ಈ ದಿನ ವಿಶೇಷ | ಪೊನ್ನಿನ್‌ ಸೆಲ್ವನ್‌ ಚಿತ್ರವಾಗಿಸುವುದು ಮಣಿರತ್ನಂಗೆ ಮಾತ್ರ ಸಾಧ್ಯ, ನಾನೂ ಭಾಗವಾಗಿರೋದು ಒಂದು ಗೌರವ; ಕಿಶೋರ್‌

Kishore Actor
  • ದಕ್ಷಿಣ ಭಾರತದ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರದಲ್ಲಿ ಕನ್ನಡದ ನಟ
  • ಕಲ್ಕಿ ಕೃಷ್ಣಮೂರ್ತಿ ಕಾದಂಬರಿ ಸರಣಿ  ಆಧರಿಸಿದ ಐತಿಹಾಸಿಕ ಚಿತ್ರ

ಒಟಿಟಿಯಲ್ಲಿ ಕ್ಷೇತ್ರದಲ್ಲಿ ಬಹುಭಾಷೆಗಳಲ್ಲಿ ಬೇಡಿಕೆಯಲ್ಲಿರುವ ಕನ್ನಡದ ನಟ ಕಿಶೋರ್‌ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್‌ ಸೆಲ್ವನ್‌' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿದಾಸನ್‌ ಎಂಬ ಖಳ ಪಾತ್ರದಲ್ಲಿ ಮಿಂಚಲಿದ್ದಾರೆ!

ಈ ದಿನ.ಕಾಮ್‌ ನೊಂದಿಗೆ ಮಾತನಾಡಿದ ಕಿಶೋರ್‌ ಈ ಸಂತಸದ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿರುವ ಕಿಶೋರ್‌, ಈ ಅವಕಾಶ ಒಂದು ರೀತಿಯ ಗೌರವ ಎಂದಿದ್ದಾರೆ.

ಕಿಶೋರ್‌ಗೆ ಮಣಿರತ್ನಂ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಈ ಮೊದಲು "ರಾವಣನ್‌" ಚಿತ್ರದ ಸಂದರ್ಭದಲ್ಲೇ ಒದಗಿ ಬಂದಿತ್ತು. ಆದರೆ  ಅವಕಾಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. 'ಪೊನ್ನಿಯಿನ್‌ ಸೆಲ್ವನ್‌' ಮತ್ತೆ ಆ ಅವಕಾಶವನ್ನು ಒದಗಿಸಿದೆ.

Image
Ponniyin Selvan

ಕಲ್ಕಿ ಕೃಷ್ಣಮೂರ್ತಿ ಅವರು ಚೋಳ ಸಾಮ್ರಾಜ್ಯ ಕುರಿತು ಬರೆದ 5 ಸಂಪುಟಗಳ ಕಾದಂಬರಿ ಆಧರಿಸಿದ ಚಿತ್ರ "ಪೊನ್ನಿಯಿನ್‌ ಸೆಲ್ವನ್‌". ಎರಡು ಭಾಗಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ಮೊದಲ ಭಾಗ ಈ ವರ್ಷ ಸೆಪ್ಟೆಂಬರ್‌ ಮೂರನೆಯ ವಾರದಲ್ಲಿ ಬಿಡುಗಡೆಯಾಗಲಿದೆ.

ಭಾರಿ ಮಹತ್ವಾಕಾಂಕ್ಷೆಯ ಈ ಚಿತ್ರದಲ್ಲಿ ಬಹುದೊಡ್ಡ ತಾರಾಗಣವೇ ಇದೆ. ವಿಕ್ರಮ್‌, ಪ್ರಕಾಶ್‌ ರೈ, ನಾಝರ್‌, ಜಯಂ ರವಿ, ಕಾರ್ತಿ, ಪಾರ್ತಿಬನ್, ಐಶ್ವರ್ಯ ರೈ, ತ್ರಿಶಾ, ವಿಕ್ರಮ್‌ ಪ್ರಭು, ಐಶ್ವರ್ಯ ಲಕ್ಷ್ಮಿ, ಅಶ್ವಿನ್‌ ಕಾಕಮನು, ರೆಹಮಾನ್, ಶರತ್‌, ಜಯರಾಮ್‌, ಪ್ರಭು, ಲಾಲ್‌ ಬಹುಮುಖ್ಯ ಪಾತ್ರಗಳಲ್ಲಿ ಕಾಣಿಸುತ್ತಿದ್ದಾರೆ.

ಕಿಶೋರ್‌ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಬಾಲಿ ಸೇರಿದಂತೆ ಹಲವು ಮುಖ್ಯ ಸಿನಿಮಾಗಳಲ್ಲಿ ಖಳನಾಯಕರಾಗಿ ನಟಿಸಿದ ಕಿಶೋರ್‌  'ಪೊನ್ನಿಯನ್‌ ಸೆಲ್ವನ್‌'ನಲ್ಲೂ ಖಳಪಾತ್ರದಲ್ಲಿ ನಟಿಸುತ್ತಿದ್ದಾರೆ.  ಐತಿಹಾಸಿಕ ಪಾತ್ರವಾಗಿದ್ದು, ವೀರಪಾಂಡ್ಯನ ಹತ್ಯೆಗೆ ಪ್ರತಿಕಾರದ ಪ್ರಯತ್ನ ನಡೆಸುವುದು ರವಿದಾಸನ್‌. ಇಂತಹ ವಿಶೇಷ ಪಾತ್ರ ತಮಗೆ ಸಿಕ್ಕ ಬಗ್ಗೆ ಕಿಶೋರ್‌ ಅವರಿಗೆ ಹೆಮ್ಮೆ ಇದೆ.

