ಗುರು ಶಿಷ್ಯರ 'ಖೋ ಖೋʼ ಆಟ ಮೆಚ್ಚಿಕೊಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

kantara movie
  • 'ಗುರು ಶಿಷ್ಯರು' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ 
  • ಬಾಲ್ಯದಲ್ಲಿ ಖೋ ಖೋ ಆಡಿದ ನೆನಪು ಹಂಚಿಕೊಂಡ ಮಾಜಿ ಮುಖ್ಯಮಂತ್ರಿ

ಹಾಸ್ಯನಟ ಶರಣ್ ಅಭಿನಯದ 'ಗುರು ಶಿಷ್ಯರು' ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲೂ ಉತ್ತಮ ಗಳಿಕೆ ಮಾಡುತ್ತಿರುವ ಈ ಚಿತ್ರವನ್ನು ಇತ್ತೀಚೆಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವೀಕ್ಷಣೆ ಮಾಡಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

'ಗುರು ಶಿಷ್ಯರು' ಬಿಡುಗಡೆಯಾದ ದಿನವೇ ರಾಜ್ಯ ಸರ್ಕಾರದ ಪ್ರಮುಖರನ್ನು ಸಿನಿಮಾ ವೀಕ್ಷಣೆಗೆ ಆಹ್ವಾನಿಸುವುದಾಗಿ ಶರಣ್‌ ಮತ್ತು ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಕಂದಾಯ ಸಚಿವ ಆರ್‌ ಅಶೋಕ್‌ ಅವರನ್ನು ಚಿತ್ರತಂಡ ಸಿನಿಮಾ ವೀಕ್ಷಣೆಗೆ ಆಹ್ವಾನಿಸಿತ್ತು. 

ಸೆಪ್ಟೆಂಬರ್‌ 29ರಂದು ಚಿತ್ರತಂಡದ ಜೊತೆಗೆ ಕೂತು ಸಿನಿಮಾ ವೀಕ್ಷಿಸಿರುವ ಯಡಿಯೂರಪ್ಪ, "ಖೋ ಖೋ ಕ್ರೀಡೆಯ ಎಳೆಯನ್ನು ಇಟ್ಟುಕೊಂಡು ಮೂಡಿಬಂದಿರುವ ʼಗುರು ಶಿಷ್ಯರುʼ ಅದ್ಭುತವಾಗಿದೆ. ನಾನು ಸಿನಿಮಾ ನೋಡುವುದು ತೀರಾ ಕಡಿಮೆ. ಅಂತಹದ್ದರಲ್ಲಿ 'ಗುರು ಶಿಷ್ಯರು' ಸಿನಿಮಾವನ್ನು ಚಿತ್ರಮಂದಿರದಲ್ಲಿ ಕೂತು ನೋಡಿದ್ದು ನನಗೆ ತುಂಬಾನೇ ಖುಷಿ ನೀಡಿದೆ. ಈ ಸಿನಿಮಾ ನೋಡಿದ ಬಳಿಕ ನಾನು ʼಖೋ ಖೋʼ ಆಡುತ್ತಿದ್ದ ಬಾಲ್ಯದ ದಿನಗಳು ನೆನಪಿಗೆ ಬಂದವು. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ಸಂಭ್ರಮಿಸಬೇಕು" ಎಂದಿದ್ದಾರೆ.

ಯಡಿಯೂರಪ್ಪ ಅವರು ತಮ್ಮ ಸಿನಿಮಾ ವೀಕ್ಷಿಸಿದ ಕ್ಷಣಗಳ ವಿಡಿಯೋ ತುಣುಕನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಶರಣ್‌, "ನಮ್ಮ ಸಿನಿಮಾ ಖೋ ಖೋ ಕ್ರೀಡೆ ಎರಡನ್ನೂ ಬೆಂಬಲಿಸಿದ್ದಕ್ಕೆ ಧನ್ಯವಾದ" ಎಂದಿದ್ದಾರೆ.

'ಗುರು ಶಿಷ್ಯರು' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಯಡಿಯೂರಪ್ಪನವರ ಜೊತೆಗೆ ಸಚಿವ ಆರ್‌ ಅಶೋಕ್‌, ಶಾಸಕ ರಾಜುಗೌಡ, ಶರಣ್‌, ನಿಶ್ವಿಕಾ ನಾಯ್ಡು, ತರುಣ್‌ ಸುಧೀರ್‌, ಜಡೇಶಾ ಕೆ ಹಂಪಿ ಮುಂತಾದವರು ಭಾಗಿಯಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್