ಹಿರಿಯ ನಟ ಅನಂತ್‌ನಾಗ್‌ಗೆ ಒಲಿದ ಗೌರವ ಡಾಕ್ಟರೇಟ್‌

anant nag
  • ಅನಂತ್‌ ನಾಗ್‌ ಅವರ ನಾಲ್ಕೂವರೆ ದಶಕಗಳ ಕಲಾ ಸೇವೆಗೆ ಸಂದ ಗೌರವ
  • ಖ್ಯಾತ ಶಹನಾಯ್ ವಾದಕ ಬಲ್ಲೇಶ್‌ ಭಜಂತ್ರಿಗೂ ಒಲಿದ ಗೌರವ ಡಾಕ್ಟರೇಟ್‌

ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಗೌರವ ಡಾಕ್ಟರೇಟ್‌ ಘೋಷಣೆಯಾಗಿದೆ. 

ಅನಂತ್‌ ನಾಗ್‌ ಅವರು ಮಾಡಿರುವ ಕಲಾಸೇವೆ ಮತ್ತು ಕನ್ನಡ ಚಿತ್ರರಂಗದಲ್ಲಿ ನಟನಾಗಿ ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಹಿರಿಯ ನಟನಿಗೆ ಡಾಕ್ಟರೇಟ್‌ ನೀಡುವ ಮೂಲಕ ಗೌರವ ಸಲ್ಲಿಸಿದೆ.

1973ರಲ್ಲಿ ತೆರೆಕಂಡ ʼಸಂಕಲ್ಪʼ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅನಂತ್‌ ನಾಗ್‌, 260ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 22ಕ್ಕೂ ಹೆಚ್ಚು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಕಲಾಸೇವೆ ಸಲ್ಲಿಸಿದ್ದಾರೆ.

 ಈ ಸುದ್ದಿ ಓದಿದ್ದೀರಾ? ಖ್ಯಾತ ಗಾಯಕ ದಲೇರ್‌ ಮೆಹಂದಿ ಬಂಧನ

ಅನಂತ್‌ ನಾಗ್‌ ಅವರೊಂದಿಗೆ ಖ್ಯಾತ ಶಹನಾಯ್ ವಾದಕ ಬಲ್ಲೇಶ್‌ ಭಜಂತ್ರಿ ಅವರಿಗೂ ಗೌರವ ಡಾಕ್ಟರೇಟ್‌ ನೀಡುತ್ತಿರುವುದಾಗಿ ವಿಶ್ವವಿದ್ಯಾಲಯದ ಕುಲಪತಿ ನಿರಂಜನ್‌ ವಾನಳ್ಳಿ ತಿಳಿಸಿದ್ದಾರೆ.

ಹೆಸರಾಂತ ಶಹನಾಯ್ ವಾದಕ ಬಿಸ್ಮಿಲ್ಲಾ ಖಾನ್‌ ಅವರ ಶಿಷ್ಯರಾದ ಬಲ್ಲೇಶ್‌ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಸೇವೆಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. 

Image
ballesh

ಇವರಿಬ್ಬರು ಸಾಧಕರ ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶರತ್‌ ಶರ್ಮ ಎಂಬುವವರಿಗೂ ಗೌರವ ಡಾಕ್ಟರೇಟ್‌ ಘೋಷಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್