'ಜೇಮ್ಸ್‌' ಚಿತ್ರದ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಸ್ಥಿತಿ ಗಂಭೀರ

james
  • ಕೋಮಾ ಸ್ಥಿತಿಯಲ್ಲಿ ಕಿಶೋರ್‌ ಪತ್ತಿಕೊಂಡ
  • ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ 

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ 'ಜೇಮ್ಸ್‌' ಚಿತ್ರದ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರ ರಾತ್ರಿ ಮನೆಯಲ್ಲಿ ಮೂರ್ಛೆ ಹೋಗಿದ್ದ ಕಿಶೋರ್‌ ಅವರನ್ನು ಕುಟುಂಬಸ್ಥರು ಕೂಡಲೇ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತ ಒತ್ತಡದಿಂದಾಗಿ ಕಿಶೋರ್‌ಗೆ ಬ್ರೇನ್‌ ಸ್ಟ್ರೋಕ್‌ ಆಗಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಕೋಮಾ ಸ್ಥಿತಿಯಲ್ಲಿರುವ ಅವರನ್ನು ಸದ್ಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಜನುಮದಿನ | ಮೆಕ್ಯಾನಿಕ್‌ ಆಗಿ ಸೆಟ್ಲ್ ಆಗಬೇಕೆಂದು ಬಯಸಿದ್ದ ರಾಜ್‌ ಬಿ ಶೆಟ್ಟಿ ನಿರ್ದೇಶಕನಾದ ಕತೆ

ಹೊಸಪೇಟೆ ಮೂಲದವರಾದ ಕಿಶೋರ್‌ ಮೂಲತಃ ಥಿಯೇಟರ್‌ ಮಾಲಿಕರು. ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿ. ಅಪ್ಪು ಅವರ ಸಿನಿಮಾ ನಿರ್ಮಿಸುವ ಕನಸು ಹೊತ್ತಿದ್ದ ಕಿಶೋರ್‌ ಹಲವು ವರ್ಷಗಳ ಕಾಯುವಿಕೆಯ ಬಳಿಕ ಪುನೀತ್‌ ಅವರ ಡೇಟ್ಸ್‌ ಪಡೆದುಕೊಂಡು 'ಜೇಮ್ಸ್‌' ಚಿತ್ರವನ್ನು ನಿರ್ಮಿಸಿದ್ದರು. ಆದರೆ, ಚಿತ್ರ ಡಬ್ಬಿಂಗ್‌ ಹಂತದಲ್ಲಿರುವಾಗಲೇ ಪುನೀತ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್