ಲುಲು ಮಾಲ್‌ನಲ್ಲಿ ನಡೆಯಲಿದೆ ವಿಕ್ರಾಂತ್‌ ರೋಣ ಅದ್ಧೂರಿ ಪ್ರೀಮಿಯರ್‌ ಶೋ ; ಉಪೇಂದ್ರ ಮುಖ್ಯ ಅತಿಥಿ

vikrant rona
  • ವಿಕ್ರಾಂತ್‌ ರೋಣನಿಗೆ ಹೆಗಲಾದ ಉಪ್ಪಿ
  • ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾದ ಕಿಚ್ಚ

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಸಿನಿಮಾ ತೆರೆಗೆ ಬರಲು ದಿನಗಣನೆ ಶುರುವಾಗಿದೆ. ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗಿದ್ದು, ಮುಂಬೈ, ಹೈದರಾಬಾದ್‌ ಬಳಿಕ ಇಂದು ಬೆಂಗಳೂರಿನಲ್ಲಿ ಚಿತ್ರದ ʼಪ್ರೀಮಿಯರ್‌ ಶೋʼ ಆಯೋಜನೆಗೊಂಡಿದೆ.

ಬೆಂಗಳೂರಿನ ʼಲುಲು ಗ್ಲೋಬಲ್‌ ಮಾಲ್‌ʼನಲ್ಲಿ ಇಂದು ಸಂಜೆ 6:30ಕ್ಕೆ ಚಿತ್ರದ ಪ್ರೀಮಿಯರ್‌ ಶೋ ಆಯೋಜನೆಗೊಂಡಿದ್ದು, ಸುದೀಪ್‌ ಅವರ ಆಪ್ತ, ನಟ ಉಪೇಂದ್ರ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸೋಮವಾರ ಮುಂಬೈನಲ್ಲಿ 'ವಿಕ್ರಾಂತ್‌ ರೋಣ' ಚಿತ್ರದ ಹಿಂದಿ ಅವತರಣಿಕೆಯ ಪ್ರೀಮಿಯರ್‌ ಶೋ ಅದ್ಧೂರಿಯಾಗಿ ಜರುಗಿದೆ. ಚಿತ್ರ ಹಿಂದಿ ಅವತರಣಿಕೆಯ ವಿತರಣೆ ಹಕ್ಕನ್ನು ಖರೀದಿಸಿರುವ ಬಾಲಿವುಡ್‌ ನಟ, ನಿರ್ಮಾಪಕ ಸಲ್ಮಾನ್‌ ಖಾನ್‌ ಪ್ರಿ ರೀಲೀಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಅದಾದ ಬಳಿಕ ಇಂದು ಮಧ್ಯಾಹ್ನದ ಹೊತ್ತಿಗೆ ಹೈದರಾಬಾದ್‌ ತಲುಪಿದ್ದ ಚಿತ್ರತಂಡ, 'ವಿಕ್ರಾಂತ್‌ ರೋಣ' ತೆಲುಗು ಅವತರಣಿಕೆಯ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲೂ ಭಾಗಿಯಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ, ಕಿಚ್ಚ ಸುದೀಪ್‌ ಮತ್ತು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಗ್ನ ಫೋಟೋಶೂಟ್‌ ಪ್ರಕರಣ; ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲು

ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ವಿಕ್ರಾಂತ್‌ ರೋಣ' ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿ 5 ಭಾಷೆಗಳಲ್ಲಿ ಸಿದ್ಧಗೊಂಡಿದ್ದು, ಜುಲೈ 28ರಂದು ದುಬೈ, ಅಮೆರಿಕ, ಜರ್ಮನಿ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಲ್ಲಿ ತೆರೆ ಕಾಣಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್