ಪುಷ್ಪ2 ಚಿತ್ರತಂಡಕ್ಕೆ ಹೊಸ ಸೇರ್ಪಡೆ; ಖಳನಾಗಿ ಮಿಂಚಲಿರುವ ತಮಿಳಿನ ಸ್ಟಾರ್‌ ನಟ

pushpa
  • ಪುಷ್ಪ2 ಚಿತ್ರೀಕರಣಕ್ಕೆ ನಡೆಯುತ್ತಿದೆ ಭರದ ಸಿದ್ಧತೆ
  • ಕಲಾವಿದರ ಹುಡುಕಾಟದಲ್ಲಿ ಬ್ಯುಸಿಯಾದ ಚಿತ್ರತಂಡ

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ‘ಪುಷ್ಪ‘ ಸಿನಿಮಾ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಚಿತ್ರತಂಡ 'ಪುಷ್ಪ-2' ಚಿತ್ರಕ್ಕೆ ಕೈ ಹಾಕಿದೆ. ಸದ್ಯ ಪುಷ್ಪ ಸಿನಿಮಾದ 2ನೇ ಭಾಗದ ಚಿತ್ರೀಕರಣದ ಕೆಲಸಗಳು ಆರಂಭವಾಗಿವೆ. ಇದೇ ಹೊತ್ತಿನಲ್ಲಿ ಚಿತ್ರಕ್ಕೆ ಹೊಸ ಕಲಾವಿದರ ಸೇರ್ಪಡೆಯೂ ಆಗುತ್ತಿದೆ.

ಕಳೆದ ವರ್ಷ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆದ 'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ತೆಲುಗಿನ ಖ್ಯಾತ ನಟ ಸುನಿಲ್, ಮಲಯಾಳಂನ ಸ್ಟಾರ್‌ ನಟ ಫಹಾದ್ ಫಾಸಿಲ್ ಕನ್ನಡದ ನಟ ಧನಂಜಯ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು.

ಇದೀಗ 'ಪುಷ್ಪ2' ಚಿತ್ರತಂಡಕ್ಕೆ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿಯಾಗಿದ್ದು, ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ 'ಪುಷ್ಪ' ಚಿತ್ರತಂಡವನ್ನು ಸೇರಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಮುಖ್ಯ ಖಳನ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ.  

ಈ ಸುದ್ದಿ ಓದಿದ್ದೀರಾ? ಕುತೂಹಲ ಮೂಡಿಸಿದ ಡಾರ್ಲಿಂಗ್ಸ್‌ ಟೀಸರ್‌; ಬಿಡುಗಡೆಗೆ ಸಜ್ಜಾದ ಆಲಿಯಾ ನಿರ್ಮಾಣದ ಚೊಚ್ಚಲ ಚಿತ್ರ

ಚಿತ್ರತಂಡಕ್ಕೆ ಕೇವಲ ಸ್ಟಾರ್‌ ನಟರ ಸೇರ್ಪಡೆ ಮಾತ್ರವಲ್ಲ. ಯುವ ಪ್ರತಿಭೆಗಳ ಹುಡುಕಾಟದಲ್ಲಿರುವ ಚಿತ್ರತಂಡ, ಇತ್ತೀಚೆಗೆ ತಿರುಪತಿಯಲ್ಲಿ ಆಡಿಶನ್‌ ಕೂಡ ಏರ್ಪಡಿಸಿತ್ತು. ಚಿತ್ತೂರ ಶೈಲಿಯ ತೆಲುಗು ಮಾತನಾಡುವವರಿಗೆ ಮಾತ್ರ ಆಡಿಶನ್‌ಗೆ ಅವಕಾಶ ಆಹ್ವಾನ ನೀಡಲಾಗಿತ್ತು.   

ಚಿತ್ರದ ಮೊದಲ ಭಾಗಕ್ಕೆ 'ಪುಷ್ಪ-ದಿ ರೈಸ್‌' ಎಂದು ಹೆಸರಿಟ್ಟಿದ್ದ ನಿರ್ದೇಶಕ ಸುಕುಮಾರ್‌ ಎರಡನೇ ಭಾಗಕ್ಕೆ 'ಪುಷ್ಪ- ದಿ ರೂಲ್‌' ಎಂಬ ಹೆಸರನ್ನು ಅಂತಿಮಗೊಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್