ಯುವರಾಜ್‌ ಕುಮಾರ್‌ ಚೊಚ್ಚಲ ಸಿನಿಮಾ ಆಡಿಷನ್‌ ಶುರು; ಯುವ ಪ್ರತಿಭೆಗಳಿಗೆ ಅವಕಾಶ

yuvaraj kumar
  • ಸದ್ಯದಲ್ಲೇ ಸೆಟ್ಟೇರಲಿದೆ ಯುವರಾಜ್‌ ಚೊಚ್ಚಲ ಸಿನಿಮಾ
  • ಮಂಗಳೂರಿನಲ್ಲಿ ಆಡಿಷನ್‌ ನಡೆಸಲಿರುವ ಚಿತ್ರತಂಡ 

ಸ್ಯಾಂಡಲ್‌ವುಡ್‌ನ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಪುತ್ರ ಯುವರಾಜ್‌ ಕುಮಾರ್‌ ಬಣ್ಣದ ಲೋಕಕ್ಕೆ ಕಾಲಿಡುತ್ತಿರುವುದು ಎಲ್ಲರಿಗೂ ತಿಳಿದಿದೆ. ದೊಡ್ಮನೆಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌, ಯುವ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನಲಾಗಿತ್ತು. ಅದರಂತೆ ಇದೀಗ ಸಂತೋಷ್‌ ಆನಂದ್‌ರಾಮ್‌ ಮತ್ತು ಯುವರಾಜ್‌ ಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ನೂತನ ಚಿತ್ರದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭಗೊಂಡಿದ್ದು, ಚಿತ್ರತಂಡ ಯುವ ಪ್ರತಿಭೆಗಳ ಹುಡುಕಾಟದಲ್ಲಿದೆ.

ಯುವರಾಜ್‌ ಕುಮಾರ್‌ ಅವರ ಚೊಚ್ಚಲ ಚಿತ್ರಕ್ಕೆ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ʼಹೊಂಬಾಳೆ ಫಿಲಂಸ್‌ʼ ಬಂಡವಾಳ ಹೂಡಿದೆ. ಇತ್ತೀಚೆಗೆ ಟ್ವಿಟರ್‌ನಲ್ಲಿ ಚಿತ್ರದ ಆಡಿಷನ್‌ ಬಗ್ಗೆ ಮಾಹಿತಿ ಹಂಚಿಕೊಂಡಿರುವ ʼಹೊಂಬಾಳೆ ಫಿಲಂಸ್‌ʼ, ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವ ಪ್ರತಿಭೆಗಳಿಗೆ ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಾಗಿ ಘೋಷಿಸಿದೆ.

Eedina App

ಹೊಂಬಾಳೆ ಫಿಲಂಸ್‌ ಟ್ವೀಟ್‌ನಲ್ಲಿ ಪೋಸ್ಟರ್‌ ಕೂಡ ಹಂಚಿಕೊಳ್ಳಲಾಗಿದ್ದು, ಆಡಿಷನ್‌ ವಿವರಗಳನ್ನು ನೀಡಲಾಗಿದೆ. ನವೆಂಬರ್‌ 26ರ ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2ವರೆಗೆ ಮಂಗಳೂರಿನ ಕೂಟಕ್ಕಳ ಆಡಿಟೋರಿಯಂನಲ್ಲಿ ಆಡಿಷನ್‌ ನಡೆಯಲಿದ್ದು, 16ರಿಂದ 25 ವರ್ಷವರೆಗೆ ವಯೋಮಿತಿ ಹೊಂದಿರುವ ಸಿನಿಮಾಸಕ್ತರು ಆಡಿಷನ್‌ನಲ್ಲಿ ಭಾಗವಹಿಸಬಹುದಾಗಿದೆ.  

AV Eye Hospital ad
ನಿಮಗೆ ಏನು ಅನ್ನಿಸ್ತು?
1 ವೋಟ್
eedina app