ವಂಚನೆ ಪ್ರಕರಣ | ಮತ್ತೆ ದೆಹಲಿ ಪೊಲೀಸರ ವಿಚಾರಣೆಗೆ ಹಾಜರಾದ ಜಾಕ್ವೆಲಿನ್‌

jacqueline fernandez
  • ಎಂಟು ದಿನದಲ್ಲಿ ಎರಡನೇ ಬಾರಿ ನಟಿಯ ವಿಚಾರಣೆ
  • ಸುಕೇಶ್‌ ಮದುವೆಯಾಗಲು ನಿರ್ಧರಿಸಿದ್ದರೇ ಜಾಕ್ವೆಲಿನ್‌?

ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇಂದು ಮತ್ತೊಮ್ಮೆ ದೆಹಲಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿಯ ಆರ್ಥಿಕ ಅಪರಾಧ ವಿಭಾಗದ ಅಧಿಕಾರಗಳು ಇಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ದೆಹಲಿ ತಲುಪಿರುವ ಜಾಕ್ವೆಲಿನ್‌ ವಿಚಾರಣೆಗೆ ಹಾಜರಾಗಿದ್ದಾರೆ.

Eedina App

200 ಕೋಟಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಎನ್ನಿಸಿಕೊಂಡಿರುವ ಸುಕೇಶ್ ಚಂದ್ರಶೇಖರ್ ಜೊತೆಗೆ ನಂಟು ಹೊಂದಿದ್ದ ಜಾಕ್ವೆಲಿನ್ ಅಕ್ರಮದ ಹಣ ಎಂದು ತಿಳಿದ ಮೇಲೂ ಆರೋಪಿಯಿಂದ 7 ಕೋಟಿಗೂ ಅಧಿಕ ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದರು.

AV Eye Hospital ad

ಕಳೆದ ವಾರ ಕೂಡ ಜಾಕ್ವೆಲಿನ್‌ ದೆಹಲಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಬರೋಬ್ಬರಿ 8 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಜಾಕ್ವೆಲಿನ್‌, "ಸುಕೇಶ್‌ ಚಂದ್ರಶೇಖರ್‌ನನ್ನು ಮದುವೆಯಾಗಲು ಯೋಜಿಸಿದ್ದೆ" ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು. ಜಾಕ್ವೆಲಿನ್‌ ಬಳಿಕ ಬಾಲಿವುಡ್‌ನ ಮತ್ತೋರ್ವ ನಟಿ ನೋರಾ ಫತೇಹಿ ಅವರ ವಿಚಾರಣೆ ಕೂಡ ನಡೆಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app