ಬಾಲಕಿಯರ ಎದುರು ಅಸಭ್ಯ ವರ್ತನೆ: ಮಲಯಾಳಂ ನಟ ಶ್ರೀಜಿತ್‌ ರವಿ ಬಂಧನ

shreejith

ಬಾಲಕಿಯರ ಎದುರು ಅಸಭ್ಯ ವರ್ತನೆ ತೋರಿದ ಆರೋಪದಲ್ಲಿ ಮಲಯಾಳಂ ನಟ ಶ್ರೀಜಿತ್‌ ರವಿ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಪಾರ್ಕ್‌ನಲ್ಲಿ ನಟ ಶ್ರೀಜಿತ್‌ ಗುಪ್ತಾಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆಂದು 14 ಮತ್ತು 9 ವರ್ಷದ ಬಾಲಕಿಯರಿಬ್ಬರು ಜುಲೈ 4ರಂದು ಸ್ಥಳೀಯ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. 

ಬಾಲಕಿಯರ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪಾರ್ಕಿಗೆ ತೆರಳಿ ಅಲ್ಲಿ ಅಳವಡಿಸಲಾಗಿರುವ ಸಿಸಿಟವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ಶ್ರೀಜಿತ್‌ ಅವರಿಗೆ ಸೇರಿದ ಕಪ್ಪು ಬಣ್ಣದ ಕಾರಿನಲ್ಲಿ ಬಂದ ವ್ಯಕ್ತಿ ಪಾರ್ಕಿನಲ್ಲಿ ಕೂತಿದ್ದ ಬಾಲಕಿಯರ ಎದುರು ಅಸಭ್ಯವಾಗಿ ವರ್ತಿಸಿರುವುದು ಕಂಡುಬಂದಿದೆ. 

ಈ ಸುದ್ದಿ ಓದಿದ್ದೀರಾ?: ಕಾಳಿ ವಿವಾದ | ನನ್ನ ಕಾಳಿ ಶಕ್ತಿ, ಸತ್ಯ ಹಾಗೂ ಸ್ವಾತಂತ್ರ್ಯದ ಅಚಲ ಚೇತನ ಎಂದ ನಿರ್ದೇಶಕಿ ಲೀನಾ

ಈ ಹಿನ್ನೆಲೆ ಶ್ರೀಜಿತ್‌ ರವಿಯನ್ನು ಗುರುವಾರ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. 2016ರಲ್ಲಿ ಇಂತಹದ್ದೇ ಪ್ರಕರಣದಲ್ಲಿ ಶ್ರೀಜಿತ್‌ ಅವರು ಪಾಲಕ್ಕಡ್‌ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. 46 ವರ್ಷದ ಶ್ರೀಜಿತ್‌ ಮಲಯಾಳಂ ಭಾಷೆಯ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್