ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಮಾಂಟಿ ನಾರ್ಮನ್‌ ನಿಧನ

monty norman
  • ಜೇಮ್ಸ್‌ ಬಾಂಡ್‌ ಸರಣಿಗೆ ಥೀಮ್‌ ಸಾಂಗ್‌ ಬರೆದಿದ್ದ ಮಾಂಟಿ ನಾರ್ಮನ್‌
  • ಮಾಂಟಿ ನಾರ್ಮನ್‌ ಅಧಿಕೃತ ವೆಬ್‌ ತಾಣದಲ್ಲಿ ಸಾವಿನ ಸುದ್ದಿ ಪ್ರಕಟ

ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಮಾಂಟಿ ನಾರ್ಮನ್‌ ಜುಲೈ 11ರಂದು ನಿಧನರಾಗಿದ್ದಾರೆ. ಮಾಂಟಿ ಅವರ ಅಧಿಕೃತ ವೆಬ್‌ತಾಣದಲ್ಲಿ ಅವರ ಸಾವಿನ ಸುದ್ದಿ ತಿಳಿಸಲಾಗಿದೆ. 

94 ವರ್ಷದ ಮಾಂಟಿ ನಾರ್ಮನ್ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಪೂರ್ವ ಲಂಡನ್‌ ಮೂಲದ ಮಾಂಟಿ ನಾರ್ಮನ್‌ 1950ರಲ್ಲಿ ಜ್ಯಾಜ್‌ ಆರ್ಕೆಸ್ರ್ಟಾ ಬ್ಯಾಂಡ್‌ಗಳಲ್ಲಿ ಹಾಡುವ ಮೂಲಕ ಗಾಯಕನಾಗಿ ತಮ್ಮ ವೃತ್ತಿ ಬದುಕು ಪ್ರಾರಂಭಿಸಿದ್ದರು. ಸಿರಿಲ್‌ ಸ್ಟೆಪಲ್ಟನ್‌, ಸ್ಟಾನ್ಲೀ ಬ್ಲಾಕ್‌ ಟೆಡ್‌ ಹೀಥ್‌ ಮುಂತಾದವರ ಆರ್ಕೆಸ್ಟ್ರಾ ತಂಡಗಳಲ್ಲಿ ಗಾಯಕನಾಗಿ ಗುರುತಿಸಿಕೊಂಡ 60 ದಶಕದಲ್ಲಿ ಸಂಗೀತ ನಿರ್ದೇಶಕನಾಗಿಯೂ ವಿಶ್ವವಿಖ್ಯಾತಿ ಗಳಿಸುತ್ತಾರೆ. ಗೀತರಚನೆಕಾರನಾಗಿಯೂ ಹೆಸರು ಮಾಡುತ್ತಾರೆ.

ಮಾಂಟಿ ನಾರ್ಮನ್‌ ಕಂಠಸಿರಿಯಲ್ಲಿ ಮೂಡಿಬಂದಿದ್ದ ʼಫಾಲ್ಸ್‌ ಹಾರ್ಟೆಡ್‌ ಲವರ್‌ʼ ಹಾಡು 60ರ ದಶಕದಲ್ಲೇ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿತ್ತು. 1960 ಮತ್ತು 70ರ ನಡುವೆ ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ನಾರ್ಮನ್‌, ಮುಂದೆ ಹಾಲಿವುಡ್‌ನ ಭಾಗವಾದರು.

ಈ ಸುದ್ದಿ ಓದಿದ್ದೀರಾ? ಸಂದರ್ಶನ | ಪೆಟ್ರೋಮ್ಯಾಕ್ಸ್‌ ಅಂದರೆ ಬದುಕು ಮತ್ತು ಬೆಳಕು: ನಿರ್ದೇಶಕ ವಿಜಯ್‌ ಪ್ರಸಾದ್‌

ʼಹ್ಯಾಮರ್‌ʼ, ʼದಿ ಟು ಫೇಸ್‌ ಆಫ್‌ ದಿ ಡಾ ಜೆಕಿಲ್‌ʼ, ʼದಿ ಡೇ ದಿ ಅರ್ಥ್‌ ಕಾಟ್‌ ಫೈರ್‌ʼ, ʼಕಾಲ್‌ ಮಿ ಬ್ವಾನಾʼ ಸಂಗೀತ ಸಂಯೋಜನೆ ಮಾಡಿದ್ದ ಮಾಂಟಿ ನಾರ್ಮನ್‌ ಜೇಮ್ಸ್‌ ಬಾಂಡ್‌ ಸರಣಿಯ ಥೀಮ್‌ ಗೀತೆಯನ್ನು ರಚಿಸಿದ್ದರು. ಜೇಮ್ಸ್‌ ಬಾಂಡ್‌ ಸರಣಿಯ ಮೊದಲ ಚಿತ್ರ ʼಡಾ. ನೋʼಗೆ ಹಿನ್ನೆಲೆ ಸಂಗೀತ ನೀಡುವ ಮೂಲಕ ಜಗತ್ಪ್ರಸಿದ್ಧರಾದರು.

ನಿಮಗೆ ಏನು ಅನ್ನಿಸ್ತು?
0 ವೋಟ್