ತಮಿಳು ಚಿತ್ರರಂಗದ ನಿರ್ಮಾಪಕ ಚೆಳಿಯಾನ್ ಮೇಲೆ ಐಟಿ ದಾಳಿ

  • ಅಧಿಕೃತ ಹೇಳಿಕೆ ಬಿಡುಗಡೆ ಮಾಡದ ಐಟಿ
  • ಅದ್ದೂರಿ ಮದುವೆ ಬಳಿಕ ಐಟಿ ದಾಳಿ

ತಮಿಳು ಚಿತ್ರರಂಗದ ಖ್ಯಾತ ಫೈನಾನ್ಶಿಯರ್ ಮತ್ತು ನಿರ್ಮಾಪಕ ಜಿಎನ್ ಅನ್ಬು ಚೆಳಿಯಾನ್ ಅವರಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ 5 ಗಂಟೆಯಿಂದ ಕಾರ್ಯಚರಣೆ ನಡೆಸುತ್ತಿದ್ದಾರೆ.

ಅನ್ಬು ಚೆಳಿಯಾನ್ ಅವರು ತಮಿಳು ಚಲನಚಿತ್ರಗಳನ್ನು ನಿರ್ಮಿಸುವ ಮತ್ತು ವಿತರಿಸುವ ಗೋಪುರಂ ಫಿಲ್ಮ್ಸ್‌ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು. ನಿರ್ಮಾಪಕರಾಗಿ ಅವರು ಆಂಡವನ್ ಕಟ್ಟಲೈ (2016), ವೆಲೈಕಾರ ದುರೈ (2014), ತಂಗ ಮಗನ್ (2015), ಮರುದು (2016) ನಂತಹ ಹಿಟ್ ಚಲನಚಿತ್ರಗಳ ತಮಿಳು ಚಿತ್ರರಂಗಕ್ಕೆ ನೀಡಿದ್ದಾರೆ.

ಚೆನ್ನೈನಲ್ಲಿ ಚೆಳಿಯಾನ್ ಅವರ ಮಗಳ ಅದ್ಧೂರಿ ವಿವಾಹ ನಡೆದ ಕೇವಲ ಐದು ತಿಂಗಳ ನಂತರ ಈ ಬೆಳವಣಿಗೆ ಕಂಡು ಬಂದಿದೆ. ಮದುವೆಯು ಇಡೀ ಭಾರತಾದ್ಯಂತ ಸದ್ದು ಮಾಡಿತ್ತು. ರಜನೀಕಾಂತ್, ಕಮಲ್ ಹಾಸನ್, ಸೂರ್ಯರಿಂದ ಹಿಡಿದು ಬೋನಿ ಕಪೂರ್‌ವರೆಗಿನ ವ್ಯಕ್ತಿಗಳು ಮದುವೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಲವು ರಾಜಕಾರಣಿಗಳು ಕೂಡ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಅಪ್ಪು ಅವಹೇಳನ ; ಅಭಿಮಾನಿಗಳ ಆಕ್ರೋಶದ ಬೆನ್ನಲ್ಲೇ ಕ್ಷಮೆ ಯಾಚಿಸಿದ ಚಕ್ರವರ್ತಿ ಸೂಲಿಬೆಲೆ

ಮಂಗಳವಾರ ಬೆಳಗ್ಗೆ 6 ಗಂಟೆಗೆ ಚೆನ್ನೈನಲ್ಲಿರುವ ಅವರ ಮನೆ, ಮಧುರೈನಲ್ಲಿ ಥಿಯೇಟರ್ ಸೇರಿದಂತೆ 40 ಕಡೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ದಾಳಿ ಕುರಿತಂತೆ ಐಟಿ ಇಲಾಖೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ತೆರಿಗೆ ವಂಚನೆ ಆರೋಪದ ಮೇಲೆ ಅನ್ಬು ಅವರ ನಿವಾಸಗಳು ಮತ್ತು ಕಚೇರಿಗಳಲ್ಲಿ ಮುಂಜಾನೆಯಿಂದ ಶೋಧ ಪ್ರಾರಂಭವಾಗಿದೆ.  ಕಲೈಪುಲಿ ಥಾನು, ಎಸ್‌ಆರ್ ಪ್ರಭು, ಅನ್ಬು ಚೆಳಿಯಾನ್ ಹಾಗೂ ಜ್ಞಾನವೇಲ್ ರಾಜಾ ಸೇರಿದಂತೆ ಸುಮಾರು 10 ತಮಿಳು ಚಲನಚಿತ್ರ ನಿರ್ಮಾಪಕರು ಮತ್ತು ವಿತರಕರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

2022ರ ಫೆಬ್ರವರಿ 5ರಂದು ತಮಿಳು ಚಲನಚಿತ್ರೋದ್ಯಮಕ್ಕೆ ಸೇರಿದ ಪ್ರಮುಖ ವ್ಯಕ್ತಿಗಳ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿತ್ತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡಿನಾದ್ಯಂತ 38 ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು. ನಟ ವಿಜಯ್ ಮತ್ತು ಫೈನಾನ್ಶಿಯರ್ ಅನ್ಬು ಚೆಳಿಯಾನ್ ಸೇರಿದಂತೆ ಕಾಲಿವುಡ್‌ನ ನಾಲ್ವರು ಪ್ರಮುಖ ವ್ಯಕ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್