ಈ ಸುದ್ದಿ ಓದ್ದಿದ್ದೀರಾ? | ನನ್ನ ದೇವರು, ನನ್ನ ಭಕ್ತಿ, ನನ್ನ ಹಕ್ಕು: ವೈರಲ್‌ ಆದ ನಟ ಕಿಶೋರ್ ಪೋಸ್ಟ್‌

" ಅಷ್ಟು ದೊಡ್ಡಪ್ರಯತ್ನದಲ್ಲಿ ಭಾಗಿಯಾಗಿರೋದು ನನಗೆ ಗೌರವ. ಯೋಗ್ಯತೆ ಮೀರಿದ ಅವಕಾಶ. ಸಿನಿಮಾ ಚಿತ್ರೀಕರಣದಲ್ಲಿ ಓಡಾಡುವಾಗ ಯಾವ ಕಡೆ ನೋಡಿದರೂ ಹಿರಿಯ ಕಲಾವಿದರು. 'ಅರೆ ಇವರಿದ್ದಾರಾ? ಇವರಿದ್ದಾರಾ?" ಎಂದು ಅಚ್ಚರಿಯಾಗೋದು. ಒಂದು ದಿನ ಪಾರ್ತಿಬನ್‌, ಮತ್ತೊಂದು ದಿನ ಪ್ರಕಾಶ್‌ ರೈ, ಇನ್ನೊಂದು ದಿನ ರಹಮಾನ್‌ ಕಾಣಿಸುತ್ತಿದ್ದರು. ಇದೊಂದು ಅಪೂರ್ವ ಅವಕಾಶ" ಎಂದು ಸಂತಸ ವ್ಯಕ್ತಪಡಿಸಿದರು.

ಪೊನ್ನಿಯನ್‌ ಸೆಲ್ವನ್‌ ಚಿತ್ರದ ಕಥಾ ಹಂದರ ಕುರಿತು ಮಾತನಾಡುತ್ತಾ, " ಚೋಳರದ್ದು ದೊಡ್ಡ ಸಾಮ್ರಾಜ್ಯ.  ಭಾರತೀಯ ಇತಿಹಾಸದಲ್ಲಿ ಚೋಳರ ಕೊಡುಗೆ ಬಹಳ ದೊಡ್ಡದು. ಪಾಂಡಿಚೆರಿಯಲ್ಲಿ ಚೋಳರ ಬಂದರದಲ್ಲಿತ್ತು. ಅದನ್ನು ನಿರ್ಮಾಣ ಮಾಡಲು ಅರಬ್‌, ಫ್ರೆಂಚರು ಬಂದವರಂತೆ. ಆ ಕಾಲಕ್ಕೆ ಅಷ್ಟು ದೂರದ ದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದು ಚೋಳರು. ಅತಿ ದೊಡ್ಡ ನೌಕಪಡೆಯನ್ನು ಹೊಂದಿದ್ದರು. ಹಾಗಾಗಿ ಸಮುದ್ರವನ್ನಾಳಿದವರು ಚೋಳರೇ ಎಂಬ ಹೆಗ್ಗಳಿಕೆ ಅವರಿಗಿದೆ. ಐತಿಹಾಸಿಕ ಕಥೆಯ, ಕಲ್ಪನೆಯೂ ಇದೆ. ಸಿನಿಮಾ ಪ್ರಿಯರಿಗೆ ಅಪೂರ್ವವನ್ನು ನೀಡಲಿದೆ" ಎಂದು ಸಿನಿಮಾದ ಹಿನ್ನೆಲೆಯನ್ನು ಕಿಶೋರ್‌ ಬಿಚ್ಚಿಟ್ಟರು.

ಬಹು ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ದಕ್ಷಿಣ ಭಾರತದ ಬಿಡುಗಡೆಯಾಗಲಿರುವ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಎಂದು ಕೇಳಿದಾಗ ಕಿಶೋರ್‌ ವ್ಯಾಖ್ಯಾನಿಸಿದ್ದು ಹೀಗೆ, " ಪ್ಯಾನ್‌ ಇಂಡಿಯಾ ಸಿನಿಮಾಗಳ ಇದುವರೆಗಿನ ಯಶಸ್ಸು ನಿರೀಕ್ಷಿತವೇನಲ್ಲ. ಅನಿರೀಕ್ಷಿತವಾಗಿಯೇ ಆಗಿರುವುದು. ಕೋವಿಡ್‌ನಿಂದ ಹೈರಾಣಾಗಿದ್ದ ಜನರಿಗೆ ಮನರಂಜನೆ ಬೇಕಿತ್ತು. ಸಿನಿಮಾಗಳು ಯಶ ಕಂಡರು. ಆದರೆ ಮಣಿರತ್ನಂ ಅವರಿಗೆ ತಮಿಳಿನ ಜೊತೆಗೆ ಹಿಂದಿ ಆಡಿಯನ್ಸ್‌ ಕೂಡ ಇದ್ದಾರೆ. ಮಣಿರತ್ನಂ ಚಿತ್ರ ನಿರ್ಮಾಣದ ಕೌಶಲ್ಯ, ಶೈಲಿಯಿಂದಾಗಿ ಈ ಚಿತ್ರ ದೊಡ್ಡ ಯಶಸ್ಸು ಕಾಣಬಹುದು ಎಂಬ ನಂಬಿಕೆ ಇದೆ" ಎಂದರು. 

ಜುಲೈ 8ರಂದು ಸಂಜೆ 6 ಗಂಟೆಗೆ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್