ಉತ್ತರ- ದಕ್ಷಿಣ ಚರ್ಚೆ ಶುರು ಮಾಡಿದ್ದು ಚಿತ್ರರಂಗದವರಲ್ಲ; ಮಾಧ್ಯಮಗಳಿಗೆ ಆಲಿಯಾ ತಿರುಗೇಟು

alia
  • 'ಆರ್‌ಆರ್‌ಆರ್‌' ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದ್ದ ಆಲಿಯಾ
  • ಚಿತ್ರರಂಗದವರನ್ನು ಜೊತೆಯಾಗಿ ಕೆಲಸ ಮಾಡಲು ಬಿಡಿ ಎಂದ ನಟಿ

ದಕ್ಷಿಣ ಸಿನಿಮಾಗಳ ಎದುರು ಬಾಲಿವುಡ್‌ ಮಂಕಾಯಿತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಆಲಿಯಾ ಭಟ್‌, "ನಮ್ಮಷ್ಟಕ್ಕೆ ಕೆಲಸ ಮಾಡಲು ಬಿಡಿ" ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಕನ್ನಡದ ಕೆಜಿಎಫ್-2, 777 ಚಾರ್ಲಿ, ವಿಕ್ರಾಂತ್ ರೋಣ, ತೆಲುಗಿನ ಪುಷ್ಪ, ಆರ್‌ಆರ್‌ಆರ್‌, ತಮಿಳಿನ ವಿಕ್ರಮ್ ಹೀಗೆ ದಕ್ಷಿಣ ಸಿನಿಮಾಗಳು ಕೇವಲ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಹೊತ್ತಿನಲ್ಲಿ ಬಾಲಿವುಡ್‌ನ ಸ್ಟಾರ್ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೋಲುತ್ತಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣದ ಸಿನಿಮಾಗಳ ಎದುರು ಬಾಲಿವುಡ್ ಮಂಕಾಯಿತೇ ಎಂಬ ಪ್ರಶ್ನೆಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿವೆ.

ಇದೀಗ ʼನಾರ್ಥ್ ವರ್ಸಸ್ ಸೌತ್ʼ ಚರ್ಚೆಗೆ ಬಾಲಿವುಡ್ ನಟಿ ಆಲಿಯಾ ಭಟ್ ಪ್ರತಿಕ್ರಿಯಿಸಿದ್ದು, "ಎರಡೂ ಕಡೆಯ ಚಿತ್ರರಂಗದ ಕಲಾವಿದರು ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಈ ʼನಾರ್ಥ್ ವರ್ಸಸ್ ಸೌತ್ʼ ಎನ್ನುವ ಚರ್ಚೆ ಹುಟ್ಟು ಹಾಕಿದ್ದು ಮಾಧ್ಯಮಗಳೇ ಹೊರತು ಚಿತ್ರರಂಗದವರಲ್ಲ. ಈ ಚರ್ಚೆಯನ್ನು ಇಲ್ಲಿಗೆ ಕೈಬಿಟ್ಟು ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಲು ಬಿಡಿ ಎಂದು ಖಾರವಾಗಿ ನುಡಿದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜೀವ ಬೆದರಿಕೆ ಆರೋಪ; ನಟ ದರ್ಶನ್‌ ವಿರುದ್ಧ ದೂರು ದಾಖಲು

ಆಲಿಯಾ ಭಟ್ ಇತ್ತೀಚೆಗೆ ರಾಜಮೌಳಿ ನಿರ್ದೇಶನದಲ್ಲಿ ತೆರೆಕಂಡ 'ಆರ್‌ಆರ್‌ಆರ್‌' ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಜಯ್‌ ದೇವಗನ್‌ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್