ಮಲಯಾಳಂ ನಟ ಶರತ್‌ ಚಂದ್ರನ್‌ ಅನುಮಾನಾಸ್ಪದ ಸಾವು

sarath chandran
  • ಕಂಠದಾನ ಕಲಾವಿದನಾಗಿಯೂ ಹೆಸರು ಮಾಡಿದ್ದ ಶರತ್‌
  • ಶರತ್‌ ಸಾವಿಗೆ ಸಂತಾಪ ಸೂಚಿಸಿದ ಆಂಥೋನಿ ವರ್ಗೀಸ್‌

ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಮಲಯಾಳಂ ನಟ ಶರತ್‌ ಚಂದ್ರನ್‌ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಶುಕ್ರವಾರ (ಜುಲೈ 29) ಶರತ್‌ ಅವರ ಮೃತದೇಹ ಪತ್ತೆಯಾಗಿದ್ದು, 37 ವರ್ಷದ ನಟನ ಸಾವಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ.  

ಮಲಯಾಳಂನ ಖ್ಯಾತ ನಟ ಆಂಥೋನಿ ವರ್ಗೀಸ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶರತ್‌ ಫೊಟೊವನ್ನು ಹಂಚಿಕೊಂಡು ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. 

ಮೂಲತಃ ಐಟಿ ಎಂಜಿನಿಯರ್‌ ಆಗಿರುವ ಶರತ್‌ ಕಂಠದಾನ ಕಲಾವಿದನಾಗಿ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. 2016ರಲ್ಲಿ ತೆರೆಕಂಡ ʼಅನೀಸ್ಯಾʼ ಸಿನಿಮಾದ ಮೂಲಕ ನಟನಾಗಿಯೂ ಗುರುತಿಸಿಕೊಂಡ ಶರತ್‌ ದುಲ್ಕರ್‌ ಸಲ್ಮಾನ್‌ ನಟನೆಯ ʼಸಿಐಎʼ, ʼಕೂಡೆʼ, ʼಒರು ಮೆಕ್ಸಿಕನ್‌ ಅಪಾರದಾʼ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.   

ಈ ಸುದ್ದಿ ಓದಿದ್ದೀರಾ? ಅಪ್ಪು ಅಗಲಿ 9 ತಿಂಗಳು; ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ಕುಟುಂಬಸ್ಥರು

2017ರಲ್ಲಿ ಮಲಯಾಳಂನ ಖ್ಯಾತ ನಿರ್ದೇಶಕ ಲಿಜೋ ಜೋಸ್‌ ಪಲ್ಲಿಶೇರಿ ನಿರ್ದೇಶನದಲ್ಲಿ ಮೂಡಿಬಂದಿದ್ದ  ʼಅಂಗಮಾಲಿ ಡೈರೀಸ್‌ʼ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಶರತ್‌ ಭಾರಿ ಜನಪ್ರಿಯತೆ ಗಳಿಸಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್