ಮಿ ಸರ್ಕಲ್‌ ವಿವಾದ
  • ಅಹೋರಾತ್ರ, ಚರಣ್‌ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ

ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಆನ್‌ಲೈನ್‌ ಜೂಜಿಗೆ ಪ್ರಚಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಹೋರಾತ್ರ ಮತ್ತು ಚರಣ್ ಎಂಬುವವರು ನಟನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋಗಳು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಹೋರಾತ್ರ ಮತ್ತು ಚರಣ್‌ ಹೇಳಿಕೆಗಳು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಈ ವಿವಾದದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಮಂಡಳಿ ಮಧ್ಯ ಪ್ರವೇಶ ಮಾಡಿದ್ದು, ಅಹೋರಾತ್ರ ಮತ್ತು ಚರಣ್ ಅವರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. "ಭಾರತೀಯ ಚಿತ್ರರಂಗದ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್‌ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡಿ ಕನ್ನಡ ಚಿತ್ರರಂಗ ಮತ್ತು ಸುದೀಪ್ ಅವರ ಘನತೆಗೆ ಚ್ಯುತಿ ತಂದಿದ್ದಾರೆ. ಚಿತ್ರರಂಗ ಮತ್ತು ಕಲಾವಿದರ ಬಗ್ಗೆ ಇಲ್ಲಸಲ್ಲದ ಗೊಂದಲ ಸೃಷ್ಟಿ ಮಾಡುತ್ತಿರುವ ಇವರನ್ನು ಮೇಲೆ ಶಿಸ್ತು ಕ್ರಮ ಜರುಗಿಸಿ ಚಿತ್ರರಂಗ ಮತ್ತು ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಸಹಕರಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ ಮಾ ಹರೀಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.

Image
complaint copy

ಸುದೀಪ್‌ ರಮ್ಮಿ ಸರ್ಕಲ್‌ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಖ್ಯಾತನಟ ಆನ್‌ಲೈನ್‌ ಜೂಜಿಗೆ ಪ್ರಚಾರ ನೀಡುತ್ತಿರುವುದಕ್ಕೆ ಈ ಹಿಂದೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಸುದೀಪ್‌ ಬಗ್ಗೆ ವೈಯಕ್ತಿಕ ದಾಳಿಗಿಳಿದ ಅಹೋರಾತ್ರ ಮತ್ತು ಚರಣ್‌ ನಟನನ್ನು ಅವಾಚ್ಯವಾಗಿ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿ ಬಿಟ್ಟಿದ್ದರು. 

ಈ ಸುದ್ದಿ ಓದಿದ್ದೀರಾ? ಸಂದರ್ಶನ | ಪೆಟ್ರೋಮ್ಯಾಕ್ಸ್‌ ಅಂದರೆ ಬದುಕು ಮತ್ತು ಬೆಳಕು: ನಿರ್ದೇಶಕ ವಿಜಯ್‌ ಪ್ರಸಾದ್‌

ಈ ಹಿಂದೆ ರಮ್ಮಿ ಸರ್ಕಲ್‌ ವಿವಾದಕ್ಕೆ ಸಂಬಂಧಿಸಿ ಅಹೋರಾತ್ರ ಜೊತೆಗೆ ಮಾತನಾಡಿದ್ದ ಸುದೀಪ್‌ ಅವರ ಆಪ್ತ ಸಹಯಾಕ ಜ್ಯಾಕ್‌ ಮಂಜು ರಮ್ಮಿ ಸರ್ಕಲ್‌ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈಗ ನಾವಾಗಿಯೇ ಆ ಜಾಹಿರಾತಿನ ಪ್ರದರ್ಶನ ನಿಲ್ಲಸಿ ಎಂದು ಕೇಳಿದರೂ ಸಂಸ್ಥೆ ಅದಕ್ಕೆ ಒಪ್ಪುವುದಿಲ್ಲ. ಒಪ್ಪಂದದ ಅವಧಿ ಮುಗಿದ ಬಳಿಕ ಆ ಸುದೀಪ್‌ ಅವರ ಜಾಹಿರಾತು ಪ್ರಚಾರಕ್ಕೆ ಬಳಕೆಯಾಗುವುದಿಲ್ಲ. ಇನ್ನುಮುಂದೆ ನಾವು ಈ ರೀತಿಯ ಯಾವುದೇ ಜಾಹಿರಾತುಗಳಿಗೂ ಉತ್ತೇಜನ  ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದಾದ ಬಳಿಕವೂ ಅಹೋರಾತ್ರ ಮತ್ತು ಚರಣ್‌ ನಟನ ವಿರುದ್ಧದ ವೈಯಕ್ತಿಕ ದಾಳಿಯನ್ನು ಮುಂದುವರೆಸಿದ್ದು, ಸದ್ಯ ಇಬ್ಬರ ಮೇಲೂ ದೂರು ದಾಖಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್