ʻಎಮರ್ಜೆನ್ಸಿʼ ಫಸ್ಟ್‌ಲುಕ್‌ ಬಿಡುಗಡೆ: ಇಂದಿರಾ ಗಾಂಧಿ ಲುಕ್‌ನಲ್ಲಿ ಕಂಗನಾ

emergency
  • ತುರ್ತು ಪರಿಸ್ಥಿತಿಯ ನೈಜ ಘಟನೆಗಳಾಧಾರಿತ ಚಿತ್ರ
  • 2023ಕ್ಕೆ ತೆರೆಗೆ ಬರಲಿರುವ ʼಎಮರ್ಜೆನ್ಸಿʼ

ಬಾಲಿವುಡ್‌ ನಟಿ ಕಂಗನಾ ರಣಾವತ್‌ ನಟನೆಯ ʼಎಮರ್ಜೆನ್ಸಿʼ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿ ಕಂಗನಾ ಕಾಣಿಸಿಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷರ ಆಪ್ತ ಸಹಾಯಕನ ಕರೆಯಿಂದ ಪ್ರಾರಂಭವಾಗುವ ʼಎಮರ್ಜೆನ್ಸಿʼ ಫಸ್ಟ್‌ಲುಕ್‌ ವಿಡಿಯೋ, 70 ಮತ್ತು 80ರ ದಶಕದಲ್ಲಿದ್ದ ಇಂದಿರಾ ಗಾಂಧಿ ಅವರ ಪ್ರಭಾವವನ್ನು ಪರಿಚಯಿಸುತ್ತದೆ. ಅಮೆರಿಕಾ ಅಧ್ಯಕ್ಷರು ನಿಮ್ಮೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುವಾಗ ನಿಮ್ಮನ್ನು ಮೇಡಂ ಎಂದು ಸಂಬೋಧಿಸಿಬಹುದೇ? ಎಂಬ ಪ್ರಶ್ನೆಯೊಂದಿಗೆ ಇಂದಿರಾ ಗಾಂಧಿ ಪಾತ್ರದ ಪರಿಚಯವಾಗುತ್ತದೆ. "ಮೇಡಂ ಎಂದು ಕರೆದರೆ ನನ್ನ ಅಭ್ಯಂತರವೇನು ಇಲ್ಲ" ಎನ್ನುವ ಇಂದಿರಾ ಗಾಂಧಿ, "ನನ್ನ ಕಚೇರಿಯಲ್ಲಿ ನನ್ನನ್ನು ಎಲ್ಲರೂ ಸರ್‌ ಎಂದೇ ಕರೆಯುತ್ತಾರೆ ಎಂಬುದನ್ನು ಅಮೆರಿಕದ ಅಧ್ಯಕ್ಷರಿಗೆ ತಿಳಿಸಿ ಎನ್ನುತ್ತಾರೆ. ಕೊನೆಯಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ ಬಗೆಗಿನ ಮಾಧ್ಯಮ ವರದಿಯನ್ನು ತೋರಿಸಲಾಗಿದೆ.

 

ಸ್ವತಃ ಕಂಗನಾ ಅವರೇ ಕತೆ ಬರೆದು, ನಿರ್ದೇಶಿಸಿ, ನಟಿಸುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿ ಕಾಲಘಟ್ಟದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಇಂದಿರಾ ಗಾಂಧಿಯಂತೆ ಕಾಣಲು ಕಂಗನಾ ಸಾಕಷ್ಟು ತಯಾರಿ ನಡೆಸಿದ್ದಾರೆ ಎಂಬುದು ಫಸ್ಟ್‌ಲುಕ್‌ ವಿಡಿಯೋದಲ್ಲಿನ ಅವರ ಆಂಗಿಕ ಅಭಿನಯ ಮತ್ತು ಧ್ವನಿ ಬದಲಾವಣೆಯಿಂದಲೇ ಸ್ಪಷ್ಟವಾಗುತ್ತದೆ.

ಈ ಸುದ್ದಿ ಓದಿದ್ದೀರಾ? ತೆರೆಗೆ ಸಜ್ಜಾದ ಅಪ್ಪು ಕೊನೆಯ ಚಿತ್ರ ʻಲಕ್ಕಿಮ್ಯಾನ್‌ʼ

ಧಾಕಡ್‌ ಸಿನಿಮಾದ ಹೀನಾಯ ಸೋಲಿನಿಂದ ಇನ್ನೂ ಚೇತರಿಸಿಕೊಳ್ಳದ ಕಂಗನಾ, ತಮ್ಮ ಮಣಿಕರ್ಣಿಕಾ ಫಿಲಂಸ್‌ ಬ್ಯಾನರ್‌ನಡಿಯಲ್ಲಿ ʼಎಮರ್ಜೆನ್ಸಿʼ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಂಗನಾ ನಿರ್ದೇಶನದ ಈ ಚಿತ್ರಕ್ಕೆ ರಿತೇಶ್‌ ಶಾ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸದ್ಯ ಎಮರ್ಜೆನ್ಸಿ ಚಿತ್ರೀಕರಣ ಆರಂಭವಾಗಿದ್ದು, 2023ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್