ಸಿನಿ ಶುಕ್ರವಾರ | ಈ ವಾರ ಕನ್ನಡದ 3 ಚಿತ್ರಗಳು ತೆರೆಗೆ

rishi

ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಕೇವಲ 3 ಸಿನಿಮಾಗಳು ತೆರೆಗೆ ಬಂದಿವೆ. ʼಆಪರೇಷನ್‌ ಅಲಮೇಲಮ್ಮʼ ಖ್ಯಾತಿಯ ರಿಷಿ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ʼನೋಡಿ ಸ್ವಾಮಿ ಇವನು ಇರೋದು ಹೀಗೆʼ ಸಿನಿಮಾ ʼಝೀ 5ʼ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು, ವೆಂಕಟ್‌ ಭಾರದ್ವಾಜ್‌ ನಿರ್ದೇಶನದ 'ಶ್ರೀರಂಗ' ಸಿನಿಮಾ ಇಂದು ಬಿಡುಗಡೆಯಾಗಿದೆ.

ನೋಡಿ ಸ್ವಾಮಿ ಇವನು ಇರೋದು ಹೀಗೆ

'ಆಪರೇಷನ್‌ ಅಲಮೇಲಮ್ಮ', 'ಕವಲುದಾರಿ' ಸಿನಿಮಾಗಳ ಗಮನ ಸೆಳೆದಿದ್ದ ನಟ ರಿಷಿ ಇದೀಗ ʼನೋಡಿ ಸ್ವಾಮಿ ಇವನು ಇರೋದು ಹೀಗೆʼ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ರಿಷಿ ನಟನೆಯ ʼಸೈಕಾಲಜಿಕಲ್‌ʼ ಕಥಾಹಂದರದ ʼನೋಡಿ ಸ್ವಾಮಿ ಇವನು ಇರೋದು ಹೀಗೆʼ ಸಿನಿಮಾ ಇಂದು ʼಝೀ 5ʼನಲ್ಲಿ ಬಿಡುಗಡೆಯಾಗಿದೆ. ವ್ಯಕ್ತಿಯೊಬ್ಬನ ಮಾನಸಿಕ ಖಿನ್ನತೆಯನ್ನು ಹಾಸ್ಯಮಯವಾಗಿ ತೆರೆಗೆ ಅಳವಡಿಸುವ ಪ್ರಯತ್ನ ಮಾಡಿದ್ದಾರೆ ಯುವ ನಿರ್ದೇಶಕ ಇಸ್ಲಾಹುದ್ದೀನ್‌. ರಿಷಿ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಧನ್ಯಾ ಬಾಲಕೃಷ್ಣ, ಗ್ರೀಷ್ಮಾ ಶ್ರೀಧರ್‌, ಅಪೂರ್ವ ಎಸ್‌ ಭಾರದ್ವಾಜ್‌, ಭವಾನಿ ಪ್ರಕಾಶ್‌, ನಾಗಭೂಷಣ್‌, ಮಹದೇವ್‌ ಪ್ರಸಾದ್‌ ಕಲಾವಿದರಿದ್ದಾರೆ. ಅಮ್ರೇಜ್‌ ಸೂರ್ಯವಂಶಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರಸನ್ನ ಶಿವರಾಮನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶ್ರೀರಂಗ

ವೆಂಕಟ್‌ ಭಾರದ್ವಾಜ್‌ ನಿರ್ದೇಶನದಲ್ಲಿ ಮೂಡಿಬಂದಿರುವ 'ಶ್ರೀರಂಗ' ಸಿನಿಮಾ ಇಂದು ತೆರೆಕಂಡಿದೆ. ಕಾಮಿಡಿಯ ಜೊತೆಗೆ ಕ್ರೈಂ ಥ್ರಿಲ್ಲರ್‌ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಬಹುತೇಕ ಯುವ ಪ್ರತಿಭೆಗಳಿಂದ ಕೂಡಿದೆ. ಯುವನಟ ಶಿನವ್‌ ಮುಖ್ಯಭೂಮಿಕೆ ನಿಭಾಯಿಸಿದ್ದು, ನಟಿಯರಾದ ರಚನಾ ರಾಯ್‌, ರೂಪ ರಾಯಪ್ಪ, ವಂದನಾ ಶೆಟ್ಟಿ ಶಿನವ್‌ಗೆ ಜೊತೆಯಾಗಿದ್ದಾರೆ. ಹಿರಿಯನಟ ಗುರುರಾಜ್‌ ಹೊಸಕೋಟೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಾರಾಯ

ಬಿಗ್‌ಬಾಸ್‌ ಖ್ಯಾತಿಯ ದಿವಾಕರ್‌ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಾರಾಯ' ಸಿನಿಮಾ ಜುಲೈ 21ರಂದು ತೆರೆಗೆ ಬಂದಿದೆ. ಉದಯ್‌ ಪ್ರೇಮ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಪ್ರೇಮಕತೆಯನ್ನು ಹೊಂದಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್