ಲಕ್ಕಿಮ್ಯಾನ್‌ ಟೀಸರ್‌ ಬಿಡುಗಡೆ; ದೇವರಾಗಿ ಬಂದ ಪುನೀತ್‌ ರಾಜ್‌ಕುಮಾರ್‌

puneeth rajkumar
  • ಗಮನ ಸೆಳೆಯುತ್ತಿದೆ ಪುನೀತ್‌, ಪ್ರಭುದೇವ ಡ್ಯಾನ್ಸ್‌
  • ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿದೆ ಬಹುನಿರೀಕ್ಷಿತ ʼಲಕ್ಕಿಮ್ಯಾನ್‌ʼ

ನಟ ಪುನೀತ್‌ ರಾಜ್‌ಕುಮಾರ್‌ ವಿಶೇಷ ಪಾತ್ರದಲ್ಲಿ ನಟಿಸಿರುವ ಡಾರ್ಲಿಂಗ್‌ ಕೃಷ್ಣ ಮುಖ್ಯಭೂಮಿಕೆಯ ಬಹುನಿರೀಕ್ಷಿತ ʼಲಕ್ಕಿಮ್ಯಾನ್‌ʼ ಸಿನಿಮಾದ ಟೀಸರ್‌ ಸೋಮವಾರ ಬಿಡುಗಡೆಯಾಗಿದೆ.

ಒಂದು ನಿಮಿಷದ ಟೀಸರ್‌ನಲ್ಲಿ ಪುನೀತ್‌ ದೇವರಾಗಿ ಕಾಣಿಸಿಕೊಂಡರೆ, ಕೃಷ್ಣ ಲವರ್‌ ಬಾಯ್‌ ಆಗಿ ಮಿಂಚಿದ್ದಾರೆ. ಇಬ್ಬರು ಪ್ರೇಯಸಿಯರ ನಡುವೆ ಸಿಕ್ಕು ಒದ್ದಾಡುವ ಕಥಾನಾಯಕನ ಪಾಡನ್ನು ಟೀಸರ್‌ನಲ್ಲಿ ಹಾಸ್ಯಮಯವಾಗಿ ತೋರಿಸಲಾಗಿದೆ. ಪುನೀತ್‌ ಮತ್ತು ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಚಿತ್ರದ 'ಲವ್‌ ಯು ಬಡ್ಡಿ' ಹಾಡಿಗೆ ಜೊತೆಯಾಗಿ ಹೆಜ್ಜೆ ಹಾಕಿರುವ ದೃಶ್ಯಗಳು ಕೂಡ ಟೀಸರ್‌ನಲ್ಲಿವೆ. 

 

ಸಾವಿಗೂ ಮುನ್ನ ಪುನೀತ್‌ ಅತಿಥಿ ಪಾತ್ರದಲ್ಲಿ ನಟಿಸಿದ ಕೊನೆಯ ಸಿನಿಮಾ 'ಲಕ್ಕಿಮ್ಯಾನ್‌'. ಹೀಗಾಗಿ ಈ ಸಿನಿಮಾ ಪುನೀತ್‌ ಅಭಿಮಾನಿಗಳ ಪಾಲಿಗೆ ತುಂಬಾ ವಿಶೇಷ ಎನ್ನಿಸಿಕೊಂಡಿದೆ. ಚಿತ್ರದಲ್ಲಿನ ದೇವರ ಪಾತ್ರಕ್ಕೆ ಪುನೀತ್‌ ಅವರ ಧ್ವನಿಯನ್ನೇ ಉಳಿಸಿಕೊಂಡಿದ್ದೇವೆ ಎಂದು ನಿರ್ದೇಶಕ ಎಸ್‌ ನಾಗೇಂದ್ರ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅತಿಹೆಚ್ಚು ಆದಾಯ ತೆರಿಗೆ ಪಾವತಿಸಿದ ರಜನಿಕಾಂತ್‌; ಗೌರವಿಸಿದ ತೆರಿಗೆ ಇಲಾಖೆ

ಡಾರ್ಲಿಂಗ್‌ ಕೃಷ್ಣ ಮತ್ತು ಸಂಗೀತ ಶೃಂಗೇರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಲಕ್ಕಿಮ್ಯಾನ್‌' ಚಿತ್ರವನ್ನು ಪ್ರಭುದೇವ ಅವರ ಸಹೋದರ, ನಟ, ನಿರ್ದೇಶಕ ನಾಗೇಂದ್ರ ಪ್ರಸಾದ್‌ ನಿರ್ದೇಶಿಸಿದ್ದಾರೆ. ಹಿರಿಯ ನಟ ಸುಂದರ್‌ ರಾಜ್‌, ಸಾಧು ಕೋಕಿಲಾ, ರಂಗಾಯಣ ರಘು, ನಾಗಭೂಷಣ್‌, ಸುಧಾ ಬೆಳವಾಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್