ಕೆಜಿಎಫ್‌-2 ಕಿರುತೆರೆ ಪ್ರಸಾರಕ್ಕೆ ಮುಹೂರ್ತ ಫಿಕ್ಸ್‌

KGF2
  • ಕೆಜಿಎಫ್‌ ಚಾಪ್ಟರ್‌ 2 ಕಿರುತೆರೆ ಪ್ರಸಾರಕ್ಕೆ ದಿನಗಣನೆ ಶುರು
  • ಟ್ವೀಟ್‌ ಮೂಲಕ ಸಿಹಿ ಸುದ್ದಿ ಹಂಚಿಕೊಂಡ ಝೀ ಕನ್ನಡ ವಾಹಿನಿ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು. ತೆರೆಕಂಡ ಕೆಲ ದಿನಕ್ಕೆ ಅಮೆಝಾನ್‌ ಪ್ರೈಂನಲ್ಲೂ ಬಿಡುಗಡೆಯಾಗಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದ ಡಿಜಿಟಲ್‌ ಹಕ್ಕು ಅಮೆಝಾನ್‌ ಪ್ರೈಂ ಪಾಲಾದರೆ, ಸ್ಯಾಟಲೈಟ್‌ ಹಕ್ಕನ್ನು ಕನ್ನಡ ಕಿರುತೆರೆಯ ಜನಪ್ರಿಯ ಮನರಂಜನಾ ವಾಹಿನಿ ʼಝೀ ಕನ್ನಡʼ ಖರೀದಿ ಮಾಡಿತ್ತು. ಇದೀಗ ಟ್ವಿಟರ್‌ ಮೂಲಕ ಕೆಜಿಎಫ್‌ ಚಾಪ್ಟರ್‌ 2 ಪ್ರೋಮೋ ವಿಡಿಯೋವನ್ನು ಹಂಚಿಕೊಂಡಿರುವ ಝೀ ಕನ್ನಡ ವಾಹಿನಿ ಚಿತ್ರದ ಪ್ರಸಾರಗೊಳ್ಳುತ್ತಿರುವ ದಿನವನ್ನು ಬಹಿರಂಗ ಪಡಿಸಿದೆ. 

ಪ್ರೋಮೋ ವಿಡಿಯೋ ಹಂಚಿಕೊಂಡು ಟ್ವೀಟ್‌ ಮಾಡಿರುವ ಝೀ ಕನ್ನಡ ವಾಹಿನಿ, "ಸ್ವಾರ್ಥಿ, ವಿಲನ್ನು, ಕ್ರಿಮಿನಲ್.. ಆದರೆ ಅಮ್ಮನ ಕನಸಿನ ಗುರಿ ಮುಟ್ಟೋದೇ ಈ ಹೀರೋ ಟಾರ್ಗೆಟ್! ಆಗಸ್ಟ್‌ 20ರಂದು ಸಂಜೆ 7 ಗಂಟೆಗೆ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಪ್ರಸಾರವಾಗಲಿದೆ" ಎಂದು ಮಾಹಿತಿ ಹಂಚಿಕೊಂಡಿದೆ. 

 

ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕೆಜಿಎಫ್‌ ಚಾಪ್ಟರ್‌ 2 ವಿಶ್ವಾದ್ಯಂತ ಬರೋಬ್ಬರಿ ₹1250 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್