ಸಿನಿ ಶುಕ್ರವಾರ | ಶಶಾಂಕ್‌ ನಿರ್ದೇಶನದ 'ಲವ್‌ 360' ತೆರೆಗೆ

love 360
  • ಹೊಸಬರ ʼಲವ್‌ 360ʼ ಮೆಚ್ಚಿಕೊಂಡ ಪ್ರೇಕ್ಷಕರು
  • ವಿಮರ್ಶಕರ ಮೆಚ್ಚುಗೆ ಗಳಿಸಿದ ʼತಿರುಚಿತ್ರಂಬಲಂʼ  

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವಾರ ಕನಿಷ್ಠ ಕನ್ನಡದ ಎರಡು ಸಿನಿಮಾಗಳಾದರೂ ತೆರೆಗೆ ಬರಬೇಕಿತ್ತು. ಡಾಲಿ ಧನಂಜಯ ನಟನೆಯ ಮಾನ್‌ಸೂನ್‌ ರಾಗ ಮತ್ತು ಶಶಾಂಕ್‌ ನಿರ್ದೇಶನದ ಲವ್‌ 360 ಸಿನಿಮಾಗಳು ಈ ಶುಕ್ರವಾರ ತೆರೆಗೆ ಬರುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ, ಹಿನ್ನೆಲೆ ಸಂಗೀತ ಮತ್ತು ಸೌಂಡ್‌ ಎಫೆಕ್ಟ್‌ ಕೆಲಸಗಳು ಬಾಕಿ ಇರುವ ಕಾರಣಕ್ಕೆ ಮಾನ್‌ಸೂನ್‌ ರಾಗ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಹೀಗಾಗಿ ಈ ವಾರ ಲವ್‌ 360 ಸಿನಿಮಾವೊಂದೇ ರಾಜ್ಯಾದ್ಯಂತ ಬಿಡುಗಡೆಯಾಗಿದೆ.

  • ಸ್ಯಾಂಡಲ್‌ವುಡ್‌ | ಲವ್‌ 360

ಮೆಲೋಡಿ ಹಾಡುಗಳಿಂದಲೇ ಸದ್ದು ಮಾಡಿದ್ದ ʼಲವ್ 360ʼ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಶಶಾಂಕ್ ನಿರ್ದೇಶನದ ಈ ಚಿತ್ರ ʼರೊಮ್ಯಾಂಟಿಕ್ ಲವ್ ಸ್ಟೋರಿʼಯ ಸುತ್ತ ಮೂಡಿ ಬಂದಿದ್ದು, ʼಸಸ್ಪೆನ್ಸ್ʼ ಅಂಶವನ್ನು ಹೊಂದಿದೆ. ತಮ್ಮ ಬಹುಪಾಲು ಸಿನಿಮಾಗಳಲ್ಲಿ ಹೊಸಬರಿಗೆ ಅವಕಾಶ ನೀಡುವ ಶಶಾಂಕ್‌ ಈ ಚಿತ್ರದ ಮೂಲಕ ಯುವಪ್ರತಿಭೆ ಪ್ರವೀಣ್ ಅವರನ್ನು ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ʼಲವ್‌ ಮಾಕ್‌ಟೈಲ್‌ʼ ಖ್ಯಾತಿಯ ನಟಿ ರಚನಾ ಇಂದರ್ ಪ್ರವೀಣ್‌ಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ʼಲವ್ 360ʼಗೆ ಅರ್ಜುನ್ ಜನ್ಯ ಸಂಗೀತವಿದೆ. ʼಶ್ರಿವಲ್ಲಿʼ ಖ್ಯಾತಿಯ ಗಾಯಕ ಸಿದ್ ಶ್ರೀರಾಮ್ ಕಂಠಸಿರಿಯಲ್ಲಿ ಮೂಡಿಬಂದಿರುವ ʼಜಗವೇ ನೀನು ಗೆಳತಿಯೇ..ʼ ಹಾಡು ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದಂತೂ ಸುಳ್ಳಲ್ಲ.

Eedina App

  • ಕಾಲಿವುಡ್‌ | ತಿರುಚಿತ್ರಂಬಲಂ

ಕನ್ನಡದ ಲವ್‌ 360 ಹೊರತು ಪಡಿಸಿ ಈ ವಾರ ತಮಿಳಿನಲ್ಲಿ 'ತಿರುಚಿತ್ರಂಬಲಂ' ಸಿನಿಮಾ ಬಿಡುಗಡೆಯಾಗಿದೆ. ತಮಿಳಿನ ಸ್ಟಾರ್‌ ನಟ ಧನುಷ್‌ ಸ್ವಿಗ್ಗಿ ಡೆಲಿವರಿ ಬಾಯ್‌ ಪಾತ್ರದಲ್ಲಿ  ನಟಿಸಿರುವ ಈ ಚಿತ್ರ ಆಗಸ್ಟ್‌ 18ರಂದು ತೆರೆಗೆ ಬಂದಿದೆ. ಮಿತ್ರನ್‌ ಆರ್‌ ಜವಾಹರ್‌ ನಿರ್ದೇಶನದ ಈ ಚಿತ್ರದಲ್ಲಿ ಧನುಷ್‌ಗೆ ನಿತ್ಯಾ ಮೆನನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

AV Eye Hospital ad

  • ಟಾಲಿವುಡ್‌ | ತೀಸ್‌ ಮಾರ್‌ ಖಾನ್‌, ವಾಂಟೆಡ್‌ ಪಂಡುಗಾಡ್‌

ಈ ವಾರ ತೆಲುಗಿನಲ್ಲೂ ಎರಡು ಚಿತ್ರಗಳು ಬಿಡುಗಡೆಯಾಗಿವೆ. ಸಾಯಿ ಕುಮಾರ್‌ ಪುತ್ರ ಆದಿ ನಟನೆಯ ʼತೀಸ್‌ ಮಾರ್‌ ಖಾನ್‌ʼ ಮತ್ತು ಸುನಿಲ್‌, ವೆನ್ನೆಲ ಕಿಶೋರ್‌, ತನಿಕೆಲ್ಲ ಭರಣಿ ಸೇರಿದಂತೆ ಬಾಲಿವುಡ್‌ ಪ್ರಮುಖ ಹಾಸ್ಯ ಕಲಾವಿದರು ಜೊತೆ ಸೇರಿ ನಟಿಸಿರುವ ʼವಾಂಟೆಡ್‌ ಪಂಡುಗಾಡ್‌ʼ ಸಿನಿಮಾ ಕೂಡ ಇಂದು ತೆರೆಗೆ ಬಂದಿದೆ.

  • ಬಾಲಿವುಡ್‌ | ದೋಬಾರಾ

ಬಾಲಿವುಡ್‌ನ ಸ್ಟಾರ್‌ ನಟಿ ತಾಪ್ಸಿ ಪನ್ನು ಅಭಿನಯದ ʼದೋಬಾರಾʼ ಸಿನಿಮಾ ಕೂಡ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಥ್ರಿಲ್ಲರ್‌ ಕಥಾಹಂದರವುಳ್ಳ ಈ ಚಿತ್ರವನ್ನು ಅನುರಾಗ್‌ ಕಶ್ಯಪ್‌ ನಿರ್ದೇಶಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app