ಶಿವಣ್ಣನ ಹುಟ್ಟುಹಬ್ಬಕ್ಕೆ ಸಾಲು ಸಾಲು ಸಿನಿಮಾ ಘೋಷಣೆ

shivarajkumar
  • ʼಘೋಸ್ಟ್‌ʼ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದ ಕಿಚ್ಚ
  • ಶಿವಣ್ಣನಿಗೆ ಆಕ್ಷನ್‌ ಕಟ್‌ ಹೇಳಲು ಸಜ್ಜಾದ ಅರ್ಜುನ್‌ ಜನ್ಯಾ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಇಂದು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಹೊಸ ಸಿನಿಮಾಗಳು ಕೂಡ ಘೋಷಣೆಯಾಗಿವೆ.

ನಟ ಶ್ರೀನಿ ನಿರ್ದೇಶಿಸುತ್ತಿರುವ ʼಘೋಸ್ಟ್ʼ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್ ಅನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದು, ಚಿತ್ರತಂಡ ಮತ್ತು ಶಿವಣ್ಣನಿಗೆ ಶುಭ ಹಾರೈಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಶಿವಣ್ಣ ಮತ್ತು ಪ್ರಭುದೇವ ಮುಖ್ಯಭೂಮಿಕೆಯ ಮಲ್ಟಿಸ್ಟಾರರ್‌ ಚಿತ್ರದ ಫಸ್ಟ್‌ಲುಕ್‌ ಕೂಡ ಇಂದು ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ರಾಕ್‌ಲೈನ್‌ ವೆಂಕಟೇಶ್‌ ಬಂಡವಾಳ ಹೂಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ವಿಡಿಯೋ ಸ್ಟೋರಿ | ಕರುನಾಡ ಚಕ್ರವರ್ತಿಗೆ ಹುಟ್ಟು ಹಬ್ಬದ ಸಂಭ್ರಮ

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಕೂಡ ನಿರ್ದೇಶನಕ್ಕೆ ಕಾಲಿಟ್ಟಿದ್ದು, ಅವರೇ ಕತೆ ಬರೆದು, ನಿರ್ದೇಶಿಸುತ್ತಿರುವ ಚಿತ್ರದ ಟೈಟಲ್ ಕೂಡ ಇಂದು ಘೋಷಣೆಯಾಗಿದೆ. ಶಿವಣ್ಣ ಮತ್ತು ಅರ್ಜುನ್‌ ಜನ್ಯಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ʼ45ʼ (ಫಾರ್ಟಿಫೈವ್‌) ಎಂದು ಹೆಸರಿಡಲಾಗಿದೆ.

ಸಂಜನಾ ಸಿನಿ ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಸುಯೋಧನ' ಸೇರಿದಂತೆ ಇನ್ನೂ ಎರಡು ಹೆಸರಿಡದ ಚಿತ್ರಗಳು ಕೂಡ ಘೋಷಣೆಯಾಗಿವೆ. 60ರ ಹರೆಯದಲ್ಲೂ ಶಿವಣ್ಣ ಸಾಲು ಸಾಲು ಚಿತ್ರಗಳಲ್ಲಿ ತೊಡಗಿಕೊಳ್ಳುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್