ಮಲಯಾಳಂ ನಟ ಶ್ರೀಜಿತ್ ರವಿಗೆ ಜಾಮೀನು

SreejithRavi
  • ಬಾಲಕಿಯ ಎದುರು ಗುಪ್ತಾಂಗ ಪ್ರದರ್ಶಿಸಿದ್ದ ರವಿ
  • ನಟನಿಗೆ ಚಿಕಿತ್ಸೆ ಕೊಡಿಸುವಂತೆ ಹೈಕೋರ್ಟ್‌ ತಾಕೀತು

ತ್ರಿಶೂರ್‌ನ‌ ಪಾರ್ಕ್‌ನಲ್ಲಿ ಅಪ್ರಾಪ್ತ ಬಾಲಕಿಯರ ಎದುರು ಅಸಭ್ಯವಾಗಿ ವರ್ತಿಸಿ ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ ಶ್ರೀಜಿತ್ ರವಿಗೆ ಕೇರಳ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನಟನ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಕಳೆದ ಆರು ವರ್ಷಗಳಿಂದ ವರ್ತನೆಯ ಅಸ್ವಸ್ಥತೆ ಕಾರಣಕ್ಕೆ ರವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವಕೀಲರ ವಾದವನ್ನು ಪರಿಗಣಿಸಿ ಅವರಿಗೆ ಜಾಮೀನು ನೀಡಿದೆ.

ಕೆಲ ಷರತ್ತುಗಳ ಜೊತೆಗೆ ನಟನಿಗೆ ಜಾಮೀನು ನೀಡಲಾಗಿದ್ದು, ರವಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಇಚ್ಛೆಯನ್ನು ದೃಢೀಕರಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸುವಂತೆ ನಟನ ಪತ್ನಿ ಮತ್ತು ತಂದೆಗೆ ಹೈಕೋರ್ಟ್‌ ಸೂಚಿಸಿದೆ. ರವಿ ಇನ್ನು ಮುಂದೆ ಈ ರೀತಿ ಕಾನೂನು ಬಾಹಿರ ಕೃತ್ಯ ಮುಂದುವರಿಸಿದರೆ ಜಾಮೀನು ರದ್ದುಗೊಳಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.  

ಈ ಸುದ್ದಿ ಓದಿದ್ದೀರಾ? ಬಹುಭಾಷಾ ನಟ ಪ್ರತಾಪ್‌ ಪೋಥೆನ್‌ ನಿಧನ

ಜುಲೈ 4ರಂದು ತ್ರಿಶೂರ್‌ನ ಅಯ್ಯಂತೊಳೆ ಎಸ್ ಎನ್ ಪಾರ್ಕ್‌ನಲ್ಲಿ ಇಬ್ಬರು ಬಾಲಕಿಯರ ಎದುರು ಗುಪ್ತಾಂಗ ಪ್ರದರ್ಶಿಸಿದ ಆರೋಪದ ಮೇಲೆ ರವಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್