ಕುತೂಹಲ ಹೆಚ್ಚಿಸಿದ ಪೊನ್ನಿಯಿನ್‌ ಸೆಲ್ವನ್‌ ಟ್ರೈಲರ್‌

ponniyin selvan
  • ʼಬಾಹುಬಲಿʼ ಮೀರಿಸುವಂತಿದೆ ʼಪೊನ್ನಿಯಿನ್‌ ಸೆಲ್ವನ್‌ʼ ಮೇಕಿಂಗ್‌
  • ಕೆಲವೇ ಗಂಟೆಗಳಲ್ಲಿ 2 ಕೋಟಿಗೂ ಅಧಿಕ ವೀಕ್ಷಣೆ ಪಡೆದ ಟ್ರೈಲರ್‌

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ʼಪೊನ್ನಿಯಿನ್‌ ಸೆಲ್ವನ್‌ʼ ಸಿನಿಮಾದ ಟ್ರೈಲರ್‌ ಮಂಗಳವಾರ ಬಿಡುಗಡೆಯಾಗಿದೆ. ತೆಲುಗು, ತಮಿಳು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಅದ್ದೂರಿ ಟ್ರೈಲರ್‌ ಕೆಲವೇ ಗಂಟೆಗಳಲ್ಲಿ ಒಟ್ಟಾರೆಯಾಗಿ 2 ಕೋಟಿಗೂ ಅಧಿಕ ವೀಕ್ಷಣೆ ಪಡೆದು ಯುಟ್ಯೂಬ್‌ನಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ.

ಮೂರುವರೆ ನಿಮಿಷಗಳ ಟ್ರೈಲರ್‌ನಲ್ಲಿ ಚೋಳ ಸಾಮ್ರಾಜ್ಯದ ಗತ ವೈಭವ ಮತ್ತು ರಾಜ ಆದಿತ್ಯ ಕರಿಕಾಳನ್‌ ಆಳ್ವಿಕೆಯಲ್ಲಿ ನಡೆದ ಯುದ್ಧದ ದೃಶ್ಯಗಳನ್ನು ನಿರ್ದೇಶಕರು ಕುತೂಹಲಕಾರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚೋಳ ಸಾಮ್ರಾಜ್ಯದ ಪಟ್ಟಕ್ಕಾಗಿ ನಡೆಯುವ ಅಂತರ್ಯುದ್ಧದ ಸುತ್ತ ಈ ಚಿತ್ರ ಮೂಡಿ ಬಂದಿದೆ ಎಂಬುದನ್ನು ಟ್ರೈಲರ್‌ ಮೂಲಕ ನಿರ್ದೇಶಕರು ದಾಟಿಸುವ ಪ್ರಯತ್ನ ಮಾಡಿದ್ದಾರೆ. ʼಪೊನ್ನಿಯಿನ್‌ ಸೆಲ್ವನ್‌ʼ ಸಿನಿಮಾದ ಮೇಕಿಂಗ್‌ ತೆಲುಗಿನ 'ಬಾಹುಬಲಿ' ಸಿನಿಮಾವನ್ನೂ ಮೀರಿಸುವಂತಿದೆ ಎಂಬುದಕ್ಕೆ ಟ್ರೈಲರ್‌ನಲ್ಲಿ ಹಾದು ಹೋಗುವ ಕಡಲ ಕಿನಾರೆಯ ಮತ್ತು ಯುದ್ಧದ ದೃಶ್ಯಗಳು ಸಾಕ್ಷಿ ಒದಗಿಸುತ್ತವೆ. ಎ ಆರ್‌ ರೆಹಮಾನ್‌ ಅವರ ಹಿನ್ನೆಲೆ ಸಂಗೀತ ಟ್ರೈಲರ್‌ನ ರೋಚಕತೆಗೆ ಬಲ ತುಂಬಿದೆ ಎನ್ನಬಹುದು.

Eedina App

ಚೋಳ ಸಾಮ್ರಾಜ್ಯದ ಗತವೈಭವದ ಕುರಿತು ತಮಿಳಿನ ಖ್ಯಾತ ಸಾಹಿತಿ ಕಲ್ಕಿ ಕೃಷ್ಣಮೂರ್ತಿ ಬರೆದಿರುವ ʼಪೊನ್ನಿಯಿನ್‌ ಸೆಲ್ವನ್‌ʼ ಕಾದಂಬರಿಯನ್ನು ಆಧರಿಸಿ ಮಣಿರತ್ನಂ ಈ ಚಿತ್ರವನ್ನು ತೆರೆಗೆ ಅಳವಡಿಸಿದ್ದು, ಚೋಳರ ಪ್ರಮುಖ ರಾಜ ಆದಿತ್ಯ ಕರಿಕಾಳನ್‌ ಆಳ್ವಿಕೆಯಲ್ಲಿ ನಡೆದ ನೈಜ ಘಟನೆಗಳ ಸುತ್ತ ಈ ಚಿತ್ರ ಮೂಡಿ ಬಂದಿದೆ.

AV Eye Hospital ad

ತಮಿಳಿನ ಸ್ಟಾರ್‌ ನಟ ಚಿಯಾನ್‌ ವಿಕ್ರಮ್‌, ಚೋಳರ ರಾಜ ಆದಿತ್ಯ ಕರಿಕಾಳನ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ಐಶ್ವರ್ಯಾ ರೈ, ತಂಜಾವೂರಿನ ರಾಜಕುಮಾರಿ ಮತ್ತು ತ್ರಿಷಾ ಕೃಷ್ಣನ್‌ ಕುಂದವೈ ರಾಜಕುಮಾರಿಯಾಗಿ ಮಿಂಚಿದ್ದಾರೆ. ಶರತ್‌ ಕುಮಾರ್‌, ಕಾರ್ತಿ, ಜಯಂ ರವಿ, ಪ್ರಭು, ಪ್ರಕಾಶ್‌ ರಾಜ್‌, ಹುಲಿ ಕಿಶೋರ್‌ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.

ಈ ಸುದ್ದಿ ಓದಿದ್ದೀರಾ? ಲೈಗರ್‌ ಸಿನಿಮಾ ಸೋಲು | ಸಂಭಾವನೆ ಹಿಂತಿರುಗಿಸಿದರೇ ವಿಜಯ್‌ ದೇವರಕೊಂಡ?

ಅಂದಾಜು ₹500 ಕೋಟಿ ವೆಚ್ಚದ ʼಪೊನ್ನಿಯಿನ್‌ ಸೆಲ್ವನ್‌ʼ ಸಿನಿಮಾ ಎರಡು ಭಾಗಗಳಲ್ಲಿ ಸಿದ್ಧವಾಗುತ್ತಿದ್ದು, ಸದ್ಯ ಮೊದಲ ಭಾಗ ಬಿಡುಗಡೆಗೆ ಸಜ್ಜಾಗಿದೆ. ತಮಿಳು, ತೆಲುಗು, ಕನ್ನಡ ಸೇರಿ 5 ಭಾಷೆಗಳಲ್ಲಿ ಸಿದ್ಧವಾಗಿರುವ ಈ ʼಪ್ಯಾನ್‌ ಇಂಡಿಯಾʼ ಸಿನಿಮಾ ಸೆಪ್ಟೆಂಬರ್‌ 30ರಂದು ತೆರೆಗೆ ಬರಲಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app